ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಮತ್ತು ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಸಮಿತಿಯಿಂದ ಸೆ.10ರಂದು ನರಿಮೊಗರು ಗ್ರಾಮದ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಶ್ರೀ ಗೌರಿಶಂಕರ ಸಭಾಭವನದಲ್ಲಿ ಪ್ರಥಮ ವರ್ಷದ ಅರ್ಧ ಏಕಹಾ ಭಜನೆ ಮತ್ತು ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಕಾರ್ಯಕ್ರಮದಲ್ಲಿ ಉಳಿಕೆ ಮೊತ್ತವನ್ನು ಕಡ್ಯದ ಮೂರು ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಸಾರ್ಥಕತೆ ಮೆರೆಯಲಾಗಿದೆ.
ಸೆ.11ರಂದು ಸಮಿತಿವತಿಯಿಂದ ಪೂಜಾ ಕಾರ್ಯಕ್ರಮದ ಖರ್ಚು ವೆಚ್ಚದ ಲೆಕ್ಕಾಚಾರ ಮಾಡಲಾಗಿದ್ದು, ಈ ಸಂದರ್ಭ ಒಟ್ಟು ಕಾರ್ಯಕ್ರಮದಲ್ಲಿ ಉಳಿಕೆ ಮೊತ್ತವನ್ನು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಕುರಿತು ನಿರ್ಣಯದಂತೆ ಇತ್ತೀಚೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆಂದು ಬೈಕ್‌ನಲ್ಲಿ ಬರುತ್ತಿದ್ದ ಅಪಘಾತಗೊಂಡು ಮೃತಪಟ್ಟ ವೀರಮಂಗಲ ನಿವಾಸಿ ಭರತ್‌ರಾಜ್, ಅನಾರೋಗ್ಯದಿಂದ ಬಳಲುತ್ತಿರುವ ವೆಂಕಪ್ಪ ಗೌಡ ಕಡ್ಯ ಮತ್ತು ನೀರಿಗೆ ಬಿದ್ದು ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ ಪುರಂದರ ಗೌಡ ಅವರ ನೇತೃತ್ವದಲ್ಲಿ ಆರ್ಥಿಕ ನೆರವು ನೀಡಲಾಯಿತು. ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ. ಅಶೋಕ್ ಪುತ್ತಿಲ. ಶನಿಶ್ವರ ಪೂಜಾ ಸಮಿತಿ ಅಧ್ಯಕ್ಷ ಅನಿಲ್ ಕಣ್ಣರ್ನೂಜಿ. ಕಾರ್ಯದರ್ಶಿ ಬಾಲಚಂದ್ರ ಗೌಡ ಕಡ್ಯಾ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಬಿಕೆ. ಸಂತೋಷ್ ಗೌಡ, ಪುರಂದರ ಗೌಡ, ನರಿಮೊಗರು ಪಂಚಾಯತ್ ಸದಸ್ಯ ಪದ್ಮನಾಭ, ಸತೀಶ್ ನಾಯ್ಕ್ ಪುತ್ತಿಲ ಉಪಸ್ಥಿತರಿದ್ದರು.