ಉಪ್ಪಿನಂಗಡಿ: ಇಲ್ಲಿನ ಜ್ಞಾನ ಭಾರತಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜ್ಞಾನ ಭಾರತಿ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಹುಸೈನ್ ಬಡಿಲ, ಶಿಕ್ಷಣವೆನ್ನುವುದು ಶಕ್ತಿಯಾಗಿದ್ದು, ಇಂದಿನ ಯುವ ಸಮೂಹಕ್ಕೆ ಇದು ಅತೀ ಅನಿವಾರ್ಯವಾಗಿರುವುದು ಆಗಿದೆ ಎಂದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಅಮಿತಾ ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಳಂತಿಲ ಗ್ರಾ.ಪಂ. ಸದಸ್ಯ ರಮೇಶ್, ಶಾಲಾ ಸಂಚಾಲಕ ಅಬ್ದುಲ್ ರವೂಫ್ ಯು.ಟಿ., ಶಾಲಾ ಮುಖ್ಯೋಪಾಧ್ಯಾಯಿನಿ ಅರುಣಾ, ಸಮೂಹ ಸಂಪನ್ಮೂಲ ವ್ಯಕ್ತಿ ಮುಹಮ್ಮದ್ ಶರೀಫ್, ಜ್ಞಾನ ಭಾರತಿ ಟ್ರಸ್ಟ್‌ನ ಖಜಾಂಚಿ ಅಝೀಝ್ ನಿನ್ನಿಕಲ್ಲ್, ಸದಸ್ಯ ಸುಲೈಮಾನ್ ಬಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ತನ್ಸೀರಾ ಆತೂರು ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಾ ಕಾರಂಜಿಯಲ್ಲಿ ಹಿರಿಯರ ವಿಭಾಗದಲ್ಲಿ ಜ್ಞಾನ ಭಾರತಿ ಶಾಲೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೇ, ಕಿರಿಯರ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಹಿರಿಯರ ವಿಭಾಗದಲ್ಲಿ ಜ್ಞಾನ ಭಾರತಿ ಶಾಲೆಯ ಕನ್ನಡ ಕಂಠಪಾಠ ಅನೀಶಾ ಬಿ., ಇಂಗ್ಲೀಷ್ ಕಂಠಪಾಠದಲ್ಲಿ ನಿಹಮ, ಹಿಂದಿ ಕಂಠಪಾಠದಲ್ಲಿ ರುಕಯ್ಯ, ಧಾರ್ಮಿಕ ಪಠಣದಲ್ಲಿ ಶನುಂ, ಚಿತ್ರಕಲೆಯಲ್ಲಿ ಶಬರುಸ್ತ ಪ್ರಥಮ ಸ್ಥಾನ ಪಡೆದರೆ, ಛದ್ಮವೇಷದಲ್ಲಿ ಯು.ಟಿ. ರಾಫೀಹ್, ಹಾಸ್ಯದಲ್ಲಿ ಶಾಝ್ ದ್ವಿತೀಯ ಸ್ಥಾನ ಪಡೆದುಕೊಂಡರು. ಭಾಷಣ ಸ್ಪರ್ಧೆಯಲ್ಲಿ ಉಝೈಫ ತೃತೀಯ ಸ್ಥಾನ ಪಡೆದುಕೊಂಡರು.
ಕಿರಿಯರ ವಿಭಾಗದಲ್ಲಿ ಇಂಗ್ಲೀಷ್ ಕಂಠಪಾಠದಲ್ಲಿ ರಫಾ ಬೇಗಂ, ಲಘ ಸಂಗೀತದಲ್ಲಿ ಮರ್ಝೀಯ, ಚಿತ್ರಕಲೆಯಲ್ಲಿ ಅನ್ವಫ್, ಛದ್ಮವೇಷದಲ್ಲಿ ಮುಹಮ್ಮದ್ ನಹೀಮುದ್ದೀನ್ ಸಾಹಿಸ್ ಪ್ರಥಮ ಸ್ಥಾನ ಪಡೆದರೆ, ಧಾರ್ಮಿಕ ಪಠಣ ಅರೇಬಿಕ್‌ನಲ್ಲಿ ಫಾತಿಮಾ, ಕಥೆ ಹೇಳುವುದರಲ್ಲಿ ಸಲೀತ್, ಆಶು ಭಾಷಣದಲ್ಲಿ ಅಂಜದ್ ದ್ವಿತೀಯ ಸ್ಥಾನ ಪಡೆದರು.