ಉತ್ತಮ ಸೇವೆಗೆ ಪುರಸ್ಕಾರ-ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ- ಸುದ್ದಿ ಕೃಷಿ ಸೇವಾ ಕೇಂದ್ರದಿಂದ-ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯ-ಮಾಧ್ಯಮಗಳ ಸಹಕಾರ ಕೋರಿ ಸುದ್ದಿ ಸಂಪಾದಕರಿಂದ ಸುದ್ದಿಗೋಷ್ಠಿ

0

ಮಂಗಳೂರು: ಲಂಚ ಭ್ರಷ್ಟಾಚಾರದ ವಿರುದ್ಧ ಆಂದೋಲನದ ಮೂಲಕ ಜನಜಾಗೃತಿ ಮೂಡಿಸುತ್ತಾ,ಉತ್ತಮ ಸೇವೆ ಮಾಡುವ ಅಽಕಾರಿಗಳನ್ನು ಜನರೇ ಗುರುತಿಸುವಂತೆ ಮಾಡಿರುವ ಸುದ್ದಿ ಸಮೂಹ ಸಂಸ್ಥೆಗಳ ಪರವಾಗಿ ಆಂದೋಲನಕ್ಕೆ ಮಾಧ್ಯಮ ಸಹಕಾರ ಕೋರಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರು, ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕರೂ ಆಗಿರುವ ಡಾ. ಯು.ಪಿ ಶಿವಾನಂದ್‌ರವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.


ಉತ್ತಮ ಅಧಿಕಾರಿಗಳನ್ನು ಗುರುತಿಸುವಂತೆ ಮನವಿ : ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರದ ಜೊತೆ ಉತ್ತಮ ಸೇವೆಗೆ ಪುರಸ್ಕಾರ ಎಂಬ ಸುದ್ದಿಯ ಜನಾಂದೋಲನದಲ್ಲಿ ಭಾಗಿಯಾದ ಜನರು 100ಕ್ಕೂ ಹೆಚ್ಚು ಅಧಿಕಾರಿಗಳನ್ನು ಗುರುತಿಸಿದ್ದಾರೆ. ನಮ್ಮ ಆಂದೋಲನ ಮುಂದುವರೆಯಲು ಮಾಧ್ಯಮಗಳ ಸಹಕಾರ ಅತ್ಯಗತ್ಯ, ಉತ್ತಮ ಸೇವೆ ನೀಡುತ್ತಿರುವ ಅಽಕಾರಿಗಳನ್ನು ಗುರುತಿಸುವಲ್ಲಿ ಮತ್ತು ಈ ಮೂಲಕ ದ.ಕ.ಜಿಲ್ಲೆಯನ್ನು ಲಂಚ, ಭ್ರಷ್ಟಾಚಾರ ಮುಕ್ತ ಜಿಲ್ಲೆಯಾಗಿಸಲು ನಿಮ್ಮ ಸಹಕಾರವಿರಲಿ ಎಂದು ಪತ್ರಕರ್ತರಲ್ಲಿ ವಿನಂತಿಸಿದರು. ಆಂದೋಲನ ದ.ಕ.ಜಿಲ್ಲೆಯಲ್ಲಿ ಯಶಸ್ವಿಯಾಗುತ್ತಿದ್ದು ಮುಂದೆ ಉತ್ತರ ಕರ್ನಾಟಕಕ್ಕೆ ವಿಸ್ತರಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಡಾ. ಶಿವಾನಂದರು ಮಾಹಿತಿ ನೀಡಿದರು.

ಸುದ್ದಿ ಕೃಷಿ ಸೇವಾ ಕೇಂದ್ರದಿಂದ-ಕೃಷಿಕರಿಗೆ ಸ್ವಾತಂತ್ರ್ಯ ಆಂದೋಲನದ ಬಗ್ಗೆ ವಿವರಣೆ: ಸುದ್ದಿ ಕೃಷಿ ಸೇವಾಕೇಂದ್ರದ ಆರಂಭವಾಗಿದ್ದು ಅದರ ಕಾರ್ಯಯೋಜನೆಗಳ ಬಗ್ಗೆ ಡಾ.ಯು.ಶಿವಾನಂದ್ ವಿವರಿಸಿದರು. ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಆಂದೋಲನದಲ್ಲಿ ರೈತರಿಗೆ ಸಹಕಾರ ನೀಡುತ್ತೇವೆ. ಕೃಷಿಕನಿಗೆ ಸವಲತ್ತುಗಳ ಬಗ್ಗೆ,ಕೃಷಿ ಮಾಡುವ ವಿಧಾನದ ಬಗ್ಗೆ ಮಾಹಿತಿ, ಸಾಲ ಸೌಲಭ್ಯ,ಸಬ್ಸಿಡಿಯ ಬಗ್ಗೆ ಅರಿವು ಮೂಡಿಸಲಾಗುವುದು. ಜೊತೆಗೆ ಮೊದಲು ಜೇನು ಕೃಷಿ ಮತ್ತು ಮನೆಯಲ್ಲಿ ಹಣ್ಣಿನ ಗಿಡ ನೆಡುವ ಆಂದೋಲನಕ್ಕೆ ಮುಂದಾಗುವುದಾಗಿ ತಿಳಿಸಿದರು. ಅಲ್ಲದೇ, ಗಿಡದ ನಿರ್ವಹಣೆಯನ್ನು ಕೂಡ ಸುದ್ದಿ ಕೃಷಿ ಸೇವಾ ಕೇಂದ್ರವಹಿಸಿಕೊಳ್ಳುತ್ತೆ ಎಂದು ವಿವರಿಸಿದರು.

ಮುಳಿಯ-ಸುದ್ದಿ ಸಹಯೋಗದಲ್ಲಿ ಸಪ್ಟೆಂಬರ್ 20ರಂದು ಪುತ್ತೂರಿನಲ್ಲಿ ಕೃಷಿಕೋದ್ಯಮ: ‘ಕೃಷಿ ಬದುಕಿನ ಪಯಣದಲ್ಲಿ ಹೊಸತನದ ಹೆಜ್ಜೆ’ ಎಂಬ ಧ್ಯೇಯದೊಂದಿಗೆ ಮುಳಿಯ ಮತ್ತು ಸುದ್ದಿ ಸಹಯೋಗದಲ್ಲಿ ಕೃಷಿಕೋದ್ಯಮ ಕಾರ್ಯಕ್ರಮ ಸಪ್ಟೆಂಬರ್ 20ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 2ರವರೆಗೆ ಅಪರಂಜಿ ರೂಫ್ ಗಾರ್ಡನ್ ಪುತ್ತೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೃಷಿಕರ ಅನುಭವ, ಮಣ್ಣು ಪರೀಕ್ಷೆ, ಕೃಷಿಯಲ್ಲಿ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಬಳಕೆ,ಕಾರ್ಮಿಕರ ಬಳಕೆ ಇತ್ಯಾದಿ ವಿಚಾರಗಳ ಕುರಿತು ಚರ್ಚಿಸಲಾಗುವುದು ಎಂದು ಡಾ.ಯು.ಪಿ.ಶಿವಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌

ಪತ್ರಿಕಾಗೋಷ್ಠಿಯಲ್ಲಿ ಸುದ್ದಿಯ ಭಾಸ್ಕರ್ ರೈ ಕಟ್ಟ, ರಾಜೇಶ್ ಎಂ.ಎಸ್, ಶಿವಪ್ರಸಾದ್ ಆಲೆಟ್ಟಿ, ದಾಮೋದರ್ ದೊಂಡೋಲೆ, ಸುಧಾಕರ್ ಪಡೀಲ್, ಕುಶಾಲಪ್ಪ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಽಗಳು ಸೇರಿದಂತೆ ವಿವಿಧ ಪತ್ರಿಕಾ ಮತ್ತು ದೃಶ್ಯ ಮಾಧ್ಯಮದ ವರದಿಗಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here