- ಭಾರತದ ನಂ.1 ಜೆರಾಯಿ ವ್ಯಾಯಾಮ ಸಲಕರಣೆಗಳ ಅಳವಡಿಕೆಯೊಂದಿಗೆ ಪಾದಾರ್ಪಣೆ
ಪುತ್ತೂರು: ಪುತ್ತೂರಿನ ಫಿಟ್‌ನೆಸ್ ಇತಿಹಾಸದಲ್ಲಿ ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ಓಪನ್ ಏರ್ ಬೃಹತ್ ಸುಸಜ್ಜಿತ ಜಿಮ್ ಎನ್ನುವ ಹೆಗ್ಗಳಿಕೆಯೊಂದಿಗೆ ಮುತ್ತಿನನಗರಿ ಪುತ್ತೂರಿನ ಎ.ಪಿ.ಎಂ.ಸಿ ರಸ್ತೆಯಲ್ಲಿನ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಮತ್ತೊಂದು ಕೊಡುಗೆಯಾಗಿ `ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್’ ಕಳೆದ ವರ್ಷ ಪುತ್ತೂರು ಸಿಟಿ ಆಸ್ಪತ್ರೆ ಬಳಿಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿ ಲೋಕಾರ್ಪಣೆಗೊಂಡಿದ್ದು, ಇದೀಗ ಈ ಸಂಸ್ಥೆ ನವೀಕೃತಗೊಂಡು ಜಿಮ್ ಪ್ರಿಯರ ಆಶೀರ್ವಾದದಿಂದ ಪ್ರಸ್ತುತ ವರ್ಷ ಎರಡನೇ ವರ್ಷಕ್ಕೆ ಯಶಸ್ವಿಯಾಗಿ ಪಾದಾರ್ಪಣೆಗೊಂಡಿದೆ.
Jerai ವ್ಯಾಯಾಮ ಸಲಕರಣೆಗಳ ಅಳವಡಿಕೆ:
ದೈನಂದಿನ ಜೀವನದ ಒತ್ತಡದ ಜಂಜಾಟದಲ್ಲಿರುವ ಮನುಷ್ಯನಿಗೆ ಸದೃಢ ಆರೋಗ್ಯ ಹೊಂದಲು ಹಲವಾರು ಆಯಾಮಗಳಲ್ಲಿ ವ್ಯಾಯಾಮ ಅಗತ್ಯವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ದೊಡ್ಡ ದೊಡ್ಡ ನಗರಗಳಳ್ಲಿ ವ್ಯಾಯಾಮಕ್ಕೆ ಪೂರಕವಾಗಿ ಕಾಣ ಸಿಗುವ ಅತ್ಯಾಧುನಿಕ ವ್ಯವಸ್ಥೆಯ ಆಗರವನ್ನು ಇಲ್ಲಿನ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ಹೊಂದಿದೆ. ಮಳೆಗಾಲದಲ್ಲಿ ಮನುಷ್ಯನಿಗೆ ಹೊರಾಂಗಣದಲ್ಲಿ ಫಿಟ್ನೆಸ್ ಚಟುವಟಿಕೆಗಳನ್ನು ಮಾಡಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಜಿಮ್‌ನಂತಹ ಒಳಾಂಗಣ ಕ್ರೀಡಾಂಗಣ ಮನುಷ್ಯನ ಸದೃಢ ಆರೋಗ್ಯದ ಚಟುವಟಿಕೆಗಳಿಗೆ ಪೂರಕವಾಗಿ ಪರಿಣಮಿಸುತ್ತದೆ. ಸಂಸ್ಥೆಯು ಪಾದಾರ್ಪಣೆಯ ಪ್ರಯುಕ್ತ ವ್ಯಾಯಾಮ ಪ್ರಿಯರಿಗೆ ಭರ್ಜರಿ ಸಿಹಿ ಕೊಡುಗೆಯನ್ನು ನೀಡಲು ಮುಂದೆ ಬಂದಿದ್ದು, ಭಾರತದ ನಂಬರ್ ವನ್ ಜಿಮ್ ವ್ಯಾಯಾಮ ಸಲಕರಣೆಗಳ ಕಂಪೆನಿ ಎನಿಸಿದ ಜೆರಾಯಿ ವ್ಯಾಯಾಮ ಸಲಕರಣೆಗಳನ್ನು ಅಳವಡಿಸುವುದರೊಂದಿಗೆ ವ್ಯಾಯಾಮ ಪ್ರಿಯರಿಗೆ ಅಪೂರ್ವ ಕೊಡುಗೆಯನ್ನು ನೀಡಿದೆ.
ನೂರಾರು ಪುರುಷರು/ಮಹಿಳೆಯರಿಂದ ಫಿಟ್ನೆಸ್ ಜಿಮ್:
ಈ ಸಂಸ್ಥೆಯಲ್ಲಿ ಹೃದಯ ವ್ಯಾಯಾಮ, ದೇಹ ನಿರ್ಮಾಣ ವರ್ಕೌಟ್, ಕ್ರೀಡಾ ಫಿಟ್ನೆಸ್, ಕ್ರಾಸ್‌ಫಿಟ್ ತರಬೇತಿ, ಝುಂಬಾ, ಆರೋಬಿಕ್ ತರಬೇತಿ, ಫಿಸಿಯೋಥೆರಪಿ ತರಬೇತಿ, ಕ್ಯಾಲಿಸ್ಥೆನಿಕ್ಸ್ ತರಬೇತಿ, ಶಕ್ತಿ ತರಬೇತಿ, ಸ್ಟ್ರೆಚ್ಚಿಂಗ್ ಮತ್ತು ಫ್ಲೆಕ್ಸಿಬಿಲಿಟಿ, ಸಮತೋಲನ ವ್ಯಾಯಾಮ, ಸಸ್ಪೆನ್ಸನ್ ತರಬೇತಿ, ಹಗ್ಗ ಹತ್ತುವುದು, ಚುರುಕುತನದ ಏಣಿ, ತೂಕ ಹೆಚ್ಚಳ ಹಾಗೂ ತೂಕ ಕಡಿಮೆಗೊಳಿಸುವುದು, ಗುಂಪು ತರಬೇತಿ, ಪವರ್ ಯೋಗ ಮುಂತಾದ ವ್ಯಾಯಾಮಗಳನ್ನು ನುರಿತ ತರಬೇತುದಾರರಿಂದ ತರಬೇತು ನೀಡಲಾಗುತ್ತದೆ. ನೂರಾರು ಮಂದಿ ಪುರುಷರು ಹಾಗೂ ಮಹಿಳೆಯರು ಈ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾ ಆರೋಗ್ಯದ ಸಮತೋಲನವನ್ನು ಕಾಯ್ದುಕೊಂಡು ಬಂದಿರುತ್ತಾರೆ. ಇಲ್ಲಿನ ಲೇಡೀಸ್ ಜಿಮ್ ಮತ್ತಷ್ಟು ವ್ಯಾಯಾಮ ಸಲಕರಣೆಗಳೊಂದಿಗೆ ಅತ್ಯಂತ ಸುಸಜ್ಜಿತ ಮಹಿಳಾ ಜಿಮ್ ಆಗಿ ಪರಿವರ್ತನೆ ಹೊಂದಿದೆ.
ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂ ದಾದ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ನೂತನ ಆಯಾಮದೊಂದಿಗೆ ಸಜ್ಜುಗೊಂಡ ಜಿಮ್‌ನ್ನು ಪವಿತ್ರ ಜಲ ಸಿಂಪಡಿಸಿ, ಆಶೀರ್ವಚನದೊಂದಿಗೆ ಶುಭ ಹಾರೈಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ವಲೇರಿಯನ್ ಡಾಯಸ್, ನಿರ್ದೇಶಕ ಮನೋಜ್ ಡಾಯಸ್ ಉಪಸ್ಥಿತರಿದ್ದರು.
-ಜಿಮ್ ಪ್ರೇಮಿಗಳ ಅನುಕೂಲಕ್ಕಾಗಿ ಇದೀಗ ಭಾರತದ ನಂ.1 ಜೆರಾಯಿ ಫಿಟ್ನೆಸ್ ಸಲಕರಣೆಗಳ ಅಳವಡಿಕೆಯೊಂದಿಗೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಪರಿಚಯ
-ಪುರುಷರ ಹಾಗೂ ಮಹಿಳೆಯರ ಫಿಟ್ನೆಸ್ ಜಿಮ್‌ನಲ್ಲಿ ಕ್ರಾಸ್‌ಫಿಟ್ ವರ್ಕೌಟ್ ಹೊಂದಿರುವುದು ಕ್ರಿಸ್ಟೋಫರ್ ಫಿಟ್ನೆಸ್ ಸಂಸ್ಥೆ ಮಾತ್ರ ಹೊಂದಿರುವುದು ಹೆಗ್ಗಳಿಕೆ
ಸಮಯ..
ಯೂನಿಸೆಕ್ಸ್ ಜಿಮ್:ಬೆಳಿಗ್ಗೆ 5.30 ರಿಂದ 9.30, ಸಂಜೆ 4 ರಿಂದ-10.00
ಲೇಡೀಸ್ ಜಿಮ್: ಬೆಳಿಗ್ಗೆ 5.30 ರಿಂದ-12.00, ಸಂಜೆ 4 ರಿಂದ-8.00