ಇಡ್ಕಿದು ಸೇವಾ ಸಹಕಾರಿ ಸಂಘದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘವು 2021-22 ನೇ ಸಾಲಿನಲ್ಲಿ ರೂ.432 ಕೋಟಿ ವ್ಯವಹಾರ ನಡೆಸಿ ರೂ.1,25,15,450.36 ಲಾಭಗಳಿಸಿದೆ. ಲಾಭಾಂಶದಲ್ಲಿ ಶೇ.11 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಸೆ.8ರಂದು ಉರಿಮಜಲುನಲ್ಲಿರುವ ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರ್ಷಾಂತ್ಯಕ್ಕೆ ಸಂಘದಲ್ಲಿ 3914 ಸದಸ್ಯರಿದ್ದು ರೂ.3,78,97,480 ಪಾಲು ಬಂಡವಾಳವಿದೆ. ರೂ.5,06,18,986.03 ವಿವಿಧ ನಿಽ, ರೂ.87.60ಕೋಟಿ ಠೇವಣಾತಿಗಳಿವೆ. ದುಡಿಯುವ ಬಂಡವಾಳ ರೂ. 110 ಕೋಟಿ ಹೊಂದಿದೆ. ಸದಸ್ಯರಿಗೆ ವಿತರಿಸಿದ ಸಾಲಗಳ ಪೈಕಿ ಶೇ.92 ವಸೂಲಾತಿಯಾಗಿದೆ. ಬ್ಯಾಂಕೇತರ ವ್ಯವಹಾರ ಹಾಗೂ ಸೇವಾ ಕಾರ್ಯಗಳಲ್ಲಿ ರೂ.5,89,78,744.63 ವ್ಯವಹಾರ ಮಾಡಿ ರೂ.27,88,517.35 ಲಾಭ ಗಳಿಸಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ.

ಸಾಮಾಜಿಕ ಕಳಕಳಿಯ ಕೆಲಸಗಳನ್ನು ಸಹಕಾರಿಯು ನಿರಂತರವಾಗಿ ಮಾಡುತ್ತಾ ಬರುತ್ತಿದೆ. ವಿವಿಧೆಡೆ ಆಸ್ಪತ್ರೆಗಳಲ್ಲಿ ವೃತ್ತಿ ನಿರ್ವಹಿಸುತ್ತಿರುವ ಗ್ರಾಮದ 24 ವೈದ್ಯರು ನಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಸಹಕಾರವನ್ನು ನೀಡುತ್ತಿದ್ದಾರೆ. ಜನರ ಆರೋಗ್ಯದ ಹಿತದೃಷ್ಟೀಯಿಂದ ಪ್ರಾರಂಭಿಸಲಾದ ಆರೋಗ್ಯಾಮೃತ ಯೋಜನೆಯಿಂದ ಹಲವು ಬಡವರು ಪ್ರಯೋಜನ ಪಡೆದುಕೊಂಡಿದ್ದಾರೆ. ಅದೇ ರೀತಿ ವಿದ್ಯಾಮೃತ ಯೋಜನೆಯಿಂದ ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ಬಾರಿ ಹತ್ತು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸಹಕಾರ ನೀಡಲಾಗಿದೆ. ಉದ್ಯೋಗಾಮೃತ ಯೋಜನೆಯಿಂದಲೂ ಹಲವರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ನಮ್ಮಲ್ಲಿ ನಡೆದ ಉದ್ಯೋಗ ನೈಪುಣ್ಯ ಶಿಬಿರದಿಂದ ತರಬೇತಿ ಪಡೆದ ಹಲವಾರು ಫಲಾನುಭವಿಗಳು ಇದೀಗ ಸ್ವ ಉದ್ಯೋಗವನ್ನು ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಇನ್ನೂ ಹಲವಾರು ಸಮಾಜಿಕ ಕಳಕಳಿಯ ಯೋಜನೆಯನ್ನು ಮಾಡುವ ಯೋಜನೆ ನಮ್ಮಲ್ಲಿದೆ ಎಂದು ಅಧ್ಯಕ್ಷರು ಹೇಳಿದರು.

ಸನ್ಮಾನ: ಸಂಘದ ಹಿರಿಯ ಸದಸ್ಯರಾದ ಕೊರಗಪ್ಪ ಗೌಡ ಕೊಪ್ಪಳ, ತನಿಯ ಮೂಲ್ಯ ಕೋಲ್ಪೆ, ವೆಂಕಟರಮಣ ಭಟ್ ಸೂರ್ಯ, ಶ್ರೀಧರ ಕೆ. ಉರಿಮಜಲು, ಸಂಜೀವ ಶೆಟ್ಟಿ ಕಂಟ್ರಮಜಲು, ಗಿರಿಯಪ್ಪ ಸಪಲ್ಯ ಕೋಲ್ಪೆ, ಅಬ್ದುಲ್ ಹಮೀದ್ ಮಿತ್ತೂರು, ಸಂಜೀವ ಕೂವತ್ತಿಲ, ಪೌಲ್ ಡಿಸೋಜ, ಸುಬ್ಬಣ ಕಂಬಳಿ ಕನಕಮಜಲು, ವಿದ್ಯುತ್ ಇಲಾಖೆಯ ಪವರ್‌ಮ್ಯಾನ್‌ಗಳಾದ ರವಿ ವಾಲ್ಟರ್ ದಿಸೋಜ, ಚಂದಪ್ಪ ಪೂಜಾರಿ, ಸಜಾನಂದ ಹಿರೆಮಠ್, ಚಂದ್ರಶೇಖರ ನಾಯ್ಕ್, ರಾಮಚಂದ್ರ ಗೌಡ, ಪ್ರಶಾಂತ್‌ರವರನ್ನು ಗೌರವಿಸಲಾಯಿತು. ಬಳಿಕ ವಿದ್ಯಾಮೃತ ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳಿಗೆ ಧನಸಹಾಯ ನೀಡಲಾಯಿತು. ಹೆಚ್ಚು ಅಂಕಗಳನ್ನು ಗಳಿಸಿದ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವ್ಯಾಪಾರ ವಿಭಾಗದಲ್ಲಿ ಅತೀ ಹೆಚ್ಚು ವ್ಯವಹಾರ ನಡೆಸಿದ ಗ್ರಾಹಕರನ್ನು ಗೌರವಿಸಲಾಯಿತು. 2021-22 ನೇ ಸಾಲಿನಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ವ್ಯಾಪಾರ ವಿಭಾಗದಲ್ಲಿ ಅತೀ ಹೆಚ್ಚು ವ್ಯಾಪಾರ ಮಾಡಿದವರಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. 2021-22 ನೇ ಸಾಲಿನಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ಕ್ಯಾಂಪ್ಕೋ ವಿಭಾಗದಲ್ಲಿ ಹೆಚ್ಚು ವಹಿವಾಟು ಮಾಡಿದ ಸದಸ್ಯರನ್ನು ಗೌರವಿಸಲಾಯಿತು. ಹಾಗೂ ನವೋದಯ ಸ್ವಸಹಾಯಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಿಲಾಯಿತು.

 

ಸಭೆಯಲ್ಲಿ ಸಾವಿರಕ್ಕಿಂತಲೂ ಅಧಿಕ ಸದಸ್ಯರು ನೆರೆದಿದ್ದು, ಪ್ರಸ್ತುತ ಆಡಳಿತ ಮಂಡಳಿಯ ಸಾಮಾಜಿಕ ಕಳಕಳಿಯ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.

ನಿರ್ದೇಶಕರಾದ ನಾರಾಯಣ ನೇರ್ಲಾಜೆ, ಪ್ರವೀಣ್ ಕುಮಾರ್ ಕೊಪ್ಪಲ, ಜಯಂತ ಡಿ. ದರ್ಬೆ, ಸುಂದರ ಪಿ.ಪಾಂಡೇಲು, ಶಿವಪ್ರಕಾಶ್ ಕೆ.ವಿ. ಕೂವೆತ್ತಿಲ, ಜನಾರ್ದನ ಪೂಜಾರಿ ಕಾರ್ಯಾಡಿ, ವಸಂತ ಉರಿಮಜಲು, ಶೇಖರ ನಾಯ್ಕ್ ಅಳಕೆಮಜಲು, ನಳಿನಿ ಪೆಲತ್ತಿಂಜ, ವಿಜಯಲಕ್ಷ್ಮಿ ಪಿಲಿಪ್ಪೆ, ರತ್ನ ಸೇಕೆಹಿತ್ತಿಲು, ವೃತ್ತಿಪರ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಎಂ. ಮಿತ್ತೂರು ಪಡೀಲ್ ಮೈಕೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರತ್ನಾವತಿ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಽಕಾರಿ ಈಶ್ವರ್ ನಾಯ್ಕ್ ಎಸ್. ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ರಾಮ್ ಭಟ್ ನೀರಪಳಿಕೆ ವಂದಿಸಿದರು. ಸಿಬ್ಬಂದಿಗಳಾದ ಈಶ್ವರ ಕುಲಾಲ್, ನಾಗೇಶ್ ಸಹಕರಿಸಿದರು.

ಸದಸ್ಯರ ಸಹಕಾರಕ್ಕೆ ಅಭಾರಿಯಾಗಿದ್ದೇವೆ

ಸದಸ್ಯರೆಲ್ಲರೂ ಮುಕ್ತಮನಸ್ಸಿನಿಂದ ನೀಡುವ ಸಲಹೆಗಳಿಗೆ ನಾವು ಸದಾಬದ್ದರಾಗಿದ್ದೇವೆ. ಅವೆಲ್ಲವನ್ನು ನಾವು ಚರ್ಚಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನ ಮಾಡುತ್ತೇವೆ. ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಸುಂದರ ಶತಾಮೃತ ಕಟ್ಟಡ ನಿರ್ಮಾಣವಾಗಲು ನಮ್ಮ ಸದಸ್ಯರ ಸಹೃದಯವೇ ಕಾರಣ. ನಿಮ್ಮೆಲ್ಲರ ಸಲಹೆ ಸೂಚನೆಯಂತೆ ಕೆಲಸ ನಿರ್ವಹಿಸಲಾಗುವುದು. ನಮ್ಮ ಸಂಸ್ಥೆ ಎನ್ನುವ ಅಭಿಮಾನವಿಟ್ಟು ಎಲ್ಲರು ಸಹಕಾರ ನೀಡಿ ಸಂಘದ ಅಭಿವೃದ್ದಿಗೆ ಸಹಕರಿಸಿ.

ಸುಧಾಕರ ಶೆಟ್ಟಿ ಬೀಡಿನಮಜಲು
ಅಧ್ಯಕ್ಷರು ಇಡ್ಕಿದು ಸೇವಾಸಹಕಾರಿ ಸಂಘ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.