‘ಸಮೃದ್ಧ ಸಮಾಜ ಕಟ್ಟುವ ಸದುದ್ದೇಶದಿಂದ ಪೊಕ್ಸೋ ಕಾಯ್ದೆ ಪರಿಣಾಮಕಾರಿ’

0

ಪೊಕ್ಸೋ ಕಾನೂನು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ನ್ಯಾಯಾಽಶ ಓಂಕಾರಪ್ಪ

  •  ಕಾನೂನಿನ ಕುರಿತ ಅರಿವು, ನೆರವಿನ ಬಗ್ಗೆ ಅರಿತುಕೊಳ್ಳಿ -ಗೌಡ ಆರ್.ಪಿ
  • ವ್ಯಕ್ತಿ ಎಷ್ಟೇ ದೊಡ್ಡವನಿರಲಿ ಆತನ ತಪ್ಪನ್ನು ಹೇಳುವ ಶಕ್ತಿ ನಿಮ್ಮಲ್ಲಿರಲಿ-ಹೀರಾ ಉದಯ್
  •  ನಿಮ್ಮನ್ನು ನೀವೇ ಜಾಗೃತರನ್ನಾಗಿ ಮಾಡಿಕೊಳ್ಳಿ – ಮನೋಹರ್ ಕೆ.ವಿ

ಪುತ್ತೂರು:ಹೆಣ್ಣು ಮಕ್ಕಳ ಮಾರಾಟ, ಸಾಗಾಟ, ಮಾನವ ಕಳ್ಳ ಸಾಗಾಣಿಕೆ, ಈ ಎಲ್ಲಾ ಪಿಡುಗಳನ್ನು ತೊಲಗಿಸುವುದಕ್ಕಾಗಿ ಭಾರತ ಸರಕಾರ 2013ನೇ ಇಸವಿಯಲ್ಲಿ ತನ್ನದೇ ಆದ ಚಿಂತನೆಯಲ್ಲಿ ಸುಸಮೃದ್ದವಾದ ಸಮಾಜ ಕಟ್ಟುವ ಸದುದ್ದೇಶದಿಂದ ಜಾರಿಗೆ ತಂದಿರುವ ಪೋಕ್ಸೋದಂತಹ ಕಾಯ್ದೆ ಪರಿಣಾಮಕಾರಿ ಎಂದು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಓಂಕಾರಪ್ಪ ಅವರು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು, ಸಮಾಜ ಕಲ್ಯಾಣ ಇಲಾಖೆ ಪುತ್ತೂರು ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಹಾರಾಡಿ ಮೆಟ್ರಿಕ್ ಪೂರ್ವ ಹಾಗು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸೆ.16ರಂದು ಸಂಜೆ ನಡೆದ ಪೋಕ್ಸೋ ಕಾಯ್ದೆಯ ಬಗ್ಗೆ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ನಮ್ಮ ದೇಶದಲ್ಲಿರುವ ಕೆಲವೊಂದು ಪಿಡುಗುಗಳನ್ನು ಹೋಗಲಾಡಿಸಲು ಹಲವಾರು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ.ಅದರಲ್ಲಿ ಪ್ರಮುಖವಾಗಿ ಪೊಕ್ಸೋ ಕಾಯ್ದೆ.ಈ ಕಾಯ್ದೆಯಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಿರುವ ಬಹಳಷ್ಟು ಉದಾಹರಣೆ ಇದೆ.ಈ ನಿಟ್ಟಿನಲ್ಲಿ ಯಾರೆ ಆಗಲಿ ಭಯ ಪಡದೆ ತಮಗಾದ ಅನ್ಯಾಯ, ದೌರ್ಜನ್ಯದ ಕುರಿತು ಮಾಹಿತಿ ನೀಡಿ ತಮ್ಮ ರಕ್ಷಣೆ ಮಾಡಿಕೊಳ್ಳಿ ಎಂದರು.

ಕಾನೂನಿನ ಕುರಿತ ಅರಿವು, ನೆರವಿನ ಬಗ್ಗೆ ಅರಿತುಕೊಳ್ಳಿ: ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಽಶ ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಹಾಗು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾಗಿರುವ ಗೌಡ ಆರ್ ಪಿ ಅವರು ಮಾತನಾಡಿ, ವಿಶ್ವದಲ್ಲೇ ಅತ್ಯಂತ ಹೆಚ್ಚು ಅತ್ಯಾಚಾರ, ಅನಾಚಾರ ಆಗಿರುವುದು ಮಹಿಳೆಯ ಮೇಲೆ.ಈ ಕುರಿತು ಇತಿಹಾಸದ ಪುಟ ಕೆದಕಿದಾಗ, ಸ್ವಾತಂತ್ರ್ಯ ಪೂರ್ವದಲ್ಲಿ ಸತಿ ಸಹಗಮನ ಪದ್ಧತಿ ಇತ್ತು.ಅದರ ವಿರುದ್ಧ ಹೋರಾಟ ಮಾಡಿದ ಬಳಿಕ ಅದಕ್ಕೊಂದು ಕಾಯ್ದೆ ಬಂತು.ಅಂದಿನಿಂದ ಇಲ್ಲಿನ ತನಕ ಮಹಿಳೆಯರ ರಕ್ಷಣೆಗಾಗಿ ಎಷ್ಟೊಂದು ಕಾನೂನು ಬಂದಿದೆಯೋ ದೌರ್ಜನ್ಯಗಳ ಸಂಖ್ಯೆ ಕೂಡಾ ಅಷ್ಟೇ ಜಾಸ್ತಿ ಆಗುತ್ತಿದೆ.ಈ ಅಂಕಿ ಅಂಶ ನಮ್ಮೆಲ್ಲರಲ್ಲಿ ಕಳವಳ ಮೂಡಿಸುವ ಅಂಶಗಳು.ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕೆಂದು ಪೊಕ್ಸೋ ಕಾಯ್ದೆ ಜಾರಿಗೆ ಬಂದಿದೆ.ಇದರಲ್ಲಿ ಕೇವಲ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳಿಗೂ ಕಾನೂನಿನ ನೆರವು ಸಿಗಲಿದೆ.ಕಾನೂನಿನ ಅರಿವು ಮತ್ತು ನೆರವಿನ ಕುರಿತು ಎಲ್ಲರಿಗೂ ಮಾಹಿತಿ ಇರಬೇಕು.ನೆರವು ನೀಡಲು ನಮ್ಮಲ್ಲಿ ನುರಿತ ವಕೀಲರ ತಂಡವಿದೆ.ಕಾನೂನಾತ್ಮಕ ಸಲಹೆ ಕೊಡಬಹುದು.ಅದೇ ರೀತಿ ಮಹಿಳೆಯರಿಗೆ ಉಚಿತವಾಗಿ ಕಾನೂನಿಗೆ ಸಂಬಂಧಿಸಿದ ನೆರವನ್ನು ನೀಡಲಾಗುವುದು ಎಂದರು.

ವ್ಯಕ್ತಿ ಎಷ್ಟೇ ದೊಡ್ಡವನಿರಲಿ ಆತನ ತಪ್ಪನ್ನು ಹೇಳುವ ಶಕ್ತಿ ನಿಮ್ಮಲ್ಲಿರಲಿ: ನ್ಯಾಯವಾದಿ ಹೀರಾ ಉದಯ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ವ್ಯಕ್ತಿ ಎಷ್ಟೇ ಎತ್ತರದ ಸ್ಥಾನದಲ್ಲಿರಲಿ ಆತನ ತಪ್ಪನ್ನು, ಅಸಭ್ಯ ವರ್ತನೆಯನ್ನು ಧೈರ್ಯದಿಂದ ತಿಳಿಸಿ. ಆ ಶಕ್ತಿ ನಿಮ್ಮಲ್ಲಿ ಇರಲಿ. ನಿಮ್ಮ ತಡವಾದ ಮಾಹಿತಿಯಿಂದ ಟೆಕ್ನಿಕಲ್ ಗ್ರೌಂಡ್‌ನಲ್ಲಿ ಆರೋಪಿ ತಪ್ಪಿಸಿಕೊಳ್ಳುವಂತೆ ಮಾಡಬೇಡಿ.ಈ ನಿಟ್ಟಿನಲ್ಲಿ ಕಾನೂನಿನ ಅರಿವಿದ್ದಾಗ ಎಲ್ಲಾ ಹಂತದಲ್ಲೂ ಧೈರ್ಯ ಬರುತ್ತದೆ. ಹಾಗಾಗಿ ಮಕ್ಕಳು ಮೌನ ಬೇಡ, ವಿಚಾರ ಮುಚ್ಚುವುದು ಬೇಡ ಎಂದು ಹೇಳಿದರು.

ನಿಮ್ಮನ್ನು ನೀವೇ ಜಾಗೃತರನ್ನಾಗಿ ಮಾಡಿಕೊಳ್ಳಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ನಿಮ್ಮ ಆರ್ಥಿಕ ಹಿನ್ನಡೆಯ ಪರಿಸ್ಥಿತಿಯನ್ನು ಅರಿತು ವಿವಿಧ ಆಮಿಷ ಒಡ್ಡಿ ಕೆಲವರು ದುರುಪಯೋಗ ಪಡಿಸುವ ಸಂದರ್ಭ ಬರುತ್ತದೆ.ಅಂತಹ ಸಂದರ್ಭದಲ್ಲಿ ನೀವು ಜಾಗೃತರಾಗಬೇಕು.ನಿಮ್ಮನ್ನು ನೀವೇ ಜಾಗೃತರನ್ನಾಗಿ ಮಾಡಿಕೊಳ್ಳಿ ಎಂದರು.ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ಕೋಶಾಽಕಾರಿ ಶ್ಯಾಮಪ್ರಸಾದ್ ಕೈಲಾರ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ, ನ್ಯಾಯವಾದಿ ರಾಜೇಶ್ವರಿ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ನಯನಾ ರೈ, ಹಾರಾಡಿ ಬಾಲಕಿಯರ ವಿದ್ಯಾರ್ಥಿ ನಿಲಯದ ವಾರ್ಡನ್ ಪ್ರೇಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ತಾಲೂಕು ಕಾನೂನು ಸೇವಾ ಸಮಿತಿ ಪಾರಾ ಲೀಗಲ್ ವಾಲಂಟಿಯರ್ ಶಾಂತಿ ಟಿ ಹೆಗಡೆ ಸ್ವಾಗತಿಸಿ, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ ಬಿ ವಂದಿಸಿದರು. ಬಾಲವನದ ವಿಶೇಷ ಅಽಕಾರಿ ಜಗನ್ನಾಥ ಅರಿಯಡ್ಕ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಮನುಷ್ಯನ ರಾಕ್ಷಸ ಗುಣ ತಡೆಯಿರಿ

ಮನುಷ್ಯನು ಮನುಷ್ಯ ಗುಣ ಆಚರಿಸಬೇಕೇ ವಿನಃ ಮನುಷ್ಯನ ರಾಕ್ಷಸ ಗುಣ ಬಾರದಂತೆ ತಡೆಯಬೇಕು.ಇದರ ಜೊತೆಗೆ ತಮ್ಮ ಮೇಲಿನ ದೌರ್ಜನ್ಯ ಮುಚ್ಚಿಟ್ಟರೆ ಆರೋಪಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಂತೆ. ಆತನ ಕೆಟ್ಟ ಪ್ರವೃತ್ತಿಯನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕು.ಈ ನಿಟ್ಟಿನಲ್ಲಿ ಬಾಲಕಿಯರು ಜಾಗೃತರಾಗಿ
ಗೌಡ ಆರ್ .ಪಿ., ನ್ಯಾಯಾಧೀಶರು

ಮಕ್ಕಳೊಂದಿಗೆ ಚಹಾ ಕುಡಿಯುವ ಸಂದರ್ಭ ಮಕ್ಕಳ ಹಕ್ಕುಗಳನ್ನು ತಿಳಿಸಿದ ನ್ಯಾಯಾಧೀಶರು 

ಕಾನೂನು ಮಾಹಿತಿ ಕಾರ್ಯಕ್ರಮದ ಬಳಿಕ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಓಂಕಾರಪ್ಪ ಮತ್ತು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಗೌಡ ಆರ್ ಪಿ ಅವರು ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ, ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು.ವಿದ್ಯಾರ್ಥಿನಿಯರೆಲ್ಲರು ನ್ಯಾಯಾಧೀಶರನ್ನು ಸುತ್ತುವರಿದು ವಿವಿಧ ಮಾಹಿತಿಗಳನ್ನು ಆಲಿಸಿದರು.ಇದೇ ಸಂದರ್ಭ ಚಹಾ ಕುಡಿಯಲು ನ್ಯಾಯಾಧೀಶರನ್ನು ಹಾಲ್‌ನ ಒಳಗೆ ಕರೆದಾಗ ನ್ಯಾಯಾಧೀಶ ಓಂಕಾರಪ್ಪ ಅವರು, ನಾವು ರೈತರ ಮಕ್ಕಳು. ನಮಗೆ ಇಲ್ಲಿಯೇ ಚಹಾ ತಿಂಡಿ ಕೊಡಿ ಎಂದರಲ್ಲದೆ ನಾನು ಹಾಸ್ಟೇಲ್‌ನಲ್ಲಿ ಉಳಿದುಕೊಂಡು ಶಿಕ್ಷಣ ಕಲಿತಿದ್ದೇನೆ ಎಂದರು.ಹಾಸ್ಟೇಲ್‌ನ್ನು ವೀಕ್ಷಣೆ ಮಾಡಿ ಶುಚಿತ್ವದ ಕುರಿತು ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here