ನ್ಯಾಯ, ನೀತಿಯ ಬೆಳಕನ್ನು ಜಗತ್ತಿಗೆ ತೋರಿದ್ದು ಹಿಂದೂ ಧರ್ಮ: ಗಿರಿಶಂಕರ ಸುಲಾಯ
ಸವಣೂರು : ಪಾಲ್ತಾಡು ಶ್ರೀ ವಿಷ್ಣು ಮಿತ್ರವೃಂದ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಹಾಗೂ ದಶ ಸಂಭ್ರಮವು ಸೆ.11ರಂದು ಪಾಲ್ತಾಡು ಶ್ರೀ ವಿಷ್ಣುನಗರದಲ್ಲಿ ನಡೆಯಿತು.
ಧಾರ್ಮಿಕ ಉಪನ್ಯಾಸ ನೀಡಿದ ಸವಣೂರು ಸರಕಾರಿ ಪ.ಪೂ.ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ ಮಾತನಾಡಿ, ನ್ಯಾಯ, ನೀತಿ, ಧರ್ಮದ ಬೆಳಕನ್ನು ಜಗತ್ತಿಗೆ ತೋರಿದ ಧರ್ಮ ಹಿಂದೂ ಧರ್ಮ. ಪ್ರತೀ ಮನೆಯಲ್ಲಿಯು ಧಾರ್ಮಿಕ ಜಾಗೃತಿಯ ಅಗತ್ಯ ಇದೆ ಎಂದರು.
ಪುತ್ತೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಮತೀಯವಾದಿ ಶಕ್ತಿಗಳು ಹಿಂದೂ ಸಮಾಜದ ಮೇಲೆ ಆಕ್ರಮಣಕ್ಕೆ ಮುಂದಾಗುವ ಪ್ರಯತ್ನ ಮಾಡುತ್ತಿದ್ದು ಇದಕ್ಕೆ ಸಂಘಟಿತ ಸಮಾಜ ತಕ್ಕ ಉತ್ತರ ನೀಡಲಿದೆ ಎಂದರು.
ದೈವ ನರ್ತಕ ಚಂದ್ರ ಪಣಿಕ್ಕರ್, ನಾಟಿ ವೈದ್ಯ ರಾಮಣ್ಣ ಪೂಜಾರಿ ಕಂಪ, ನಿವೃತ್ತ ಮುಖ್ಯ ಶಿಕ್ಷಕಿ ಶಾಂತಕುಮಾರಿ ಎನ್, ರಕ್ತದಾನಿ ರಾಕೇಶ್ ರೈ ಕೆಡೆಂಜಿ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾಾರ್ಥಿಗಳನ್ನು ಗೌರವಿಸಲಾಯಿತು.
ಮಣಿಕ್ಕರ ಸ.ಪ್ರೌಢ ಶಾಲೆಯ ಕಾರ್ಯಾಧ್ಯಕ್ಷ ಸುನಿಲ್ ರೈ ಪಾಲ್ತಾಾಡು ಅಧ್ಯಕ್ಷತೆ ವಹಿಸಿದ್ದರು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಶಿಧರ್ ರಾವ್ ಬೊಳಿಕ್ಕಲ, ಪಾಲ್ತಾಾಡು ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ನವೀನ್ ರೈ ನಡುಮನೆ, ಗ್ರಾ.ಪಂ.ಸದಸ್ಯೆ ಶುಭಲತಾ ಜೆ. ರೈ ಮಣಿಕ್ಕರ, ಮಣಿಕ್ಕರ ಸ.ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮಣಿಯಾಣಿ, ಪಾಲ್ತಾಡು ಶ್ರೀ ವಿಷ್ಣು ಮಿತ್ರವೃಂದ ಅಧ್ಯಕ್ಷ ಸುಂದರ ಉಪಸ್ಥಿತರಿದ್ದರು. ದೇವಿಪ್ರಸಾದ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಮನೀಷ್ ವಂದಿಸಿದರು. ನವೀನ್ ಕುಮಾರ್ ಕುಲಾಲ್ ನಿರೂಪಿಸಿದರು.
ಬೆಳಗ್ಗೆ ವಿವಿಧ ತಂಡಗಳಿಂದ ಭಜನ ಕಾರ್ಯಕ್ರಮ, ಮಧ್ಯಾಹ್ನ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ನಡೆಯಿತು. ವಿವಿಧ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಗಳು ನಡೆದವು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ತುಳು ನಾಟಕ ಯಾನ್ ಉಲ್ಲೆತ್ತಾ ಪ್ರದರ್ಶನಗೊಂಡಿತು.