ಸೂರಂಬೈಲು ಶಾಲೆಯಲ್ಲಿ ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- 2022-23 ಚಿಣ್ಣರ ಕಲರವ ಉದ್ಘಾಟನೆ

0

ನಿಡ್ಪಳ್ಳಿ; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಬೆಟ್ಟಂಪಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಇವರ ಜಂಟಿ ಆಶ್ರಯದಲ್ಲಿ ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2022-23 ಚಿಣ್ಣರ ಕಲರವ ಇದರ ಉದ್ಘಾಟನಾ ಸಮಾರಂಭ ಸೆ.12 ರಂದು ಸೂರಂಬೈಲು ಶಾಲೆಯ ಕಲಾ ಸಿಂಧು ವೇದಿಕೆಯಲ್ಲಿ ನಡೆಯಿತು.
ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕೊರೋನಾದ ಪ್ರಭಾವದಿಂದಾಗಿ ಕಳೆದ ಎರಡು ವರ್ಷಗಳಿಂದ ಮಕ್ಕಳಿಗೆ ಯಾವುದೇ ಸಾಂಸ್ಕೃತಿಕ ಮತ್ತೀತರ ಕಾರ್ಯಕ್ರಮಗಳು ನಡೆಯದೆ ಇದ್ದು ಈ ವರ್ಷ ಅದು ಪ್ರಾರಂಭವಾಗುತ್ತಿರುವುದು ಸಂತಸ ತಂದಿದೆ.ಈ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಕ್ಕಳು ಸಂತೋಷದಿಂದ, ಉತ್ಸಾಹದಿಂದ ಭಾಗವಹಿಸಿ ಪ್ರಶಸ್ತಿ ಪಡೆದುಕೊಳ್ಳಿ. ಈ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಶುಭ ಹಾರೈಸಿ, ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಅರ್ ಮಾತನಾಡಿ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಉತ್ತಮ ರೀತಿಯಲ್ಲಿ ಭಾಗವಹಿಸಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ ರೈ, ಸೂರಂಬೈಲು ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ ಭಟ್.ವೈ, ಕರ್ನಾಟಕ ಪ್ರತಿಭಾ ರತ್ನ ಪುರಸ್ಕೃತೆ ಕು.ಧನ್ವಿ ರೈ ಕೋಟೆ ಇವರು ಶುಭ ಹಾರೈಸಿದರು.   
ಗೌರವಾರ್ಪಣೆ ಕಾರ್ಯಕ್ರಮ; 
ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇದರ ನಿವೃತ್ತ ಮುಖ್ಯ ಗುರು ಉದಯಕುಮಾರ್ ಶರವು,ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರು ಇಲ್ಲಿಯ ನಿವೃತ್ತ ಸಹ ಶಿಕ್ಷಕ ಶೀಧರ ಬೊಳಿಲ್ಲಾಯ ಕಡಮಾಜೆ ಹಾಗೂ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ಪುರಸ್ಕೃತೆ ಕು.ಧನ್ವಿ ರೈ ಕೋಟೆ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸೂರಂಬೈಲು ಶಾಲಾ ವಾರ್ಷಿಕೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವ ರೈ ಸೂರಂಬೈಲು, ಪಾಣಾಜೆ ಸುಬೋಧ ಪ್ರೌಢಶಾಲಾ ನಿವೃತ್ತ ದ್ವಿತೀಯ ದರ್ಜೆ ಸಹಾಯಕ ಸದಾಶಿವ ಭಟ್ ಪಾಲ್ತಮೂಲೆ, ಪ್ರತಿಭಾ ಕಾರಂಜಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುನೀತಾ ತಾರಾನಾಥ, ಉಪಾಧ್ಯಕ್ಷೆ ಲಲಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಿಂಚನ, ಚೈತನ್ಯ, ಗಗನ ಪ್ರಾರ್ಥಿಸಿ, ಶಾಲಾ ಸಹಶಿಕ್ಷಕ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ನಾಗೇಶ ಪಾಟಾಳಿ ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸ್ಥೂಲ ನೋಟದ ಬಗ್ಗೆ ವಿವರಿಸಿದರು. ಮುಖ್ಯ ಶಿಕ್ಷಕಿ ಊರ್ಮಿಳಾ ಕೆ ವಂದಿಸಿದರು ಶಿಕ್ಷಕ ವೆಂಕಟೇಶ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.ವಸಂತ ಕುಮಾರ್, ರಾಧಾಕೃಷ್ಣ ತೂಂಬಡ್ಕ, ಸುರೇಶ ನಾಯ್ಕ ತೂಂಬಡ್ಕ, ಶ್ರೀಧರ ನಾಯ್ಕ ತೂಂಬಡ್ಕ, ವಿದ್ಯಾರ್ಥಿನಿ ಸಿಂಚನ, ಗಣೇಶ ರೈ ಸೂರಂಬೈಲು,ಅತಿಥಿ ಶಿಕ್ಷಕಿ ಸುಪ್ರೀತಾ, ಪ್ರದೀಪ್ ಕುಮಾರ್ ಪಾಣಾಜೆ, ದಯಾನಂದ ತೂಂಬಡ್ಕ, ಗೌರವ ಶಿಕ್ಷಕಿ ಕವಿತಾ, ಅತಿಥಿ ಶಿಕ್ಷಕಿ ಕು.ವಿದ್ಯಾ, ಗೌರವ ಶಿಕ್ಷಕಿ ಕು.ಯಶಸ್ವಿನಿ, ಮೋಹನ ನಾಯ್ಕ ತೂಂಬಡ್ಕ ಅತಿಥಿಗಳಿಗೆ ಶಾಲು ಹಾಕಿ ಗುಲಾಬಿ ನೀಡಿ ಗೌರವಿಸಿದರು.ತುಳುನಾಡ್ ಫ್ರೆಂಡ್ಸ್ ತೂಂಬಡ್ಕ, ಸ್ಕಂದಶ್ರೀ ಯುವಕ ಮಂಡಲ, ಓಂ ಫ್ರೆಂಡ್ಸ್ ಭರಣ್ಯ ಇದರ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಸಹಕರಿಸಿದರು.ನಂತರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆರಂಭವಾಯಿತು.
ಕಾರ್ಯಕ್ರಮಕ್ಕೆ ಗಣ್ಯರ ಭೇಟಿ– ಉದ್ಘಾಟನಾ ಕಾರ್ಯಕ್ರಮ ನಡೆದ ನಂತರ ಕಾರ್ಯಕ್ರಮಕ್ಕೆ ಭೇಟಿ ನೀಡಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತಾಲೂಕು ಶಿಕ್ಷಣ ಸಂಯೋಜಕ ಹರಿಪ್ರಸಾದ್ ಕೂಡ ಜತೆಗೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here