ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಚೇರಿ ಮತ್ತು ವಿಟ್ಲದಲ್ಲಿ ಶಾಖಾ ಕಚೇರಿ ಹೊಂದಿದ್ದು ಉತ್ತಮವಾಗಿ ವ್ಯವಹಾರ ನಡೆಸುತ್ತಿರುವ ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಘವು ವಷಾಂತ್ಯಕ್ಕೆ ರೂ. 15,00,360 ಲಾಭ ಗಳಿಸಿದೆ. ಲಾಭವನ್ನು ಉಪ ನಿಬಂಧನೆಯಂತೆ ಹಂಚಲಾಗಿದ್ದು, ಸದಸ್ಯರ ಅನುಮತಿ ಪಡೆದು ಶೇ.10ಡಿವಿಡೆಂಡ್ ನೀಡಲಾಗುವುದು ಎಂದು ಘೋಷಣೆ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರು ಘೋಷಣೆ ಮಾಡಿದರು.
ಪುತ್ತೂರು ಕೆ.ಪಿ.ಕಾಂಪ್ಲೆಕ್ಸ್ನಲ್ಲಿ ಸಂಘದ ಕೇಂದ್ರ ಕಚೇರಿಯ ಬಳಿಯ ಸಭಾಂಗಣದಲ್ಲಿ ಸೆ.11 ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. 2020-21ನೇ ಸಹಕಾರಿ ವರ್ಷದ ಅಂತ್ಯದಲ್ಲಿ 2298 ಮಂದಿ ಇದ್ದ ಸದಸ್ಯರ ಸಂಖ್ಯೆ 2021-22ನೇ ವರ್ಷದ ಅಂತ್ಯಕ್ಕೆ 210 ಸದಸ್ಯರು ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ಕೆಲವರು ಸದಸ್ಯತ್ವ ಹಿಂಪಡೆದರು ಒಟ್ಟು 2493 ಮಂದಿ ಸದಸ್ಯರು ಸಂಘದಲ್ಲಿ ಇದ್ದಾರೆ. ಠೇವಣಿಯಲ್ಲೂ ಸಂಘ ಉತ್ತಮ ವ್ಯವಹಾರ ನಡೆಸುತಿದೆ ಎಂದ ಅವರು ಸಂಘದ ಒಟ್ಟು ವ್ಯವಹಾರದಿಂದ ಬಂದಿರುವ ಲಾಭಕ್ಕೆ ಸಂಬಂಧಿಸಿ ಶೇ.10 ಡಿವಿಡೆಂಡ್ ಸಂಘದ ಸದಸ್ಯರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮಂಜುನಾಥ್ ವಾರ್ಷಿಕ ವರದಿ ಸೇರಿದಂತೆ ವಿವಿಧ ನಿಯಮಾವಳಿಗಳನ್ನು ಸಭೆಗೆ ಮಂಡಿಸಿದರು. ಸದಸ್ಯರಾದ ಬಿ.ಟಿ.ನಾರಾಯಣ ಭಟ್, ನಲ್ಕ ಗೋಪಾಲಕೃಷ್ಣ ಆಚಾರ್ಯ, ಫ್ರಾನ್ಸಿಸ್ ಲೋಬೊ, ಶ್ರೀಧರ್, ಜಿನ್ನಪ್ಪ ಗೌಡ ಮತ್ತಿತರರು ಸಲಹೆ ಸೂಚನೆ ನೀಡಿದರು. ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರಾದ ಶಕುಂತಳಾ ಟಿ ಶೆಟ್ಟಿ, ಕೆ.ಸಂಜೀವ ನಾಯಕ್, ಗಂಗಾರತ್ನ ವಿ ರೈ, ಜಾನ್ ಡಿ ಸೋಜ, ರಘುರಾಮ ರೈ, ವಿಶಾಲ್ ರೈ ಎಂ, ಬಿ.ನಾರಾಯಣ ನಾಯ್ಕ, ಸರಸ್ವತಿ ಇ ಭಟ್, ಚಿದಾನಂದ ಸುವರ್ಣ, ವಿಶ್ವನಾಥ ರೈ ಎಂ.ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಮಿತಾ ಎಂ ಪ್ರಾರ್ಥಿಸಿದರು. ಸಂಘದ ಗೌರವ ಸಲಹೆಗಾರ ಬಾಲಕೃಷ್ಣ ಬೋರ್ಕರ್ ಸ್ವಾಗತಿಸಿ, ಲೋಕೇಶ್ ಹೆಗ್ಡೆ ವಂದಿಸಿದರು. ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ವಿಟ್ಲ ಶಾಖಾ ಮೆನೇಜರ್ ಲಕ್ಷ್ಮಿರಾಜ್, ಪುತ್ತೂರು ಮತ್ತು ವಿಟ್ಲ ಶಾಖೆಯ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸ್ಥಾಪಕರಾಗಿದ್ದ ಮಾಜಿ ಶಾಸಕ ಉರಿಮಜಲು ರಾಮ ಭಟ್ ಮತ್ತು ಸಂಘದ ನಿರ್ದೇಶಕರಾದ ರಾಮಚಂದ್ರ ಗೌಡ ಮತ್ತು ಕೃಷ್ಣಪ್ಪ ಪೂಜಾರಿ ಅವರ ನಿಧನದ ಹಿನ್ನೆಲೆಯಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಹಾಸಭೆಯ ಆರಂಭದಲ್ಲಿ ನೆರವೇರಿಸಲಾಯಿತು.