ಪುತ್ತೂರು: ಪುತ್ತೂರು ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸೆ.29 ಮತ್ತು 30ರಂದು ಬಪ್ಪಳಿಗೆ ಅಂಬಿಕಾ ಕೇಂದ್ರೀಯ ವಿದ್ಯಾಲಯದಲ್ಲಿ ನಡೆಯಲಿದೆ. ’ಸಾಹಿತ್ಯ ಪರಿಷತ್ತಿನ ನಡಿಗೆ ಯುವಜನತೆಯ ಕಡೆಗೆ’ ಎಂಬ ಘೋಷವಾಕ್ಯ ದೊಂದಿಗೆ ನಡೆಯುವ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕವನ ಹಾಗೂ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯು, ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ, ಪಿಯುಸಿ ವಿಭಾಗ, ಪದವಿ ವಿಭಾಗ, ಸ್ನಾತಕೋತ್ತರ ವಿಭಾಗದಲ್ಲಿ ನಡೆಯಲಿದೆ. ಕವನಗಳು 16 ಸಾಲನ್ನು ಮೀರಬಾರದು, ಒಬ್ಬರಿಗೆ ಒಂದು ಕವನಕ್ಕೆ ಮಾತ್ರ ಅವಕಾಶ, ಜಾತಿ, ಧರ್ಮನಿಂದನೆ ಇರಕೂಡದು, ನಿಮಗಿಷ್ಟವಾದ ಯಾವುದೇ ವಿಷಯ ಆಯ್ಕೆಮಾಡಿಕೊಳ್ಳಬಹುದು. ಕಥಾ ಸ್ಪರ್ಧೆಯ ನಿಯಮ, 200 ಪದ ಮೀರಬಾರದು, ಜಾತಿ ಧರ್ಮ ನಿಂದನೆ ಇರಕೂಡದು, ನಿಮಗಿಷ್ಟವಾದ ಕಥೆಯನ್ನು ರಚಿಸಬಹುದು. ಈ ಎರಡು ಸ್ಪರ್ಧೆಗಳು ಪುತ್ತೂರು ತಾಲೂಕಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ. ಆಸಕ್ತರು 50 ಪದ ಮೀರದಂತೆ ತಮ್ಮ ಕಿರು ಪರಿಚಯ, ವಾಟ್ಸಾಪ್ ಸಂಖ್ಯೆ, ಹಾಗೂ ಪ್ರಸ್ತುತಪಡಿಸುವ ಬರಹಗಳನ್ನು ಕವನ ಹಾಗೂ ಕಥಾ ಸ್ಪರ್ಧೆಯ ಸಂಯೋಜಕಿ ಆಶಾ ಬೆಳ್ಳಾರೆ ಅವರ 9480250101 ಈ ಸಂಖ್ಯೆಗೆ ವಾಟ್ಸಪ್ ಮೂಲಕ ಸೆ. 23 ರ ಒಳಗಾಗಿ ಕಳುಹಿಸಿಕೊಡಬೇಕು. ವಿಜೇತರಿಗೆ ಸಮ್ಮೇಳನದಲ್ಲಿ ಪ್ರಶಸ್ತಿ ಪತ್ರದದೊಂದಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.