ಪುತ್ತೂರು:ಸರ್ವೆ ಇಲಾಖೆ ಗುರುತು ಮಾಡಿದ ಸರಕಾರಿ ಸ್ಥಳದಲ್ಲೇ ಬಸ್ ತಂಗುದಾಣ ನಿರ್ಮಾಣ ಆಗಬೇಕೆಂದು ಆಗ್ರಹಿಸಿ ಸಾರ್ವಜನಿಕರು, ವಿದ್ಯಾರ್ಥಿಗಳು ದಾರಂದಕುಕ್ಕುವಿನಲ್ಲಿ ಶೆಡ್ ರಚನೆಯ ತಾತ್ಕಾಲಿಕ ಬಸ್ ತಂಗುದಾಣದ ಎದುರು ಪ್ರತಿಭಟನೆ ನಡೆಸಿದ ಘಟನೆ ಸೆ.14ರಂದು ಸಂಜೆ ನಡೆದಿದೆ.ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸ ಬಾರದು, ನಮಗೆ ಇದೇ ಸ್ಥಳದಲ್ಲಿ ಬಸ್ ತಂಗುದಾಣ ಆಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪಕ್ಕದ ಮನೆಯವರಿಂದ ಕಿರುಕುಳ: ಈ ಸಂದರ್ಭ ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ ಅವರು ಮಾತನಾಡಿ ಶಾಸಕರ ಅನುದಾನದಲ್ಲಿ ರೂ.5 ಲಕ್ಷ ವೆಚ್ಚದಲ್ಲಿ ಬಸ್ ತಂಗುದಾಣ ನಿರ್ಮಾಣ ಆಗುತ್ತಿದೆ.ಆದರೆ ಪಕ್ಕದ ಮನೆಯವರು ಮೇಲ್ಮಟ್ಟದ ಅಽಕಾರಿಗಳಿಂದ -ನ್ ಮಾಡಿಸಿ ಕಿರುಕುಳ ನೀಡುತ್ತಿದ್ದಾರೆ.ಆದರೆ ನಾವು ಯಾವುದಕ್ಕೂ ಹಿಂಜರಿಯದೆ ಕಾಮಗಾರಿ ನಡೆಸುತ್ತಿದ್ದೇವೆ.ಜನರ ಬೇಡಿಕೆಯಂತೆ ಈ ಬಸ್ ತಂಗುದಾಣ ನಿರ್ಮಾಣ ಮಾಡಲಾಗುತ್ತಿದೆ.ಮಾಜಿ ಸೈನಿಕರು ಬಂದಿದ್ದ ವೇಳೆ ಅವರಿಗೆ ಇಲ್ಲಿನ ನೈಜ ಪರಿಸ್ಥಿತಿ ತಿಳಿಸಿದ್ದೇವೆ.ಆಗ ಅವರು ವಿಚಾರ ಮನಗಂಡು ನಮ್ಮ ಕೆಲಸವನ್ನು ಶ್ಲಾಸಿದ್ದಾರೆ.ಈ ನಡುವೆ ಕೆಲವು ಮಂದಿ ಶಾಸಕರ ಕುರಿತು ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಮಗಾರಿಗೆ ಅಡ್ಡಿ ಪಡಿಸಿದರೆ ಅಮರಣಾಂತ ಉಪವಾಸ ಧರಣಿ: ಬಿಜೆಪಿ ಬನ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್ ಅವರು ಮಾತನಾಡಿ ಕೊಡಿಮರ, ಬನ್ನೂರು, ಕೋಡಿಂಬಾಡಿಯ ಸಾವಿರಕ್ಕೂ ಹೆಚ್ಚು ಮಂದಿಗೆ ಇಲ್ಲಿ ಬಸ್ ತಂಗುದಾಣ ಬೇಕೆಂಬ ಬೇಡಿಕೆಯಂತೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಪುತ್ತೂರು ಉಪ್ಪಿನಂಗಡಿ ಚತುಷ್ಪಥ ರಸ್ತೆಯ ಬದಿಯಲ್ಲಿ ಸುಂದರ ಬಸ್ ತಂಗುದಾಣ ನಿರ್ಮಾಣ ಮಾಡಲಾಗುತ್ತಿದೆ.ಆದರೆ ಯಾವುದೇ ದಾಖಲೆ ಇಲ್ಲದಿದ್ದರೂ ನಮ್ಮ ಜಾಗ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಹೋರಾಟ ಮಾಡುವ ಮೂಲಕ ಬಸ್ ತಂಗುದಾಣದ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ.ಮನೆಗೆ ಹೋಗಲು ಬೇರೆ ದಾರಿ ಇದ್ದರೂ ನಿರ್ಮಾಣ ಹಂತದಲ್ಲಿರುವ ಬಸ್ ತಂಗುದಾಣದದಲ್ಲೇ ದಾರಿ ಬೇಕೆಂದು ಪಟ್ಟು ಹಿಡಿಯುವುದು ಸರಿಯಲ್ಲ.ಬಸ್ ತಂಗುದಾಣಕ್ಕೆ ಅಡ್ಡಿಪಡಿಸಿದರೆ ಇಲ್ಲಿನ ಸಾರ್ವಜನಿಕರು ಸುಮ್ಮನೆ ಇರುವುದಿಲ್ಲ.ಮುಂದೆ ಸಮಸ್ಯೆ ತಂದೊಡ್ಡಿದರೆ ಇವತ್ತಿನ ಸಾಂಕೇತಿಕ ಪ್ರತಿಭಟನೆ ಮುಂದೆ ರಸ್ತೆ ತಡೆದು ಅಮರಣಾಂತ ಉಪವಾಸದ ಮೂಲಕ ಧರಣಿ ಹೂಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಬನ್ನೂರು ಪಂಚಾಯತ್ ಸದಸ್ಯರಾದ ಶೀನಪ್ಪ ಕುಲಾಲ್, ರಾಘವೇಂದ್ರ, ಸ್ಮಿತಾ ನಾಯಕ್, ತಿಮ್ಮಪ್ಪ ಪೂಜಾರಿ, ಮಾಜಿ ಸದಸ್ಯ ರತ್ನಾಕರ ಪ್ರಭು, ತಿಮ್ಮಪ್ಪ ಗೌಡ ಬೀರ‍್ನಹಿತ್ಲು, ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ, ಚಿದಾನಂದ, ರಾಮಣ್ಣ ಗೌಡ ಗುಂಡೋಲೆ, ಪುತ್ತೂರಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಬಸ್ ತಂಗುದಾಣ ಬೇಕೇಬೇಕು ಎಂದು ಘೊಷಣೆ ಕೂಗಲಾಯಿತು.