ಪುತ್ತೂರು ಸುದ್ದಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ

0

  • ರೂ.33 ಕೋಟಿ 75 ಲಕ್ಷ ವ್ಯವಹಾರ, ರೂ.32.37 ಲಕ್ಷ ನಿವ್ವಳ ಲಾಭ, ಶೇ.11 ಡಿವಿಡೆಂಡ್

ಪುತ್ತೂರು: ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುದ್ದಿ ಸೌಹಾರ್ದ ಸಹಕಾರಿಯ 7 ನೇ ವಾರ್ಷಿಕ ಮಹಾಸಭೆಯು ಸೆ.10 ರಂದು ಸಹಕಾರಿಯ ಅಧ್ಯಕ್ಷ ಡಾ. ಯು.ಪಿ ಶಿವಾನಂದರವರ ಅಧ್ಯಕ್ಷತೆಯಲ್ಲಿ ಪುತ್ತೂರು ರೋಟರಿ ಮನಿಷಾ ಹಾಲ್‌ನಲ್ಲಿ ಜರಗಿತು. ಸಹಕಾರಿಯ ಸಿಬ್ಬಂದಿ ಅನಂತರಾಮರವರು ಮಹಾಸಭೆಯ ನೋಟೀಸನ್ನು ಓದಿ ದಾಖಲಿಸಿದರು. ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಂ.ನರೇಂದ್ರರವರು 2021-22 ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡನೆ ಮಾಡಿದರು. ಸಹಕಾರಿಯು ವರ್ಷಾಂತ್ಯಕ್ಕೆ ಎ ತರಗತಿಯ 2433 ಮಂದಿ ಸದಸ್ಯರನ್ನು ಹೊಂದಿದ್ದು ರೂ.48,10,350 ಪಾಲು ಬಂಡವಾಳವನ್ನು ಹೊಂದಿದೆ. ರೂ.7,57,16,097 ಒಟ್ಟು ಠೇವಣಾತಿಗಳನ್ನು ಹೊಂದಿದ್ದು ಕಳೆದ ವರ್ಷಕ್ಕಿಂತ ಶೇ.35 ರಷ್ಟು ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿದೆ. ಸಂಘವು ನಿರಖು ಠೇವಣಾತಿಗಳಿಗೆ ಒಂದು ವರ್ಷದ ಅವಧಿಗೆ ಶೇ. 8.5 ಹಾಗೂ ಹಿರಿಯ ನಾಗರಿಕರಿಗೆ ಶೇ. 0.5 ಹೆಚ್ಚು ಬಡ್ಡಿ ನೀಡಲಾಗುತ್ತದೆ ಎಂದರು. ಸದಸ್ಯರ ಸಾಲಗಳಲ್ಲಿ ವಾಹನ ಸಾಲ, ಠೇವಣಾತಿ ಸಾಲ, ಗೃಹ ಸಾಲ, ಆಭರಣ ಈಡಿನ ಸಾಲ, ಅಡವು ಸಾಲ, ಜಾಮೀನು ಸಾಲ, ವೇತನ ಸಾಲ, ಭೂ ಖರೀದಿ ಸಾಲ, ಸ್ವಸಹಾಯ ಸಂಘದ ಸಾಲ ಸೇರಿದಂತೆ ವರ್ಷಾಂತ್ಯಕ್ಕೆ ಒಟ್ಟು ರೂ.6,52,68,032 ಸಾಲ ನೀಡಲಾಗಿದೆ. ವರದಿ ವರ್ಷದಲ್ಲಿ ಸಂಘವು ಒಟ್ಟು ರೂ.33.75 ಕೋಟಿ ವ್ಯವಹಾರ ನಡೆಸಿದ್ದು ಕಳೆದ ವರ್ಷಕ್ಕಿಂತ ರೂ.11.37 ಕೋಟಿಯ ಹೆಚ್ಚಳವನ್ನು ಸಾಧಿಸಿದೆ. ವರದಿ ವರ್ಷದಲ್ಲಿ ಶೇ.95.07 ರಷ್ಟು ಸಾಲ ವಸೂಲಾತಿ ಮಾಡಿದ್ದು ಹಿಂದಿನ ಸಾಲಿಗಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಸಂಘವು ವರದಿ ವರ್ಷದಲ್ಲಿ ಒಟ್ಟು ರೂ.32,37,514.95 ರಷ್ಟು ನಿವ್ವಳ ಲಾಭವನ್ನು ಗಳಿಸಿಕೊಂಡಿದೆ. ಅಡಿಟ್ ವರ್ಗೀಕರಣದಲ್ಲಿ ಸಂಘವು ಎ ಶ್ರೇಣಿಯಲ್ಲಿ ವರ್ಗೀಕರಿಸಲ್ಪಟ್ಟಿದೆ ಎಂದು ಯಂ.ನರೇಂದ್ರರವರು ಸಭೆಗೆ ತಿಳಿಸಿದರು. ಲಾಭಾಂಶ ವಿಂಗಡಣೆ ಮಾಡಿದ ಸಂಘದ ಅಧ್ಯಕ್ಷ ಡಾ| ಯು.ಪಿ ಶಿವಾನಂದರವರು ಸದಸ್ಯರಿಗೆ ವರದಿ ವರ್ಷದಲ್ಲಿ ಶೇ.11 ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.

2022-23 ನೇ ಸಾಲಿನ ಅಂದಾಜು ಆಯವ್ಯಯವನ್ನು ನಿರ್ದೇಶಕ ಎ.ವಿ ನಾರಾಯಣ್‌ರವರು ಸಭೆಗೆ ಮಂಡಿಸಿದರು. ಬೈಲಾ ತಿದ್ದುಪಡಿಯ ಬಗ್ಗೆ ನಿರ್ದೇಶಕ ಸುಂದರ ನಾಯ್ಕ್ರವರು ಸಭೆಯ ಮುಂದಿಟ್ಟರು. 2021-22 ನೇ ಸಾಲಿನ ಅಡಿಟ್ ವರದಿಯನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯಂ.ನರೇಂದ್ರ ಸಭೆಗೆ ತಿಳಿಸಿದರು.

ನಿರ್ದೇಶಕರಿಗೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಸನ್ಮಾನ: ಸಾಲ ನೀಡಬೇಕಾದರೆ ಸಹಕಾರಿಯೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆ ನೀಡುತ್ತಾ ಬರುತ್ತಿರುವ ಸಹಕಾರಿಯ ನಿರ್ದೇಶಕರುಗಳಾದ ಜಗನ್ನೀವಾಸ ರಾವ್ ಮತ್ತು ಸುಂದರ ನಾಯ್ಕ್ರವರನ್ನು ಹಾಗೂ ಸಹಕಾರಿಯ ಬೆನ್ನೆಲುಬು ಆಗಿರುವ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯಂ.ನರೇಂದ್ರರವರನ್ನು ಈ ಸಂದರ್ಭದಲ್ಲಿ ಶಾಲು,ಹೂ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದಲ್ಲದೆ ಗ್ರಾಹಕರೊಂದಿಗೆ ನಗುಮೊಗದ ಸೇವೆ ನೀಡುತ್ತಾ ಬಂದಿರುವ ಸಹಕಾರಿಯ ಸಿಬ್ಬಂದಿಗಳಾದ ಕೆ.ಅನಂತರಾಮ ಮತ್ತು ಚೇತನ್ ಕೆ.ರವರನ್ನು ಕೂಡ ಗೌರವಿಸಲಾಯಿತು.

ವಾಯಿದೆಗಿಂತ ಮುಂಚಿತವಾಗಿ ಸಾಲ ಮರುಪಾವತಿಸಿದ ಗ್ರಾಹಕರಿಗೆ ಗೌರವಾರ್ಪಣೆ: ಸಹಕಾರಿ ಸಂಘದಿಂದ ಪಡೆದುಕೊಂಡ ಸಾಲವನ್ನು ವಾಯಿದೆಗಿಂತ ಮುಂಚಿತವಾಗಿಯೇ ಮರುಪಾವತಿಸುವ ಮೂಲಕ ಸಹಕಾರಿ ಸಂಘದೊಂದಿಗೆ ಸಹಕರಿಸಿದ ಸುಮಾರು 20 ಗ್ರಾಹಕರನ್ನು ಈ ಸಂದರ್ಭದಲ್ಲಿ ಶಾಲು, ಹೂ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸಹಕಾರಿ ಸಂಘದಿಂದ ಸಾಲ ಪಡೆದುಕೊಂಡು ಅದನ್ನು ವಾಯಿದೆಗಿಂತ ಮುಂಚಿತವಾಗಿ ಮರುಪಾವತಿಸುವ ಮೂಲಕ ಸಂಘದೊಂದಿಗೆ ಸಹಕಾರ ನೀಡಿದ್ದರು. ಇವರುಗಳನ್ನು ಸಹಕಾರಿಯ ಅಧ್ಯಕ್ಷರು, ನಿರ್ದೇಶಕರುಗಳು ಸನ್ಮಾನಿಸಿ ಗೌರವಿಸಿದರು.

ಸುದ್ದಿ ಸೊಸೈಟಿಯ ಯಶಸ್ವಿಗೆ ಗ್ರಾಹಕರಿಂದ ಶಹಬ್ಬಾಸ್: ಸುದ್ದಿ ಸೌಹಾರ್ದ ಸಹಕಾರಿಯು ತನ್ನ 7 ವರ್ಷಗಳ ಅಲ್ಪ ಅವಧಿಯಲ್ಲಿ ಗುರಿ ಮೀರಿದ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಅಭಿನಂದನೆಗಳನ್ನು ಸಲಹೆ ಸೂಚನೆಗಳನ್ನು ತಿಳಿಸಿದರು. ಪುತ್ತೂರು ಮಹಮ್ಮಾಯಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶೀನ ನಾಯ್ಕರವರು ಮಾತನಾಡಿ, ಸುದ್ದಿ ಸೌಹಾರ್ದವು ಅವಧಿಗಿಂತ ಮುಂಚಿತವಾಗಿ ಸಾಲ ಮರುಪಾವತಿಸಿದ ತನ್ನ ಸಾಲಗಾರ ಗ್ರಾಹಕರನ್ನು ಅಭಿನಂದಿಸುವ ಕೆಲಸ ಮಾಡಿರುವುದು ಉತ್ತಮ ಕೆಲಸವಾಗಿದೆ. ಇದರಲ್ಲಿ ಬಹುತೇಕ ಮಂದಿ ಮಹಿಳೆಯರೇ ಗೌರವಾರ್ಪಣೆ ಸ್ವೀಕರಿಸಿದ್ದು ಖುಷಿ ತಂದಿದೆ. ಒಬ್ಬ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇದ್ದಾಳೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಸಂಘದಿಂದ ಸಾಲ ಪಡೆದು ಅದನ್ನು ಉತ್ತಮ ಕೆಲಸಕ್ಕೆ ವಿನಿಯೋಗಿಸಿ ಪಡೆದುಕೊಂಡ ಸಾಲವನ್ನು ಅವಧಿಗೆ ಮುಂಚೆಯೇ ಪಾವತಿಸುವ ಮೂಲಕ ಸಂಘದ ಅಭಿವೃದ್ಧಿಯಲ್ಲಿ ಪಾಲು ಪಡೆದ ಗ್ರಾಹಕರಿಗೆ ಹಾಗೂ ಸಂಘದ ಮಹಿಳಾ ನಿರ್ದೇಶಕರಿಗೆ ನನ್ನ ವೈಯುಕ್ತಿಕ ಅಭಿನಂದನೆಗಳನ್ನು ಎಂದು ಹೇಳಿದರು. ಚೊಕ್ಕಾಡಿ ವ್ಯವಸಾಯ ಸೇವಾ ಸಹಕಾರಿಯ ನಿವೃತ್ತ ಸಿಇಓ, ಕೆನರಾ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ರಾಮಚಂದ್ರ ಉಡುಪ ಸೇರಿದಂತೆ ಹಲವು ಮಂದಿ ಸುದ್ದಿ ಸೊಸೈಟಿಯ ಯಶಸ್ವಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಸಂಘದ ಸಿಬ್ಬಂದಿಗಳ ಕಾರ್ಯವೈಖರಿ ಹಾಗೂ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರುಗಳ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಸಹಕಾರಿಯ ವಿಶೇಷತೆಗಳು: ಹಿರಿಯ ನಾಗರೀಕರಿಗೆ ಶೇ.0.5 ಹೆಚ್ಚುವರಿ ಬಡ್ಡಿ, ಭೂ ಅಡಮಾನ ಸಾಲ,ಗೃಹಸಾಲ, ಆಭರಣ ಈಡಿನ ಸಾಲ, ವೇತನ ಸಾಲ, ವ್ಯಾಪಾರ ಸಾಲ, ಭೂ ಖರೀದಿ ಸಾಲ, ಮನೆ ನಿವೇಶನ ಖರೀದಿ ಸಾಲ. ಕಡಿಮೆ ಬಡ್ಡಿ ಹಾಗೂ ತ್ವರಿತಗತಿಯಲ್ಲಿ ಕ್ಲಪ್ತ ಸಮಯದಲ್ಲಿ ನೀಡಲಾಗುತ್ತದೆ. ಇ-ಸ್ಟಾಂಪಿಂಗ್ ಸೌಲಭ್ಯ ಇದೆ.

ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಯು.ಪಿ. ರಾಮಕೃಷ್ಣ, ನಿರ್ದೇಶಕರುಗಳಾದ ಡಾ. ಜೆ.ಸಿ ಅಡಿಗ, ಹರೀಶ್ ಬಂಟ್ವಾಳ, ಮೋಹನ್ ರೈ ಕೆ.ಎಂ, ಸ್ವಾತಿ ಮಲ್ಲಾರ, ರಾಜೇಶ್ ಎಂ.ಎಸ್, ಸಿ.ಶೇಷಪ್ಪ ಕಜೆಮಾರ್, ಫಾರೂಕ್ ಶೇಖ್, ಈಶ್ವರ ವಾರಣಾಸಿ ಉಪಸ್ಥಿತರಿದ್ದರು. ಸಹಕಾರಿಯ ನಿರ್ದೇಶಕ ಎನ್.ಕೆ ಜಗನ್ನೀವಾಸ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಿತ್ಯ ನಿಧಿ ಸಂಗ್ರಾಹಕ ಕೆ.ಸುಬ್ರಹ್ಮಣ್ಯ ಪ್ರಾರ್ಥಿಸಿದರು. ನಿರ್ದೇಶಕಿ ಜೋಹರಾ ನಿಸಾರ್ ಅಹಮ್ಮದ್ ವಂದಿಸಿದರು. ಸುದ್ದಿ ಚಾನೆಲ್‌ನ ಆಂಕರ್ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ಕೆ.ಅನಂತರಾಮ, ಚೇತನ್, ನಿತ್ಯನಿಧಿ ಸಂಗ್ರಾಹಕರಾದ ಸತೀಶ್ ಪ್ರಭು, ಶ್ರೀಧರ್, ಶಿವರಾಮ ಅಮೈ ಸಹಕರಿಸಿದ್ದರು.

ಸುಳ್ಯ, ಬೆಳ್ತಂಗಡಿಯಲ್ಲಿ ಶೀಘ್ರದಲ್ಲೇ ಶಾಖೆ ಆರಂಭ ಸುದ್ದಿ ಸೌಹಾರ್ದ ಸಹಕಾರಿಯ ಶಾಖೆಗಳು ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಸಹಕಾರಿಯ ಅಧ್ಯಕ್ಷ ಡಾ| ಯು.ಪಿ ಶಿವಾನಂದರವರು ಸಭೆಗೆ ತಿಳಿಸಿದರು. ಪುತ್ತೂರು ಸುದ್ದಿ ಸೌಹಾರ್ದ ಸಹಕಾರಿಯು ಆಡಳಿತ ಮಂಡಳಿ ಹಾಗೂ ಗ್ರಾಹಕರ ಸಂಪೂರ್ಣ ಸಹಕಾರದೊಂದಿಗೆ ಉತ್ತಮ ಲಾಭಾಂಶವನ್ನು ಪಡೆದುಕೊಂಡಿದೆ. ಯಾವುದೇ ಒಂದು ಸಹಕಾರಿಯು ಉತ್ತಮವಾಗಿ ಕೆಲಸ ನಿರ್ವಹಿಸಬೇಕಾದರೆ ಗ್ರಾಹಕರ ಸಹಕಾರ ಅತೀ ಮುಖ್ಯ, ಪಡೆದುಕೊಂಡ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿಸಿದರೆ ಮಾತ್ರ ಸಹಕಾರಿ ಸಂಘವು ಲಾಭದತ್ತ ಸಾಗಲು ಸಾಧ್ಯವಿದೆ. ಇದಕ್ಕಾಗಿ ನಮ್ಮೆಲ್ಲ ಗ್ರಾಹಕ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಸದ್ಯದಲ್ಲೇ ಸುಳ್ಯ ಮತ್ತು ಬೆಳ್ತಂಗಡಿಯಲ್ಲೂ ಸುದ್ದಿ ಸೌಹಾರ್ದ ಸಹಕಾರಿಯ ಶಾಖೆಗಳನ್ನು ಆರಂಭಿಸಲಾಗುವುದು ಎಲ್ಲಾ ಗ್ರಾಹಕರು ಸಹಕಾರ ನೀಡುವಂತೆ ಕೇಳಿಕೊಂಡರು.

“ ಸುದ್ದಿ ಸೌಹಾರ್ದ ಸಹಕಾರಿಯು 2021-22 ನೇ ಸಾಲಿನ ವರದಿ ರ‍್ಷದಲ್ಲಿ ಒಟ್ಟು ರೂ.33 ಕೋಟಿ 75 ಲಕ್ಷ ರ‍್ಷಿಕ ವ್ಯವಹಾರ ನಡೆಸಿದ್ದು ರೂ.32.37 ಲಕ್ಷ ನಿವ್ವಳ ಲಾಭ ಪಡೆದುಕೊಂಡಿದೆ. ಸದಸ್ಯರಿಗೆ ಶೇ.11 ಡಿವಿಡೆಂಡ್ ನೀಡಲಾಗುತ್ತಿದೆ. ಸಂಘದ ಬೆಳವಣಿಗೆಯಲ್ಲಿ ಗ್ರಾಹಕರ ಪಾತ್ರ ಬಹಳ ಪ್ರಮುಖವಾದದ್ದು ಆಗಿದೆ. ಅದಕ್ಕಾಗಿಯೇ ವಾಯಿದೆಗಿಂತ ಮುಂಚೆ ಸಾಲ ಮರುಪಾವತಿಸಿದ ಗ್ರಾಹಕರನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಕೃಷಿಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸವನ್ನು ಸುದ್ದಿ ಸೌರ‍್ದ ಸಹಕಾರಿಯು ಮಾಡಲಿದ್ದು ಮುಂದಿನ ದಿನಗಳಲ್ಲಿಯೂ ಗ್ರಾಹಕರ ಸಂರ‍್ಣ ಸಹಕಾರವನ್ನು ಸಂಘವು ಬಯಸುತ್ತದೆ – ಡಾ| ಯು.ಪಿ ಶಿವಾನಂದ, ಅಧ್ಯಕ್ಷರು ಸುದ್ದಿ ಸೌರ‍್ದ ಸಹಕಾರಿ ಸಂಘ ಪುತ್ತೂರು

LEAVE A REPLY

Please enter your comment!
Please enter your name here