ಪುತ್ತೂರು; ಒಳಮೊಗ್ರು ಗ್ರಾಮದ ಹಿರಿಯ ಬಾಳೆಎಲೆ ವ್ಯಾಪಾರಿಯಾಗಿದ್ದ ಕೊಯಿಲ ಗುಡ್ಡೆ ನಿವಾಸಿ ಅಬೂಬಕ್ಕರ್ (60) ರವರು ಅಲ್ಪಕಾಲದ ಅಸೌಖ್ಯದಿಂದ ಸೆ. 12ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಮೃತರು 50 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಆರಂಭದ ಬಾಲೆ ಎಲೆ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದರು. ಉಡುಪಿ ಮಠಕ್ಕೆ ಬಾಳೆ ಎಲೆ ಪೂರೈಕೆ ಮಾಡುತ್ತಿದ್ದ ಅಬೂಬಕ್ಕರ್ ರವರು ಇತ್ತೀಚಿನ ವರ್ಷಗಳ ತನಕ ತನ್ನ ಕಾಯಕವನ್ನು ಮುಂದುವರೆಸಿದ್ದರು.
ಅಪಾರವಾದ ನೆನಪಿನ ಶಕ್ತಿಯನ್ನು ಕ್ರೋಡೀಕರಿಸಿಕೊಂಡಿದ್ದ ಅವರು ಅಕ್ಷರಜ್ಞಾನವಿಲ್ಲದೇ ಇದ್ದರೂ 150 ಕ್ಕೂ ಮೊಬೈಲ್ ಹಾಗೂ ಸ್ಥಿರ ದೂರವಾಣಿ ಸಂಖ್ಯೆಯನ್ನು ತನ್ನ ನೆನಪು ಶಕ್ತಿಯಿಂದಲೇ ಹೇಳುತ್ತಿದ್ದರು. ಒಂದು ಬಾರಿ ಅವರ ಬಳಿ ತನ್ನ ನಂಬರ್ ಹೇಳಿದರೆ ಸಾಕು ಅ ನಂಬರ್ ವರ್ಷದ ಬೇಳಿಕ ಹೇಳಿದರೂ ಚಾಚೂ ತಪ್ಪದೆ ಹೇಳುವ ಅಪಾರ ನೆನಪಿನ ಬುತ್ತಿ ಇವರದ್ದಾಗಿತ್ತು. ಎಲೆ ಅಬೂಬಕ್ಕರ್ ಎಂದೇ ಪರಿಚಿತರಾಗಿದ್ದ ಇವರು ಕೆಲವು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮೃತರು ಪುತ್ರರಾದ ಅಬ್ದುಲ್ ಲತೀಫ್ ಮುಸ್ಲಿಯಾರ್, ಝಕರಿಯ್ಯಾ ಮುಸ್ಲಿಯಾರ್, ಅನ್ಸಾರ್, ಪುತ್ರಿಯರಾದ ಫೌಜಿಯಾ,ಆಯಿಷಾ ಸಹೋದರರಾದ ಇಸುಬು ಹಾಜಿ ಕೊಯಿಲ, ಡಿ ಕೆ ಹಸನ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.