ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರದ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ಗೆ `ಕಲೆಮನೆ ವಾರ್ಷಿಕ ಪ್ರಶಸ್ತಿ’ ಪ್ರದಾನ

0

ಪುತ್ತೂರು:ಮೈಸೂರಿನ ಕುಮಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್‌ನ ಪ್ರಥಮ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸೆ.10ರಂದು ಮೈಸೂರಿನ ಕಲೆಮನೆ ಸಭಾಂಗಣದಲ್ಲಿ ಎರಡು ದಿನಗಳ `ನಿರಂತರ ಕಲೆಮನೆ ಉತ್ಸವ’ ಆರಂಭಗೊಂಡಿತು.ಈ ಸಂದರ್ಭ ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರದ ನಿರ್ದೇಶಕಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರಿಗೆ ಪ್ರತಿಷ್ಠಿತ `ಕಲೆಮನೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಮಿಸ್ ಇಂಡಿಯನ್ ಯೂನಿವರ್ಸ್ ಡಾ|ಹೇಮಮಾಲಿನಿ ಲಕ್ಷ್ಮಣ್ ಹಾಗೂ ಮೈಸೂರಿನ ರೋಟರಿ ಕ್ಲಬ್ ಪಂಚಶೀಲ ಇದರ ಅಧ್ಯಕ್ಷೆ ರಚನಾ ನಾಗೇಶ್ ಪ್ರಶಸ್ತಿ ಪ್ರದಾನ ಮಾಡಿದರು.


ನೃತ್ಯ ಕ್ಷೇತ್ರದಲ್ಲಿನ ವಿವಿಧ ಸಾಧನೆಗಾಗಿ ವಿದುಷಿ ಶಾಲಿನಿ ಆತ್ಮಭೂಷಣ್ ಸಹಿತ ರಾಜ್ಯದ ವಿವಿಧ ವಿಭಾಗಗಳ ಒಂಭತ್ತು ಮಂದಿ ಭರತನಾಟ್ಯ ನೃತ್ಯಗುರುಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮೈಸೂರಿನ ಕುಮಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಸ್ಥಾಪಕ ಕಾರ್ಯದರ್ಶಿ ಪ್ರೊ|ಡಾ.ಕೆ.ಕುಮಾರ್, ಅಧ್ಯಕ್ಷೆ ಡಾ.ಜಿ.ಮಾಲತಿ, ಕಾರ್ಯದರ್ಶಿ ವಿದುಷಿ ಕೆ.ಎಂ.ನಿಧಿ,ವಿದುಷಿ ಕೆ.ಎಂ.ಲೇಖಾ ಮತ್ತಿತರರಿದ್ದರು.ಬಳಿಕ ನೃತ್ಯೋಪಾಸನಾ ಕಲಾ ಕೇಂದ್ರದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ನೃತ್ಯಗುರುಗಳು ಹಾಗೂ ಅವರ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಟ್ಟಿತು.

LEAVE A REPLY

Please enter your comment!
Please enter your name here