ಸಾಲ್ಮರದಲ್ಲಿ ಯೂತ್‌ಜೋಡೋ- ಬೂತ್ ಜೋಡೋ ಕಾರ್ಯಕ್ರಮ

0

ಪ್ರತೀ ಬೂತ್‌ಗಳಲ್ಲೂ ಪಕ್ಷವನ್ನು ಸಂಘಟಿಸುವ ಕೆಲಸ ನಿರಂತರ: ಲುಕ್ಮಾನ್ ಬಂಟ್ವಾಳ

ಪುತ್ತೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ನಲಪಾಡ್ ಅವರ ಆದೇಶದಂತೆ ಜಿಲ್ಲೆಯಾದ್ಯಂತ ಯೂತ್‌ಜೋಡೋ- ಬೂತ್ ಜೋಡೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರತೀ ಬೂತ್‌ಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಹೇಳಿದರು.‌

ಸಾಲ್ಮರದ ಜಿಡೆಕಲ್‌ನಲ್ಲಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ನಡೆದ ಯೂತ್ ಜೋಡೋ- ಬೂತ್ ಜೋಡೋ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಪ್ರತೀ ಬೂತ್‌ಗಳಲ್ಲಿ ಯುವ ಪಡೆಗಳನ್ನೇ ರಚನೆ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಬೂತ್‌ಗಳಲ್ಲಿ ಯುವ ಕಾಂಗ್ರೆಸ್ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ಪ್ರತೀ ಬೂತ್‌ಗಳಿಗೆ ತೆರಳಿ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯ ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿದೆ ಎಂದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಮಾತನಾಡಿ ಯುವಕರನ್ನು ಪಕ್ಷದತ್ತ ಆಕರ್ಷಣೆಗೊಳಿಸುವ ಕಾರ್ಯಕ್ರಮ ಉತ್ತಮವಾಗಿ ಮೂಡಿಬರಬೇಕಿದೆ. ಹೆಚ್ಚು ಹೆಚ್ಚು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಮೂಲಕ ಪಕ್ಷವನ್ನು ಬಲಪಡಿಸುವ ಕೆಲಸ ನಡೆಯಲಿ ಎಂದು ಹೇಳಿದರು.

ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಗಿರೀಶ್ ಆಳ್ವರವರು ಮಾತನಾಡಿ ಯೂತ್ ಜೋಡೋ- ಬೂತ್ ಜೋಡೋ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ, ಪುರಸಭಾ ಮಾಜಿ ಸದಸ್ಯರುಗಳಾದ ಇಸ್ಮಾಯಿಲ್ ಸಾಲ್ಮರ , ಇಸಾಕ್ ಸಾಲ್ಮರ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಮಾಜಿ ನಗರಸಭಾ ಸದಸ್ಯರುಗಳಾದ ರಾಬಿನ್ ತಾವ್ರೋ, ಅನ್ವರ್ ಕಾಸಿಂ, ಯೂಸು- ತಾರಿಗುಡ್ಡೆ, ರಹಮತ್ ಸಾಲ್ಮರ, , ನಗರ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಪುತ್ತೂರು ಯುವಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವೂಫ್ ಸಾಲ್ಮರ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಗಂಗಾಧರ ಎಲಿಕ, ಶಾನವಾಝ್ ಬಪ್ಪಳಿಗೆ, ತೌವೀದ್ ಸಾಲ್ಮರ, ಇರ್ಷಾದ್ ಕೆರೆಮೂಲೆ, ಜುನೈದ್ ಕೆರೆಮೂಲೆ, ರಶೀದ್‌ಮುರ, ಸನದ್ ಯೂಸುಫ್, ಶರೀಫ್ ಬಲ್ನಾಡ್, ಅಭಿಷೇಕ್ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ,ಶರತ್ ಸಿದ್ಯಾಳ, ಹರೀಶ್ ಪಕ್ಕಳ, ಶಿವಾನಂದ ಸಿದ್ಯಾಳ, ವರ್ಗಿಸ್ ಕೆರೆಮೂಲೆ, ಆಸ್ಕರ್ ಕೆರೆಮೂಲೆ, ಶರೀಫ್ ಕೆರೆಮೂಲೆ, ಸತ್ತಾರ್ ಕೆರೆಮೂಲೆ, ಶಾಕಿರ್ ಊರಮಾಲ್, ನಾಸಿರ್ ಕರೆಮೂಲೆ, ಮುಂಡಪ್ಪ ಜಿಡೆಕಲ್ಲು, ಸಂತು ಕೆರೆಮೂಲೆ, ಸಂತೋಷ್, ಸಂಶೀರ್, ಭವಿತ್, ಪ್ರಖ್ಯಾತ್, ಮಣಿಕಂಠ, ಕಾಂತಿಪ್ರಕಾಶ್ ಉಪಸ್ತಿತರಿದ್ದರು. ಮೌರಿಶ್ ಕುಟಿನ್ಹಾ ಸ್ವಾಗತಿಸಿ, ಹನೀಫ್ ಪುಂಚತ್ತಾರ್ ವಂದಿಸಿದರು.

LEAVE A REPLY

Please enter your comment!
Please enter your name here