ನೆಟ್ಟಣಿಗೆ ಮುಡ್ನೂರು:ಒಕ್ಕಲಿಗ ಗೌಡ ಸೇವಾ ಸಂಘ ನೆಟ್ಟಣಿಗೆ ಮುಡ್ನೂರು ಗ್ರಾಮ ಸಮಿತಿ, ಯುವ ಘಟಕ, ಮಹಿಳಾ ಘಟಕ ಇವುಗಳ ಸಹಕಾರದೊಂದಿಗೆ ಒಕ್ಕಲಿಗ ಸ್ವ ಸಹಾಯ ಸಂಘದ ಒಕ್ಕೂಟ ನೆಟ್ಟಣಿಗೆ ಮುಡ್ನೂರು ಇದರ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಗಜಾನನ ಹಿರಿಯ ಪ್ರಾಥಮಿಕ ಶಾಲೆ ಈಶ್ವರಮಂಗಳದಲ್ಲಿ ಸೆ.11 ರಂದು ನಡೆಯಿತು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರು ಹಿರಿಯರಾದ ಹೊನ್ನಪ್ಪ ಗೌಡ ಕೆಮ್ಮತಡ್ಕ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತಾಲೂಕು, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷರಾದ ವಿಶ್ವನಾಥ ಗೌಡ ಕೆಯ್ಯುರು ಮಾತನಾಡಿ ಸಮುದಾಯವನ್ನು ಸಂಘಟಿಸುವುದರ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡ ಒಕ್ಕೂಟಕ್ಕೆ ಅಭಿನಂದನೆ ಸಲ್ಲಿಸಿದರು
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿವಿ ಮನೋಹರ ಮಾತನಾಡಿ ಸಮಾಜ ಬಾಂಧವರು ಸ್ವ ಸಹಾಯ ಸಂಘದ ಮೂಲಕ ಸಂಘಟಿತ ಮನೋಭಾವನೆಯನ್ನು ಬೆಳೆಸಿಕೊಂಡು, ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಆರ್ಥಿಕವಾಗಿ ಸದೃಢವಾಗುವುದರ ಜೊತೆಗೆ ಸ್ವಾವಲಂಬಿ ಜೀವನ ನಡೆಸುವಂತಹ ಆಗಬೇಕು ಎಂದರು.
ಒಕ್ಕಲಿಗ ಸ ಸಹಾಯ ಸಂಘದ ಒಕ್ಕೂಟ ಅಂಗಳದ ಅಧ್ಯಕ್ಷರಾದ ಲೋಕೇಶ್ ಚಾಕೋಟಿ ಮಾತನಾಡಿ ಸ್ವಸಹಾಯ ಸಂಘಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಘಟಿತರಾಗಬೇಕು ಸಮುದಾಯದ ಸಂಸ್ಕೃತಿ, ಆಚಾರ ವಿಚಾರಗಳನ್ನು ಕಾರ್ಯಕ್ರಮಗಳಲ್ಲಿ ಹಿರಿಯರ ಮಾರ್ಗದರ್ಶನದಂತೆ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಮೂಡಿಬರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಷಪ್ಪ ಗೌಡ ಮೆಣಸಿನಕಾನ,ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತನಾಡಿದರು.
ವೇದಿಕೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ದಿವಾಕರ ಗೌಡ ಮಾಡ್ಯಲಮಜಲು,ಮಹಿಳಾ ಘಟಕದ ಅಧ್ಯಕ್ಷೆ ಮೋಹನಾಂಗಿ ಬೀಜಂತಡ್ಕ ಒಕ್ಕಲಿಗ ಸ್ವ ಸಹಾಯ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ದಿವ್ಯ ಪ್ರಸಾದ್ ಎ ಎಂ, ಮೇಲ್ವಿಚಾರಕರಾದ ವಿಜಯಕುಮಾರ್ ,ಪ್ರೇರಕರಾದ ಶ್ರೀಕಾಂತ್ ಗೌಡ ಉಪಸ್ಥಿತರಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಉಚಿತ ಪುಸ್ತಕ ವಿತರಣೆ
2021-2022 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಸಾಧನೆಗೈದ ನೆಟ್ಟಣಿಗೆ ಮೂಡ್ನೂರು ಗ್ರಾಮದ ನೀರಳಿಕೆ ಕೃಷ್ಣಪ್ಪ ಗೌಡ ಮತ್ತು ಕೋಮಲ ದಂಪತಿಗಳ ಪುತ್ರಿ ಕೃತಿ ಕೆ ಎಂ, ಈಶ್ವರಮಂಗಳದ ಕತ್ರಿಬೈಲು ಚಂದ್ರಶೇಖರ ಗೌಡ ಹಾಗೂ ಗಾಯತ್ರಿ ದಂಪತಿಗಳ ಪುತ್ರಿ ಶ್ರಾವಣಿ ಕೆ ಸಿ, ಕೊಂಕಣಿಗುಂಡಿ ಜನಾರ್ಧನ ಗೌಡ ಹಾಗೂ ಸೀತಾ ದಂಪತಿಗಳ ಪುತ್ರಿ ತನ್ವಿ, ಮಾಡ್ಯಲ ಮಜಲು ಪದ್ಮನಾಭ ಗೌಡ ಹಾಗೂ ಪುಷ್ಪವತಿ ದಂಪತಿಗಳ ಪುತ್ರಿ ಅನುಜ್ಞಾ ಎಂ ಪಿ, ಪುಳಿತ್ತಾಡಿ ಬಂದ್ಯಡ್ಕ ನಾಗರಾಜ ಗೌಡ ಹಾಗೂ ಹರ್ಷಿತಾ ದಂಪತಿಗಳ ಪುತ್ರಿ ದಿಶಾ, ಪೂರ್ಣಾತ್ಮರಾಮ ಈಶ್ವರಮಂಗಳ ಹಾಗೂ ಜಯಂತಿ ದಂಪತಿಗಳ ಪುತ್ರಿ ಪೂರ್ಣಪ್ರಜ್ಞ,ಹಾಗೂ ಗೇಟ್ ಪರೀಕ್ಷೆ 2022 ಇದರಲ್ಲಿ ಅತ್ಯುತ್ತಮ ಸಾಧನೆ ಮಾಡಿದ ದೇಲಂಪಾಡಿ ಮಿತ್ತಂತರ ಶಿವಪ್ಪ ಗೌಡರ ಪುತ್ರಿ ಸವಿತಾ ಇವರುಗಳನ್ನು ಶಾಲು ಹಾಕಿ,ಸ್ಮರಣಿಕೆ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಆಡ್ಡ0ತಡ್ಕ ಸುಂದರ ಗೌಡ ಮತ್ತು ಸತ್ಯಭಾಮ ದಂಪತಿಗಳ ಪುತ್ರಿ ಅನುಷಾ ಎ, ಆ ಅಡ್ಡ0ತಡ್ಕ ಕುಶಾಲಪ್ಪ ಗೌಡ ಇಂದಿರಾ ದಂಪತಿಗಳ ಪುತ್ರಿ ಆಶಾ ಎ,ಅಡ್ಡ0ತಡ್ಕ ದಿ. ಚಂದ್ರಶೇಖರ ಗೌಡ ಮತ್ತು ಪ್ರವೀಣ ಕುಮಾರಿ ದಂಪತಿಗಳ ಪುತ್ರಿ ಅನುಶ್ರೀ ಎ, ಅಡ್ಡ0ತಡ್ಕ ಭಾಸ್ಕರ ಗೌಡ ಜ್ಯೋತಿ ದಂಪತಿಗಳ ಪುತ್ರಿ ಬಿಂದು ಎ ಬಿ, ದೇಲಂಪಾಡಿ ಲಕ್ಷ್ಮಣಗೌಡ ಮತ್ತು ಸರೋಜಿನಿ ದಂಪತಿಗಳ ಪುತ್ರ ಸ್ಕಂದ ಡಿ ಎಲ್, ನೂಜಿಬೈಲು ಚಂದ್ರಶೇಖರ ಗೌಡ ಹಾಗೂ ಚಂದ್ರಕಲಾ ದಂಪತಿಗಳ ಪುತ್ರ ಅಖಿಲ್ ವಿ ಸಿ , ಅಡ್ಡ0ತಡ್ಕ ಶ್ರೀಧರ ಗೌಡ ಸೀತಾಶ್ರೀ ದಂಪತಿಗಳ ಪುತ್ರಿ ರಕ್ಷಾ ಇವರುಗಳನ್ನು ಶಾಲು ಹಾಕಿ, ಹೂಗುಚ್ಛ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಹಾಗೂ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.
ನಾಟಿ ವೈದ್ಯ ಕೊಂಬೆಟ್ಟು ಹೊನ್ನಪ್ಪ ಗೌಡರಿಗೆ ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ನಾಟಿ ವೈದ್ಯರಾಗಿರುವ ಕೊಂಬೆಟ್ಟು ಹೊನ್ನಪ್ಪ ಗೌಡರಿಗೆ ಶಾಲು ಹೊದಿಸಿ,ಹಾರ, ಸ್ಮರಣಿಕೆ, ಹೂಗುಚ್ಚ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ನವೀನ್ ಗೌಡ ಕುಕ್ಕುಡೇಳು, ವಿಜಯ ಕುಮಾರ್ ಕೆಮ್ಮತಡ್ಕ, ಚಿದಾನಂದ ಗೌಡ ಸಾರಕೂಟೇಲು,ಭಾಸ್ಕರ ಗೌಡ ದೊಡ್ಡಮನೆ, ಜಾನಕಿ ಈಶ್ವರಮಂಗಳ, ಲಲಿತಾಸಂಜೀವ ಗೌಡ ಚಾಕೋಟೆ, ವಸಂತಿ ಪಟ್ರೋಡಿ,ಸರೋಜಿನಿ ದೇಲಂಪಾಡಿ, ಸೇವಂತಿ ಮಾಡ್ಯಲಮಜಲು ಹೂಗುಚ್ಛ ನೀಡಿ ಸ್ವಾಗತಿಸಿದರು. ಜಸ್ಮಿತಾ,ಸ್ವಾತಿ,ಅನುಷಾ ಸಂಘದ ಗೀತೆ ಪ್ರಾರ್ಥಿಸಿದರು. ಲಲಿತಾ ಚಾಕೋಟೆ ಭಗವದ್ಗೀತಾ ಚಿಂತನ ವಾಚಿಸಿದರು. ದೇವಿಪ್ರಸಾದ್ ಅಡ್ಡ0ತ್ತಡ್ಕ ಸ್ವಾಗತಿಸಿದರು, ಕಲಾವತಿ ಎಸ್ ಗೌಡ ವಂದಿಸಿದರು, ಗಾಯತ್ರಿ ಕತ್ರಿಬೈಲು ಕಾರ್ಯಕ್ರಮ ನಿರ್ವಹಿಸಿದರು.