ಪುತ್ತೂರು: ತುಳುನಾಡಿನ ಸಂಸ್ಕೃತಿ ಹಾಗೂ ಎಲ್ಲಾ ವರ್ಗದ ಜನರ ಅಚ್ಚು ಮೆಚ್ಚಿನ ವೇಷ ಹುಲಿಕುಣಿತವನ್ನು ಪ್ರೋತ್ಸಾಹಿಸಿ ಮುಂದಿನ ಪೀಳಿಗೆಯೂ ಉಳಿಸಿ ಬೆಳೆಸೋ ನಿಟ್ಟಿನಿಂದ ಈ ಕಲೆಯನ್ನು ಎಲ್ಲರೂ ಪ್ರೀತಿಸಿ ಬೆಂಬಲಿಸೋ ಸಲುವಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿರವರ ನೇತೃತ್ವದಲ್ಲಿ ಅ.1ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಬಣ್ಣ,ಬಣ್ಣದ ವಿದ್ಯುತ್ ಬೆಳಕಿನ ನಡುವೆ ಸುಮಾರು ರೂ.10 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ‘ಪುತೂರ್ದ ಪಿಲಿರಂಗ್ ಸೀಸನ್ ಫಸ್ಟ್’ ಸ್ಪರ್ಧೆ ನಡೆಯಲಿದ್ದು ಇದರ ಪದಾಧಿಕಾರಿಗಳ ಆಯ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿರವರ ನೇತೃತ್ವದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಸಲಾಯಿತು.
ಗೌರವಾಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ, ಅಧ್ಯಕ್ಷರಾಗಿ ಪಂಜಿಗುಡ್ಡೆ ಈಶ್ವರ್ ಭಟ್, ಕಾರ್ಯಾಧ್ಯಕ್ಷ ಶಿವರಾಮ ಆಳ್ವ ಉಪಾಧ್ಯಕ್ಷರಾಗಿ ರೋಶನ್ ರೈ ಬನ್ನೂರು, ಮಹಮ್ಮದ್ ರಿಯಾಜ್ ಕೆ., ಶರೂನ್ ಸಿಕ್ವೇರಾ, ಖಜಾಂಚಿ ರಂಜಿತ್ ಬಂಗೇರ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಕುಮಾರ್ ಭಂಡಾರಿ, ಕಾರ್ಯದರ್ಶಿಗಳಾಗಿ ಸಂತೋಷ್ ಭಂಡಾರಿ ಚಿಲ್ಮೇತ್ತಾರು, ಸನತ್ ರೈ ಏಳ್ನಾಡ್ ಗುತ್ತು, ಸನತ್ ರೈ ಒಳತ್ತಡ್ಕ, ಸೀರಿಲ್ ರೊಡ್ರಿಗಸ್, ಪವನ್ ಹಾಗೂ ಪ್ರಜ್ವಲ್ ರೈ ತೋಟ್ಲ ರವರನ್ನು ಆಯ್ಕೆ ಮಾಡಲಾಯಿತು.