ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಸೆಂಟರ್‌ನ 5ನೇ ವಾರ್ಷಿಕೋತ್ಸವ; ಉಚಿತ ಚರ್ಮ ತಪಾಸಣೆ ಶಿಬಿರ

0

ಪುತ್ತೂರು: ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಸೆಂಟರ್‌ನ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನ 1ರವರೆಗೆ ಉಚಿತ ಚರ್ಮ ತಪಾಸಣೆ ಶಿಬಿರ ಸಂಸ್ಥೆಯಲ್ಲಿ ನಡೆಯುತ್ತಿದೆ.


ಡಾ. ಸಚಿನ್ ಮನೋಹರ್ ಶೆಟ್ಟಿ ಅವರು ಚರ್ಮ ತಪಾಸಣಾ ಶಿಬಿರವನ್ನು ನಡೆಸಿಕೊಡುತ್ತಿದ್ದು, ಎಲ್ಲಾ ರೀತಿಯ ಚರ್ಮರೋಗಗಳಿಗೆ ಸಂಬಂಧಪಟ್ಟ ಚಿಕಿತ್ಸೆಯನ್ನು ಶುಕ್ರವಾರ ಉಚಿತವಾಗಿ ನೀಡಲಾಗುತ್ತಿದೆ.

ವರ್ಷದಲ್ಲಿ 4 ಬಾರಿ ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಸೆಂಟರ್‌ನಲ್ಲಿ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. ವಾರ್ಷಿಕೋತ್ಸವ, ವಿಶ್ವ ಸೋರಿಯಾಸೀಸ್ ದಿನ, ತೊನ್ನು ರೋಗದ ದಿನ, ಕುಷ್ಠ ರೋಗದ ದಿನದಂದು ಉಚಿತ ತಪಾಸಣಾ ಶಿಬಿರವನ್ನು ಇಲ್ಲಿ ನಡೆಸಲಾಗುತ್ತದೆ.

ಇತ್ತೀಚೆಗೆ ಹೊಸ ಲೇಸರ್ ಸೆಂಟರನ್ನು ಆರಂಭಿಸಿದ್ದು, ಸೋರಿಯಾಸಿಸ್, ತೊನ್ನುರೋಗ, ಅಲರ್ಜಿ ಮೊದಲಾದ ರೋಗಗಳಿಗೆ ಈ ಯಂತ್ರದಿಂದ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ, ಇನ್ನೊಂದು ಲೇಸರ್ ಯಂತ್ರದಿಂದ ಆರೋಗ್ಯ ವರ್ಧಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ದೇಹದಲ್ಲಿ ಬೆಳೆಯುವ ಅನಪೇಕ್ಷಿತ ಕೂದಲುಗಳನ್ನು ಇಲ್ಲವಾಗಿಸುವಲ್ಲಿಯೂ ಈ ಯಂತ್ರದ ಚಿಕಿತ್ಸೆ ಪ್ರಯೋಜನಕಾರಿ.
ಉಚಿತ ತಪಾಸಣಾ ಶಿಬಿರದಲ್ಲಿ ಸುಮಾರು 60ರಿಂದ 70ರಷ್ಟು ಮಂದಿ ಸಂದರ್ಶನ ಕಾಯ್ದಿರಿಸಿದ್ದು, ಅವರುಗಳಿಗೆ ಉಚಿತವಾಗಿ ತಪಾಸಣೆ ನಡೆಸಲಾಗುವುದು. ಅಲ್ಲದೇ ಕೆಲ ಔಷಧಿಗಳನ್ನೂ ಉಚಿತವಾಗಿಯೇ ನೀಡಲಾಗುತ್ತಿದೆ. ಇನ್ನೂ ಕೆಲ ಔಷಧಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here