ವಿಟ್ಲ ಸ.ಪ್ರ.ದ.ಕಾಲೇಜಿಗೆ ‘ಬಿ’ ಗ್ರೇಡ್ ಮಾನ್ಯತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ವಿಟ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜು ಇತ್ತೀಚೆಗೆ ಮೂರನೇ ಆವರ್ತದ ನ್ಯಾಕ್ ಮೌಲ್ಯಮಾಪನ ಹಾಗೂ ಮಾನ್ಯತಾ ಪ್ರಕ್ರಿಯೆಗೆ ಒಳಪಟ್ಟು 2.28 ಶ್ರೇಯಾಂಕಗಳೊಂದಿಗೆ ’ಬಿ’ ಗ್ರೇಡ್ ಗಳಿಸಿ ಕಳೆದ ಸಾಲಿಗಿಂತ ಉತ್ತಮ ಶ್ರೇಯಾಂಕವನ್ನು ದಾಖಲಿಸಿದೆ. ಎರಡು ದಿನಗಳ ಈ ಪ್ರಕ್ರಿಯೆಯಲ್ಲಿ ನ್ಯಾಕ್ ಪೀರ್ ತಂಡದ ಮುಖ್ಯಸ್ಥರಾಗಿ ರಾಜಸ್ಥಾನದ ಸಂಗಮ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಕರುಣೇಶ್ ಸಕ್ಕೇನ, ಸದಸ್ಯ ಸಂಯೋಜಕರಾಗಿ ಪಂಜಾಬ್‌ನ ಪಟಿಯಾಲದ ಪಂಜಾಬ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಗುರುಮಿಟ್ ಸಿಂಗ್ ಸಿದ್ದು, ಸದಸ್ಯರಾಗಿ ಗೋವಾದ ಸೇಂಕ್ವೆಲಿಮ್‌ನ ಸರಕಾರಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ಡಾ. ಜೆರ್ವಾಸಿಯೋ ಎಸ್.ಎಫ್.ಎಲ್. ಮೆಂಡಿಸ್ ಭಾಗವಹಿಸಿದರು.‌

ನ್ಯಾಕ್‌ಪೀರ್ ತಂಡ ಕಾಲೇಜಿನ ವಿವಿಧ ಶೈಕ್ಷಣಿಕ ಚಟುವಟಿಕೆಗಳು, ಬೋಧನಾ ಮತ್ತು ಕಲಿಕಾ ವಿಧಾನಗಳು, ಸಂಶೋಧನೆ ಮತ್ತು ಸಮುದಾಯ ವಿಸ್ತರಣಾ ಚಟುವಟಿಕೆಗಳು, ಕಾಲೇಜಿನ ಭೌತಿಕ ಸೌಲಭ್ಯಗಳು, ಪಠ್ಯೇತರ ಚಟುವಟಿಕೆಗಳು, ಆಡಳಿತ ಕ್ರಮಗಳು ಮತ್ತು ಅಂತರ್ಜಾಲ ಆಧಾರಿತ ಬೋಧನಾ, ಕಲಿಕಾ, ಆಡಳಿತ ವ್ಯವಸ್ಥೆ, ಕಾಲೇಜಿನ ವಿಶಿಷ್ಟತೆ ಹಾಗೂ ಉತ್ತಮ ಅಭ್ಯಾಸ ಕ್ರಮಗಳ ಕುರಿತು ಸುದೀರ್ಘವಾಗಿ ಪರಿಶೀಲಿಸಿತ್ತು. ಪ್ರಾಂಶುಪಾಲರು, ಆಂತರಿಕ ಗುಣಮಟ್ಟ ಭರವಸಾ ಕೋಶ, ಕಾಲೇಜು ಅಭಿವೃದ್ಧಿ ಸಮಿತಿ, ಬೋಧಕ ಹಾಗೂ ಬೋಧಕೇತರ ವೃಂದ, ಪ್ರಸಕ್ತ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿ ಸಂಘ, ರಕ್ಷಕ-ಶಿಕ್ಷಕ ಸಂಘ ಹಾಗೂ ಎನ್.ಎಸ್.ಎಸ್., ಯುವ ರೆಡ್‌ಕ್ರಾಸ್, ರೋವರ್ಸ್ ಹಾಗೂ ರೇಂಜರ್ಸ್ ಘಟಕಗಳೂ ಸೇರಿದಂತೆ ಕಾಲೇಜಿನಲ್ಲಿರುವ ವಿವಿಧ ಸಂಘಗಳು ಮತ್ತು ಕೋಶಗಳ ಪದಾಽಕಾರಿಗಳ ಜೊತೆ ಸಮಾಲೋಚನೆ ನಡೆಸಿ ಅವುಗಳ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿತ್ತು. ಕಾಲೇಜಿನ ಶೈಕ್ಷಣಿಕ ವಾತಾವರಣ, ಗ್ರಾಮೀಣ ಬಡ ವಿದ್ಯಾರ್ಥಿಗಳಲ್ಲಿರುವ ಕ್ರಿಯಾಶೀಲತೆ, ಕ್ರೀಡಾಸಕ್ತಿ, ಕಲಿಕಾ ಚಟುವಟಿಕೆಗಳನ್ನು ತರಗತಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು ವಿದ್ಯಾರ್ಥಿಗಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಪ್ರಶಂಸಿಸಿದೆ.

ಉತ್ತಮ ಶ್ರೇಯಾಂಕವನ್ನು ದಾಖಲಿಸುವ ನಿಟ್ಟಿನಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಜಾ ಜೆ. ಹಾಗೂ ಅಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕ ಪ್ರೊ. ಪರಮೇಶ್ವರಿ ಎನ್. ಬೋಧಕ ಹಾಗೂ ಬೋಧಕೇತರ ವೃಂದ, ಪ್ರಸಕ್ತ ವಿದ್ಯಾರ್ಥಿಗಳು ಮಾತ್ರವಲ್ಲದೆ ಕಾಲೇಜಿನ ಅಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ರಕ್ಷಕ-ಶಿಕ್ಷಕ ಸಂಘಗಳ ಪದಾಽಕಾರಿಗಳು ಈ ಪ್ರಕ್ರಿಯೆಯಲ್ಲಿ ಶ್ರಮವಹಿಸಿದ್ದರು.

ಕಾಲೇಜಿನ ನ್ಯಾಕ್ ಪ್ರಕ್ರಿಯೆಗೆ ಅಗತ್ಯವಾದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಶೇಷ ಕಾಳಜಿವಹಿಸಿ ಸಹಾಯವನ್ನು ನೀಡಿ ಸರಕಾರಿ ಕಾಲೇಜು ಉತ್ತಮ ಶ್ರೇಯಾಂಕವನ್ನು ದಾಖಲಿಸಿರುವ ಕುರಿತು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಮಠಂದೂರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಟ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸ್ತುತ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ಬಿಎ, ಬಿಎಸ್‌ಡಬ್ಲ್ಯೂ, ಬಿಕಾಂ ಸ್ನಾತಕ ಪದವಿಗಳು ಮಾತ್ರವಲ್ಲದೆ ಎಂಎಸ್‌ಡಬ್ಲ್ಯೂ ಸ್ನಾತಕೋತ್ತರ ಕಾರ್ಯಕ್ರಮವನ್ನು ಬೋಧಿಸಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆಯು ಈಗಾಗಲೇ ಅಂತಿಮ ಹಂತದಲ್ಲಿದ್ದು ಆಸಕ್ತ ವಿದ್ಯಾರ್ಥಿಗಳು ಕಾಲೇಜಿಗೆ ಭೇಟಿ ನೀಡಿ ದಾಖಲಾತಿ ಪಡೆಯಬಹುದು.

ಡಾ. ಶ್ರೀಜಾ ಜೆ. ಪ್ರಾಂಶುಪಾಲರು, ವಿಟ್ಲ ಸ.ಪ್ರ.ದ.ಕಾಲೇಜು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.