- ದಲ್ಕಾಜೆಗುತ್ತು ಮನೆತನದ ಹಿರಿಯರಾದ ಸಂಜೀವ ಸುವರ್ಣ ನಿಧನ
ಪುತ್ತೂರು: ದಲ್ಕಾಜೆಗುತ್ತು ಮನೆತನದ ಹಿರಿಯರಾದ ಸಂಜೀವ ಸುವರ್ಣ(90ವ)ರವರು ವಯೋಸಹಜ ಅನಾರೋಗ್ಯದಿಂದಾಗಿ ಸೆ.17ರಂದು ಪುಣಚ ಗ್ರಾಮದ ಮೂರಿಬೆಟ್ಟು ಎಂಬಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾಗಿ, ಪುಣಚ ಮಂಡಲ ಬಿಜೆಪಿ ಸಮಿತಿಯ ಅಧ್ಯಕ್ಷರಾಗಿ, ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ಶ್ರೀದೇವಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ, ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಪುಣಚ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಗೋಕರ್ಣನಾಥ ಕೋ-ಅಪರೇಟಿವ್ ಸೊಸೈಟಿಯ ಸದಸ್ಯರಾಗಿ ಪುಣಚ ಘಟಕದ ವಿಶ್ವ ಹಿಂದೂ ಪರಿಷತ್ ಪ್ರಮುಖರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. 40 ವರ್ಷದ ಹಿಂದೆ ಅಸ್ಪ್ರಷ್ಯತೆಯ ವಿರುದ್ಧ ಹೋರಾಟ ನಡೆಸಿ ಹಿಂದುಳಿದ ಸಮುದಾಯದವರೂ ದೇವಸ್ಥಾನ ಪ್ರವೇಶ ಮಾಡುವಂತೆ ಮಾಡಿದ್ದ ಇವರು ದಲ್ಕಾಜೆಗುತ್ತು ಮನೆತನದ ದೈವಸ್ಥಾನ ನಿರ್ಮಾಣದ ರೂವಾರಿಯೂ ಆಗಿದ್ದರು. ಬರಹಗಾರರಾಗಿ, ಸಾಹಿತಿಯಾಗಿಯೂ ಸಂಜೀವ ಸುವರ್ಣರವರು ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಕಮಲಾವತಿ ಅಲೆಕ್ಕಾಡಿ, ಮಕ್ಕಳಾದ ಶಶಿಕಲಾ, ರವಿಪ್ರಕಾಶ್, ಪತ್ರಕರ್ತ ಜ್ಯೋತಿಪ್ರಕಾಶ್ ಪುಣಚ, ಸಂಧ್ಯಕಲಾ, ಅಳಿಯಂದಿರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.