ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

ವಾರ್ಷಿಕ 125 ಕೋಟಿ ವ್ಯವಹಾರ, 54 ಲಕ್ಷ ರೂಪಾಯಿ ನಿವ್ವಳ ಲಾಭ

0 18% ಶೇಕಡಾ ಡಿವಿಡೆಂಟ್ ಘೋಷಣೆ.
————————-
0 6 ಮಂದಿ ಹಿರಿಯ ಮೂರ್ತೆದಾರರಿಗೆ ಗೌರವ ಸನ್ಮಾನ.
———————————–
0 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.
———————————–

ಉಪ್ಪಿನಂಗಡಿ: ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ 2021-22ನೇ ಸಾಲಿನಲ್ಲಿ ಒಟ್ಟು 124 ಕೋಟಿ, 81 ಲಕ್ಷದ, 74 ಸಾವಿರದ 532 ರೂಪಾಯಿ ವ್ಯವಹಾರ ನಡೆಸಿದ್ದು, 54 ಲಕ್ಷದ 52 ಸಾವಿರದ 475 ರೂಪಾಯಿ ನಿವ್ವಳ ಲಾಭ ಗಳಿಸಿದೆ, ಶೇಕಡಾ 18% ಡಿವಿಡೆಂಟ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಘೋಷಿಸಿದರು.

ಅವರು ಸೆ. 11ರಂದು ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಉಪ್ಪಿನಂಗಡಿ ಮೂರ್ತೆದಾರರ ಸಂಘವು ವಿಶಿಷ್ಟವಾದ ಸಹಕಾರ ಸಂಘವಾಗಿದ್ದು, ಸಂಘದ ಸದಸ್ಯರುಗಳ ನಿರಂತರ ಸಹಕಾರ ಮತ್ತು ಪ್ರೋತ್ಸಾಹದ ಫಲವಾಗಿ ಜಿಲ್ಲೆಯಲ್ಲಿ ಸದೃಢ ಮತ್ತು ಅತ್ಯುತ್ತಮ ಸಹಕಾರ ಸಂಘವಾಗಿ ಬೆಳೆದು ನಿಂತಿದ್ದು, ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೀಕಯ್ಯ ಜಿ. ವರದಿ ವಾಚಿಸಿ ವರ್ಷಾಂತ್ಯಕ್ಕೆ 921″ಎ” ತರಗತಿ ಸದಸ್ಯರಿದ್ದು, 15,20,077 ಪಾಲು ಬಂಡವಾಳ
ಸಂಗ್ರಹಿಸಲಾಗಿದೆ. 1496″ಸಿ”. ತರಗತಿ ಸದಸ್ಯರಿದ್ದು, ಒಟ್ಟು 17,34,073 ಪಾಲು ಬಂಡವಾಳ ಹೊಂದಿದೆ. ವರ್ಷಾಂತ್ಯಕ್ಕೆ 26,36,68,518 ಠೇವಣಿ ಇದ್ದು, 22,54,06,649 ಸಾಲ ಹೊರ ಬಾಕಿ ಇರುತ್ತದೆ ಎಂದು ಸಭೆಗೆ ತಿಳಿಸಿದರು. ಗೌರವ ಸಲಹೆಗಾರರಾದ ಮೋನಪ್ಪ ಕಂಡೆತ್ಯಾರು ಸಲಹೆ ಸೂಚನೆ ನೀಡಿ ಮಾತನಾಡಿದರು.

ಹಿರಿಯ ಮೂರ್ತೆದಾರರಿಗೆ ಗೌರವ ಸನ್ಮಾನ:

ಸಂಘದ ವತಿಯಿಂದ ಹಿರಿಯ ಮೂರ್ತೆದಾರರಾದ ಹಿರೇಬಂಡಾಡಿ ನಾಗನಕೋಡಿ ಓಬಯ್ಯ ಪೂಜಾರಿ, ಉದನೆ ಪಟ್ಟೆ ಗುರುವಪ್ಪ ಪೂಜಾರಿ, ಗೋಳಿತೊಟ್ಟು ಗುರುಂಪು ಗುಡ್ಡಪ್ಪ ಪೂಜಾರಿ, ಉಪ್ಪಿನಂಗಡಿ ಮರುವೇಲು ಜಿನ್ನಪ್ಪ ಪೂಜಾರಿ, ಹಿರೇಬಂಡಾಡಿ ಎಲಿಯ ಸೋಮಪ್ಪ ಪೂಜಾರಿ, ಕಲಾಯಿ ಬಾಲಪ್ಪ ಪೂಜಾರಿ ಇವರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಗಿ ಸನ್ಮಾನಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ:

ಸಂಘದ ಸದಸ್ಯ ಕುಟುಂಬದ ವಿದ್ಯಾರ್ಥಿ ರಕ್ಷಿತ್ (ಇಂಡಿಯನ್ ಬುಕ್ ಆಫ್ ರೆಕಾರ್ಡ್) ಹಾಗೂ 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಸಂಘದ ಮಾಜಿ ಅಧ್ಯಕ್ಷರುಗಳಾದ ಎಂ. ವರದರಾಜ, ಜನಾರ್ದನ ಬಾಣಜಾಲು, ಶೇಷಪ್ಪ ಪೂಜಾರಿ ಇಟ್ಟೊಳಿಗೆ, ದೇವಪ್ಪ ಪೂಜಾರಿ ಪಡ್ಪು, ಉಷಾ ಅಂಚನ್ ನೆಲ್ಯಾಡಿ, ಮಾಜಿ ನಿರ್ದೇಶಕರುಗಳಾದ ವೆಂಕಪ್ಪ ಪೂಜಾರಿ ರ‍್ವೇಲ್, ಓಬಯ್ಯ ಪೂಜಾರಿ ನಾಗನಕೋಡಿ, ಬಾಲಪ್ಪ ಪೂಜಾರಿ ಕಲಾಯಿ, ಸುಂದರ ಪೂಜಾರಿ ಎಲಿಯ, ಗಿರೀಶ್ ಸಾಲ್ಯಾನ್, ವಿಶ್ವನಾಥ ಎಲಿಯ, ಎ.ಜೆ. ವಿಶ್ವನಾಥ, ಲೋಕೇಶ್ ಬೆತ್ತೋಡಿ, ಗೀತಾ ದಾಸರಮೂಲೆ, ಸದಸ್ಯರುಗಳಾದ ಅಶೋಕ್ ಪಡ್ಪು, ಬಾಲಕೃಷ್ಣ ಬಾಣಜಾಲು, ಮೋಹನ ಡಿ., ಗುಣಕರ ಅಗ್ನಾಡಿ, ಡಾ. ಆಶಿತ್ ಎಂ.ವಿ., ಗಣೇಶ್ ಹೊಸವೊಕ್ಲು ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.

ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಮಾಧವ ಪೂಜಾರಿ ಆರಿಜಾಲು, ಶಶಿಧರ ಪಠೇರಿ, ಚೆನ್ನಪ್ಪ ಪೂಜಾರಿ ಕೊಚ್ಚಿಲ, ಶೀನಪ್ಪ ಪೂಜಾರಿ ಹೂವಿನಮಜಲು, ಚಂದ್ರಕಲಾ
ಸದಾನಂದ ಡಿ.ಎಸ್., ಸುನಿತಾ ಸೋಮಸುಂದರ ಕೊಡಿಪಾನ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಅಜಿತ್ ಪಾಲೇರಿ ಸ್ವಾಗತಿಸಿ, ನಿರ್ದೇಶಕ ಚಂದ್ರಶೇಖರ ಬಾಣಜಾಲು ವಂದಿಸಿದರು.

LEAVE A REPLY

Please enter your comment!
Please enter your name here