- ಅಧ್ಯಕ್ಷರಾಗಿ ಮಹಮ್ಮದ್ ಶರೀಫ್, ಪ್ರ.ಕಾರ್ಯದರ್ಶಿ: ನಾಸಿರ್ ಎಂ, ಕೋಶಾಧಿಕಾರಿ: ಹನೀಫ್ ಎಂ, ಉಪಾಧ್ಯಕ್ಷ: ರಫೀಕ್ ಬಿ.ಎ
ಪುತ್ತೂರು: ಹಝ್ರತ್ ಬಿಲಾಲ್ ಜುಮಾ ಮಸೀದಿ ಮತ್ತು ಮಿಫ್ತಾಹುಲ್ ಉಲೂಂ ಮದ್ರಸ ಮೂರುಗೋಳಿ ಇದರ ಅಧೀನದಲ್ಲಿ ಉಪಸಮಿತಿಯಯಾಗಿ ಕಾರ್ಯಾಚರಿಸುತ್ತಿರುವ ಸಿರಾಜುಲ್ ಹುದಾ ದಫ್ ಕಮಿಟಿ ಮೂರುಗೋಳಿ ಇದರ ೩೦ನೇ ವಾರ್ಷಿಕ ಮಹಾಸಭೆ ಎಂಯುಎಂ ಮದ್ರಸ ಹಾಲ್‌ನಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹಮ್ಮದ್ ಶರೀಫ್ ಎಂ.ಎಸ್ ಮೂರುಗೋಳಿ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಎಂ ಮೂರುಗೋಳಿ ಹಾಗೂ ಕೋಶಾಧಿಕಾರಿಯಾಗಿ ಹನೀಫ್ ಎಂ ಮೂರುಗೋಳಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಫೀಕ್ ಬಿ.ಎ ಆರತ್ತಿಬಳ್ಳಿ, ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಕಜಮಾರ್ ಹಾಗೂ ಜಾಫರ್ ಭಾರ್ಯ ಮೂರುಗೋಳಿ ಆಯ್ಕೆಯಾಗಿದ್ದಾರೆ. ಅಲ್ಲದೇ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.