ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರ್ಯಕ್ಟ್ ಕ್ಲಬ್ ತಿಂಗಳಾಡಿ, ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಮಂಗಳೂರು, ಆರೋಗ್ಯ ಕೇಂದ್ರ ತಿಂಗಳಾಡಿ ಇವುಗಳ ಸಹಭಾಗಿತ್ವದಲ್ಲಿ ಸೆ. 6 ರಂದು `ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರವು ` ಆರೋಗ್ಯ ಕೇಂದ್ರ ತಿಂಗಳಾಡಿಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.
ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇದರ ಡಾ.ಗೌರಿ ಪೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ತಿಂಗಳಾಡಿ ಆರೋಗ್ಯ ಕೇಂದ್ರದ ಆಡಳಿತ ಮೆಡಿಕಲ್ ಅಧಿಕಾರಿ ಡಾ.ಭವ್ಯ ಡಿ.ಎಸ್ ಭಾಗವಹಿಸಿದ್ದರು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು.
ಗೌರವ ಉಪಸ್ಥಿತಿಯಾಗಿ ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ ಇದರ ರವಿಕುಮಾರ್ ರೈ, ರೋಟರ್ಯಾಕ್ಟ್ ಕ್ಲಬ್ ತಿಂಗಳಾಡಿ ಅಧ್ಯಕ್ಷ ಪ್ರದ್ವಿನ್ ರೈ.ಕೆ, ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ ಅಧ್ಯಕ್ಷ ಸತೀಶ್ ರೈ ಎಂ,ರೋಟರಿ ಕ್ಲಬ್ ಪುತ್ತೂರು ಈಸ್ಟ್ ಕಾರ್ಯದರ್ಶಿ ಶಶಿಕಿರಣ್ ರೈ, ರೋಟರ್ಯಕ್ಟ್ ಕ್ಲಬ್ ತಿಂಗಳಾಡಿ ಸಭಾಪತಿ ನಿಶಾಂತ್ ರೈ, ರೋಟರ್ಯಕ್ಟ್ ಕೆನರಾ ವಲಯ ಜೊತೆ ಕಾರ್ಯದರ್ಶಿ ಹರೀಶ್ ರೈ ಎಂ, ರೋಟರ್ಯಕ್ಟ್ ತಿಂಗಳಾಡಿ ಕಾರ್ಯದರ್ಶಿ ಧನುಷ್ ರೈ ಬಿ, ಸದಸ್ಯರಾದ ಹರ್ಷಿತ್ ರೈ ,ಕೆ ಉಪಸ್ಥಿತರಿದ್ದರು.
ಒಟ್ಟು 175 ಮಂದಿ ಫಲಾನುಭವಿಗಳು
ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಹಲವರಿಗೆ ಉಚಿತವಾಗಿ ಕನ್ನಡಕವನ್ನು ನೀಡಲಾಯಿತು. 6ಮಂದಿ ಫಲಾನುಭವಿಗಳನ್ನು ಹೆಚ್ಚಿನ ಚಿಕಿತ್ಸೆ ನೀಡಲು ಮಂಗಳೂರಿಗೆ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಲಾಯಿತು.