ಸೆ.9 ರಿಂದ 15 ರ ತನಕ ನಮಸ್ತೆ ಜೆಸಿಐ ಸಪ್ತಾಹ -2022

0

ಪುತ್ತೂರು: ಪುತ್ತೂರು ಜೆಸಿಐಯಿಂದ ಈ ವರ್ಷ ನಮಸ್ತೆ ಜೇಸಿಐ ಸಪ್ತಾಹ -2022 ಕಾರ್ಯಕ್ರಮ ಸೆ.9 ರಿಂದ 15 ರ ತನಕ ನಡೆಯಲಿದ್ದು, 7 ದಿನವೂ ವಿವಿಧ ಮಾಹಿತಿ ಮತ್ತು ಸಮರ್ಪಣಾ ಸೇವಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಜೇಸಿಐ ಅಧ್ಯಕ್ಷ ಶಶಿರಾಜ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೆ. 9ರಂದು ಸಂಜೆ ಗಂಟೆ 5ಕ್ಕೆ ಜೇಸಿಐ ಮುಳಿಯ ಟ್ರೈನಿಂಗ್ ಹಾಲ್‌ನಲ್ಲಿ ನಮಸ್ತೆ ಜೇಸಿಐ ಸಪ್ತಾಹದ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಹಿಳಾ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಮತ್ತು ಮಹಿಳಾ ಉದ್ಯಮಿಗಳನ್ನು ಗೌರವಿಸಲಾಗುವುದು. ಪ್ರತಿಮಾ ಅಜಿತ್ ಹೆಗ್ಡೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಜೇಸಿಐ ವಲಯ ಉಪಾಧ್ಯಕ್ಷೆ ಸ್ವಾಜಿ ಜೆ ರೈ ಅವರು ತರಬೇತುದರರಾಗಿ ಭಾಗವಹಿಸಲಿದ್ದಾರೆ. ಮಹಿಳಾ ಸಾಧಕ ಉದ್ಯಮಿಗಳಾದ ದಾರಂದಕುಕ್ಕು ಮಂಗಳಾ ಹಾರ್ಡ್ವೇರ್ ಸಂಸ್ಥೆಯ ಮಾಲಕಿ ಮಹಾಲಕ್ಷ್ಮೀ ಕೆ, ಜನೌಷಧಿ ಕೇಂದ್ರದ ಅಧಿಕಾರಿ ಡಾ. ಅನಿಲಾ ದೀಪಕ್ ಶೆಟ್ಟಿ, ಎಸ್‌ಡಿಪಿ ರೆಮಿಡೀಸ್ ಸಂಸ್ಥೆಯ ನಿರ್ದೇಶಕಿ ರೂಪಾಲೇಖ ಪಾಣಾಜೆ ಅವರನ್ನು ಗೌರವಿಸಲಾಗುವುದು. ಸೆ.10ರಂದು ಬೆಳಿಗ್ಗೆ ಗಂಟೆ 10.30ಕ್ಕೆ ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದಾನ ಮತ್ತು ಮಧುಮೇಹ ತಪಾಸಣಾ ಶಿಬಿರ ನಡೆಯಲಿದೆ. ಇದೇ ಸಂದರ್ಭದಲ್ಲಿ ಫಲಾನುಭವಿ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ವಿತರಣೆ ನಡೆಯಲಿದೆ. ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಮಾಲಕ ಚೇತನ್ ಪ್ರಕಾಶ್ ಕಜೆ ಮತ್ತು ಜೇಸಿ ವಲಯ ಕೋಆರ್ಡಿನೇಟರ್ ರಶ್ಮೀ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೆ.11ರಂದು ಬೊಳುವಾರು ಹೊಟೇಲ್ ಉದಯಗಿರಿಯಿಂದ ದಿ ಪುತ್ತೂರುಕ್ಲಬ್ ತನಕ ಸೈಕಲ್ ಜಾಥಾ ಮತ್ತು ಸದಸ್ಯರಿಗ ಒಳಾಂಗಣ ಕ್ರೀಡಾಕೂಟ ನಡೆಯಲಿದೆ. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮತ್ತು ಕ್ರಿಸ್ಟೋಫರ್ ಸೈಕಲ್‌ನ ಮಾಲಕ ಮನೋಜ್ ಡಯಾಸ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೆ.12ರಂದು ದರ್ಬೆ ವೃತ್ತದಲ್ಲಿ ಪ್ಲಾಸ್ಟಿಕ್ ವಸ್ತುಗಳ ಕಡಿಮೆ ಬಳಕೆ ಮತ್ತು ಇಲೆಕ್ಟಾçನಿಕ್ಸ್ ತ್ಯಾಜ್ಯ ನಿರ್ವಾಹಣೆ ಕುರಿತು ತರಬೇತಿ, ಜಾಥಾ ಮತ್ತು ದರ್ಬೆ ಸುಬ್ರಹ್ಮಣ್ಯ ರಸ್ತೆ ವಿಭಜಕಗಳಲ್ಲಿ ಗಿಡಗಳ ಸಂರಕ್ಷಣೆ ನಡೆಯಲಿದೆ. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಮತ್ತು ಜೆಸಿಐ ಪಶುಪತಿ ಶರ್ಮ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೆ. 13ರಂದು ಮಧ್ಯಾಹ್ನ ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಮಕ್ಕಳ ರಕ್ಷಣಾ ಕಾನೂನು ಮಾಹಿತಿ ಕಾರ್ಯಕ್ರಮ ಮತ್ತು ಹಾನೆಸ್ಟಿ ಮಳಿಗೆಗೆ ಕೊಡುಗೆ ಕಾರ್ಯಕ್ರಮ ನಡೆಯಲಿದೆ. ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಮತ್ತು ಜೇಸಿಐ ಗೌತಮ್ ರೈ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೆ.14ರಂದು ಸಂಜೆ ಜೇಸಿಐ ಹಾಲ್‌ನಲ್ಲಿ ವ್ಯವಹಾರದ ಹೊಸ ಚಿಂತನೆಗೆ ಜೇಕಂ ಟೇಬಲ್ ಸದಸ್ಯರ ಸಭೆಯು ನಡೆಯಲಿದೆ. ಜೇಕಂ ಕೋಚ್ ಕೃಷ್ಣಮೋಹನ್ ಪಿ ಎಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸೆ. 15ರಂದು ಜೇಸಿಐ ಸಪ್ತಾಹದ ಸಮಾರೋಪ ಗ್ರೇಟ್ ಸೆಲೆಬರೇಶನ್ ಡೇ ಎಂಬ ಹೆಸರಿನಲ್ಲಿ ಸಂಜೆ ಜೇಸಿಐ ಮುಳಿಯ ಟ್ರೈನಿಂಗ್ ಹಾಲ್‌ನಲ್ಲಿ ನಡೆಯಲಿದೆ. ಭ್ರಷ್ಟಾಚಾರ ನಿಗ್ರಹದಳ ಇಲಾಖೆಯ ಪಶ್ಚಿಮ ವಲಯದ ಎಸ್ಪಿ ಸಿ.ಎ ಸೈಮನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಿ.ಎ ಸೈಮನ್ ಅವರು ಜೇಸಿಐ ಮಾಜಿ ಅಧ್ಯಕ್ಷ ಗೌತಮ್ ರೈ ಅವರಿಗೆ ಕಮಲ ಪತ್ರ ಪ್ರಶಸ್ತಿ ಮತ್ತು ರಮೇಶ್ ಕೆ.ವಿ ಅವರಿಗೆ ಟೂಬಿಪ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಶಶಿರಾಜ್ ರೈ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜೇಸಿಐ ಕಾರ್ಯದರ್ಶಿ ಮೋಹನ್, ನಮಸ್ತೆ ಪ್ರೋಜೆಕ್ಟ್ ಡೈರೆಕ್ಟರ್ ಕಾರ್ತಿಕ್ ಉಪಸ್ಥಿತರಿದ್ದರು.

ಸೈಕಲ್ ಜಾಥಾದಲ್ಲಿ ಸಾರ್ವಜನಿಕರಿಗೆ ಅವಕಾಶ
ಪರಿಸರದ ಅರಿವು ಮತ್ತು ಆರೋಗ್ಯ ಕಾಪಾಡುವ ಜಾಗೃತಿಯ ನಿಟ್ಟಿನಲ್ಲಿ ದಿ ಪುತ್ತೂರು ಕ್ಲಬ್, ಕ್ರಿಸ್ತೋಫರ್ ಸೈಕಲ್, ಲಹರಿ ಹೈ ಜೀನ್ಸ್ನ ಸಹಕಾರದೊಂದಿಗೆ ಸೆ.11ರಂದು ಬೆಳಿಗ್ಗೆ ನಡೆಯುವ ಸೈಕಲ್ ಜಾಥಾದಲ್ಲಿ ಸಾರ್ವಜನಿಕರಿಗೆ ಅವಕಾಶವಿದೆ. ಹಿರಿಯರು, ಕಿರಿಯರು ಜಾಥಾದಲ್ಲಿ ಭಾಗವಹಿಸಬಹುದು. ಜಾಥಾದಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಿದಲ್ಲಿ ಅವರಿಗೆ ಟೀ ಶರ್ಟ್ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು. ಸೈಕಲ್ ಜಾಥಾವು ಬೆಳಿಗ್ಗೆ ಗಂಟೆ 9ಕ್ಕೆ ಬೊಳುವಾರು ಹೋಟೆಲ್ ಉದಯಗಿರಿಯಲ್ಲಿ ಆರಂಭಗೊಂಡು ದರ್ಬೆ ಆಶ್ವಿನಿ ಸರ್ಕಲ್‌ಗೆ ತೆರಳಿ ಅಲ್ಲಿಂದ ದಬೆ ವೃತ್ತಕ್ಕೆ ಬಂದು ನೇರವಾಗಿ ದಿ ಪುತ್ತೂರು ಕ್ಲಬ್‌ನಲ್ಲಿ ಸಮಾರೋಪಗೊಳ್ಳುವುದು ಎಂದು ನಮಸ್ತೆ ಪ್ರೋಜೆಕ್ಟ್ ಡೈರೆಕ್ಟರ್ ಕಾರ್ತಿಕ್ ವಿವರಿಸಿದ್ದಾರೆ.

7 ದಿನದಲ್ಲಿ 15 ವಿವಿಧ ಮಾಹಿತಿ, ಸಮರ್ಪಣಾ ಕಾರ್ಯಕ್ರಮಗಳು
ಜೆಸೀಐ ಸಪ್ತಾಹದಲ್ಲಿ 7 ದಿನ ನಿತ್ಯ ಕಾರ್ಯಕ್ರಮದಲ್ಲಿ ಒಟ್ಟು 15 ಕಾರ್ಯಕ್ರಮಗಳು ಜೋಡಣೆಯಾಗಿದೆ. ಮಹಿಳಾ ಕೌಶಲ್ಯ ಅಭಿವೃದ್ದಿ ತರಬೇತಿ, ಮಹಿಳಾ ಉದ್ಯಮಿಗಳನ್ನು ಗೌರವಿಸುವುದು, ರಕ್ತದಾನ, ಮಧುಮೇಹ ತಪಾಸಣಾ ಶಿಬಿರ, ಫಲಾನುಭವಿ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿಗೆ ಸೈಕಲ್ ಜಾಥಾ, ಕ್ರೀಡಾಕೂಟ, ಪ್ಲಾಸ್ಟಿಕ್ ವಸ್ತುಗಳ ಕಡಿಮೆ ಬಳಕೆ ಜಾಗೃತಿ, ಇಲೆಕ್ಷ್ರಾನಿಕ್ ತ್ಯಾಜ್ಯ ನಿರ್ವಾಹಣೆ ತರಬೇತಿ, ಜಾಥಾ, ಮಕ್ಕಳಾ ರಕ್ಷಣಾ ಕಾನೂನು ಮಾಹಿತಿ, ಹಾನೆಸ್ಟಿ ಮಳಿಗೆಗೆ ಕೊಡುಗೆ, ವ್ಯವಹಾರದ ಹೊಸ ಚಿಂತನೆಗೆ ಜೇಕಂ ಟೇಬಲ್ ಸದಸ್ಯರ ಸಭೆ, ಕೊನೆಯ ದಿನ ಸಮಾರೋಪ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here