ರಾಮಕೃಷ್ಣ ಪುತ್ತೂರು ಯುವ ಇಂಟರ್‍ಯಾಕ್ಟ್ ಕ್ಲಬ್ ಉದ್ಘಾಟನೆ

0

ನಾಯಕತ್ವಗುಣ ಬೆಳೆಯಲು ಸಹಕಾರಿ- ಹೇಮನಾಥ ಶೆಟ್ಟಿ
ಉತ್ತಮ ಅವಕಾಶ-ಜಗಜೀವನ್‌ದಾಸ್ ರೈ
ರೋಟರಿಯಿಂದ ಒಳ್ಳೆಯ ಅವಕಾಶ- ಹರ್ಷಕುಮಾರ್ ರೈ
ವಿದ್ಯಾರ್ಥಿ ದೆಸೆಯಿಂದ ನಾಯಕತ್ವ- ರಾಜೇಶ್ವರಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ರಾಮಕೃಷ್ಣ ಪುತ್ತೂರು ಯುವ ಇಂಟರ್‍ಯಾಕ್ಟ್ ಕ್ಲಬ್ ಇದರ ಉದ್ಘಾಟನೆಯು ಸೆ. 10 ರಂದು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಜರಗಿತು.


ಜಿಲ್ಲಾ ಇಂಟೆರ್‍ಯಾಕ್ಟ್ ಕ್ಲಬ್ ಪ್ರತಿನಿಧಿ ಕೆ.ತನ್ವಿ ಶೆಣೈರವರು ನೂತನವಾಗಿ ರಚಿಸಲಾದ ರಾಮಕೃಷ್ಣ ಪುತ್ತೂರು ಯುವ ಇಂಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ಶ್ರೇಯಾ ರೈ, ಕಾರ್‍ಯದರ್ಶಿ ಅದಿತ್ಯ ಗೌಡ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣವನ್ನು ನೇರವೇರಿಸಿ, ಮಾತನಾಡಿ ವಿದ್ಯಾರ್ಥಿ ಜೀವನ ಎಂಬುದು ಅತ್ಯಂತ ಅಮೂಲ್ಯವಾದ್ದು, ಈ ಸಮಯದಲ್ಲಿ ನಾಯಕತ್ವ ಮತ್ತು ಸಮಾಜ ಸೇವೆಯನ್ನು ಮಾಡುವ ಕಾಯಕದಲ್ಲಿ ಭಾಗಿಗಳಾಗಬೇಕು, ಈ ನಿಟ್ಟಿನಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಡಶಾಲೆಯ ವಿದ್ಯಾರ್ಥಿಗಳ ನೇತ್ರತ್ವದಲ್ಲಿ ಆರಂಭಗೊಂಡ ರಾಮಕೃಷ್ಣ ಪುತ್ತೂರು ಯುವ ಇಂಟರ್‍ಯಾಕ್ಟ್ ಕ್ಲಬ್ ಯಶಸ್ಸಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ನಾಯಕತ್ವಗುಣ ಬೆಳೆಯಲು ಸಹಕಾರಿ- ಕಾವು ಹೇಮನಾಥ ಶೆಟ್ಟಿ
ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸಾಧಕರಾಗಿ ಹೆಸರು ಪಡೆದಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಲ್ಲಿ ನಾಯಕತ್ವಗುಣವನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕಾರ್‍ಯವನ್ನು ಮಾಡಲು ಮತ್ತಷ್ಟು ಪ್ರೇರಣೆ ನೀಡಲು ಯುವ ಇಂಟರ್‍ಯಾಕ್ಟ್ ಕ್ಲಬ್ ಆರಂಭವಾಗಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.

ಉತ್ತಮ ಅವಕಾಶ-ಜಗಜೀವನ್‌ದಾಸ್ ರೈ
ರೋಟರಿ ಕ್ಲಬ್ ೫ ರ ಆಸಿಸ್ಟೆಂಟ್ ಗರ್ವನರ್ ಚಿಲ್ಮೆತಾರು ಜಗಜೀವನ್‌ದಾಸ್ ರೈ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವನ್ನು ನೀಡುವ ಮೂಲಕ ಅವರಲ್ಲಿ ಇರುವ ಪ್ರತಿಭೆಯ ಬೆಳವಣಿಗೆಗೆ ಸಹಕಾರವನ್ನು ನೀಡಬೇಕು ಎಂದು ಹೇಳಿದರು.

ರೋಟರಿಯಿಂದ ಒಳ್ಳೆಯ ಅವಕಾಶ- ಹರ್ಷಕುಮಾರ್ ರೈ
ರೋಟರಿ ವಲಯ ಸೇನಾನಿ ಹರ್ಷಕುಮಾರ್ ರೈ ಮಾಡಾವುರವರು ಮಾತನಾಡಿ ರೋಟರಿ ಸಂಸ್ಥೆಯಿಂದ ಸಮಾಜಕ್ಕೆ ಉತ್ತಮ ಸೇವೆಗಳು ದೊರೆಯುತ್ತಿದ್ದು, ವಿದ್ಯಾರ್ಥಿ ಜೀವನದಲ್ಲಿ ಇಂಥ ಸಂಘಟನೆಯ ಮೂಲಕ ಕೆಲಸ ಮಾಡುವ ಭಾಗ್ಯ ಬಂದಿರುವುದು ಸಂತಸದ ವಿಚಾರವಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಇಂಟರ್‍ಯಾಕ್ಟ್ ಕ್ಲಬ್ ಆರಂಭಗೊಂಡಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.

ವಿದ್ಯಾರ್ಥಿ ದೆಸೆಯಿಂದ ನಾಯಕತ್ವ- ರಾಜೇಶ್ವರಿ
ಅಧ್ಯಕ್ಷತೆ ವಹಿಸಿದ್ದ ರೋಟರಿ ಯುವ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಮಾತನಾಡಿ ವಿದ್ಯಾರ್ಥಿ ದಸೆಯಿಂದಲೇ ನಾಯಕತ್ವ ಬೆಳೆಯಲು ರೋಟರಿ ಸಂಸ್ಥೆಯು ಪ್ರೋತ್ಸಾಹವನ್ನು ನೀಡುತ್ತಿದೆ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಸಂದಭೋಚಿತವಾಗಿ ಮಾತನಾಡಿದರು.ರಾಮಕೃಷ್ಣ ಪುತ್ತೂರು ಯುವ ಇಂಟರ್‍ಯಾಕ್ಟ್ ಕ್ಲಬ್‌ನ ಸಂಯೋಜಕರಾದ ಸುನೀತಾ, ರೋಟರಿ ಯೂತ್ ಸರ್ವಿಸ್ ನಿರ್ದೇಶಕ ಸುದರ್ಶನ್ ರೈ, ರೋಟರಿ ಯುವ ಕಾರ್‍ಯದರ್ಶಿ ಅಶ್ವಿನಿ ಕೃಷ್ಣ ಮುಳಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಯುವದ ಪೂರ್ವಾಧ್ಯಕ್ಷ ರುಗಳಾದ ರತ್ನಾಕರ್ ರೈ, ನರಸಿಂಹ ಪೈ, ಚೇತನ್ ಪ್ರಕಾಶ್, ಭರತ್ ಪೈ, ಕನ್ನಡ ಸಾಹಿತ್ಯ ಪರಿತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ರೋಟರಿ ಜಿ.ಎಸ್.ಕೆ ಪ್ರಮೀಳಾ ರಾವ್, ಪೂರ್ವ ಆಸ್ಟಿಸ್ಟೆಂಟ್ ಗರ್ವನರ್ ಆಸ್ಕರ್ ಆನಂದ್, ರೋಟರಿ ಯುವದ ಸದಸ್ಯರಾದ ಅಭಿಷ್, ವಿನೀತ್ ಶೆಣೈ, ತ್ರಿವೇಣಿ ಗಣೇಶ್‌ರವರಯಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here