ನರೇಂದ್ರ ಪ.ಪೂ.ಕಾಲೇಜಿನಲ್ಲಿ ಷೇರು ಮಾರುಕಟ್ಟೆಯ ಮೂಲಭೂತ ಸೂತ್ರಗಳು-ವಿಶೇಷ ಉಪನ್ಯಾಸ ಕಾರ್‍ಯಕ್ರಮ

0

ಪುತ್ತೂರು:  ಹೂಡಿಕೆಯು ನಿಮ್ಮ ಸುಭದ್ರ ಮತ್ತು ಸುರಕ್ಷಿತ ಭವಿಷ್ಯಕ್ಕೆ ಅಗತ್ಯವಾಗಿದೆ. ನಿಮ್ಮ ಹೂಡಿಕೆಯಿಂದ ಹೆಚ್ಚುವರಿ ಏನನ್ನಾದರೂ ಪಡೆಯಲು ಷೇರು ಮಾರುಕಟ್ಟೆಯು ಷೇರುಗಳು ಮತ್ತು ಓಪ್ಷನ್ಸ್ ಗಳಂತಹ ಸೆಕ್ಯೂರಿಟಿಗಳ ಖರೀದಿ ಮತ್ತು ವ್ಯಾಪಾರದ ಲಾಭದಾಯಕ ಅವಕಾಶವನ್ನು ಒದಗಿಸುತ್ತದೆ.ಮಾರುಕಟ್ಟೆಯು ಷೇರಿನ ಬೆಲೆಯನ್ನು ನಿರ್ಧರಿಸುತ್ತದೆ. ಷೇರಿನ ಬೆಲೆಯನ್ನು ಬೇಡಿಕೆ ಮತ್ತು ಪೂರೈಕೆಯಿಂದ ನಿರ್ಧರಿಸಲಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಲಕ್ಷ್ಮಿ ವಿ.ಭಟ್ ಇವರು ಹೇಳಿದರು.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಷೇರು ಮಾರುಕಟ್ಟೆಯ ಮೂಲಭೂತ ಸೂತ್ರಗಳು ಎಂಬ ಕುರಿತಾಗಿ ನಡೆದ ವಿಶೇಷ ಉಪನ್ಯಾಸ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.

ಷೇರು ಮಾರುಕಟ್ಟೆಯ ಕಾರ್‍ಯನಿರ್ವಹಣೆಯ ಬಗ್ಗೆ,ಮೂಲಭೂತ ವಿಷಯಗಳ ಬಗ್ಗೆ,ಟ್ರೇಡಿಂಗ್,ಹಣಕಾಸಿನ ಸಾಧನಗಳ ವಿಧಗಳು ಮತ್ತು ನಿಯಮಿತ ಹೂಡಿಕೆದಾರರಿಂದ ಹೆಚ್ಚು ಉತ್ತಮ ಆದಾಯವನ್ನು ನೀಡುವ ಯಶಸ್ವಿ ಟ್ರೇಡಿಂಗ್ ತಂತ್ರಗಳ ಬಗ್ಗೆ ಮಾಹಿತಿಯನ್ನು ವಿವರಿಸಿದರು.

ವೇದಿಕೆಯಲ್ಲಿ ಕಾಲೇಜಿನ ರಸಾಯನ ಶಾಸ್ತ್ರದ ಉಪನ್ಯಾಸಕರಾದ ಶ್ರೀಮತಿ ಶಶಿಕಲಾ ಮತ್ತು ವಾಣಿಜ್ಯ ಸಂಘದ ಸಂಯೋಜಕರಾದ ಸೌಮ್ಯ ಉಪಸ್ಥಿತರಿದ್ದರು. ವಾಣಿಜ್ಯ ಸಂಘದ ಸಂಯೋಜಕರಾದ ಶ್ರೀಮತಿ ಅಕ್ಷತಾ ಭಾಗವಹಿಸಿದ್ದರು. ಕಾರ್‍ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ದೀಪ್ತಿ ಸ್ವಾಗತಿಸಿ,ಶ್ರಾವ್ಯ ವಂದಿಸಿದರು.

LEAVE A REPLY

Please enter your comment!
Please enter your name here