ಅಖಿಲ ಭಾರತ ವೃತ್ತಿ ಪರೀಕ್ಷೆ : ನೆಲ್ಯಾಡಿ ಬೆಥನಿ ಐಟಿಐಗೆ ಶೇ.100 ಫಲಿತಾಂಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕಳೆದ ಜುಲೈ ತಿಂಗಳಿನಲ್ಲಿ ನಡೆದ 2021-2022ನೇ ಸಾಲಿನ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ನೆಲ್ಯಾಡಿಯ ಬೆಥನಿ ಐಟಿಐಗೆ ಶೇ.100 ತೇರ್ಗಡೆ ಫಲಿತಾಂಶ ಬಂದಿದೆ.
ಸಂಸ್ಥೆಯ ಕೋಪಾ, ವೆಲ್ಡರ್, ಎಲೆಕ್ಟ್ರೀಶಿಯನ್, ಎಲೆಕ್ಟ್ರೋನಿಕ್ಸ್, ಮೆಕ್ಯಾನಿಕ್, ಫಿಟ್ಟರ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 72 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ. 100 ಫಲಿತಾಂಶ ಬಂದಿದೆ. ಕೋಪಾ ವಿಭಾಗದ ರಾಜೇಶ್ ಬಿ., ವೆಲ್ಡರ್ ವಿಭಾಗದ ಸನ್ನಿಧಿ ಎನ್, ಎಲೆಕ್ಟ್ರೀಶಿಯನ್ ವಿಭಾಗದ ನಿಧೀಶ್ ಎಂ.ಪಿ. ಎಲೆಕ್ಟ್ರೋನಿಕ್ಸ್ ಮೆಕ್ಯಾನಿಕ್ ವಿಭಾಗದ ಸ್ವಸ್ಥಿಕ್ ಕೆ.ಎಸ್., ಫಿಟ್ಟರ್ ವಿಭಾಗದ ಹರ್ಷಿತ್ ಎನ್., ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವಿಭಾಗದ ರಂಜನ್ ಪಿ.ಬಿ.ರವರು ತಮ್ಮ ತಮ್ಮ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿ. 2021-22ನೇ ಪ್ರಥಮ ವರ್ಷದ ಪರೀಕ್ಷೆ ಬರೆದ 70 ವಿದ್ಯಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 98.57 ಶೇ. ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ನಿರ್ದೇಶಕರಾದ ರೆ|ಫಾ| ಮೆಲ್ವಿನ್ ಮ್ಯಾಥ್ಯು ಒಐಸಿ ಹಾಗೂ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.