





ಜೆಸಿಐ ಮೂಲಕ ಸಮಾಜದಲ್ಲಿ ಶಾಂತಿಯುತ ವಾತಾವರಣ-ಪುರಂದರ ರೈ


ಆಲಂಕಾರು: ಆಲಂಕಾರು ಜೇಸಿಐ ಘಟಕ ಜೆಸಿಐ ಸಪ್ತಾಹದ ನಮಸ್ತೆ ಇದರ ಸಮಾರೋಪ ಸಮಾರಂಭ ಆಲಂಕಾರಿನ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ ಮಿತ್ರಂಪಾಡಿ ಮಾತನಾಡಿ ವ್ಯಕ್ತಿತ್ವ ವಿಕಸನದ ಮೂಲಕ ಜಾಗತಿಕ ಶಾಂತಿಯನ್ನು ಕಂಡುಕೊಳ್ಳಬಹುದೆಂದು ತೀರ್ಮಾನಿಸಿ ಹಿರಿಯರು ಜೆ.ಸಿ.ಐ ಸಂಘಟನೆಯನ್ನು ಕಟ್ಟಿದರು. ವ್ಯಕ್ತಿಯೊಬ್ಬರು ಜೆ.ಸಿ.ಐ ಸಂಘಟನೆಗೆ ಬಂದರೆ ಅವರು ಸಮಾಜಮುಖಿಯಾಗಿ ಬೆಳೆಯುತ್ತಾರೆ ಆಗ ಸಮಾಜದಲ್ಲಿ ಶಾಂತಿಯ ವಾತಾವಾರಣ ನಿರ್ಮಾಣವಾಗುತ್ತದೆ. ಇದೇ ರೀತಿ ಸಮಾಜಮುಖಿ ಕೆಲಸ ಕಾರ್ಯಗಳಿಂದ ಜಾಗತಿಕ ಶಾಂತಿ ನಿರ್ಮಾಣಗೊಳ್ಳುತ್ತದೆ ಎಂದರು. ಆಲಂಕಾರು ಜೆ.ಸಿ.ಐ ಘಟಕ ಇನ್ನಷ್ಟು ಸಮಾಜ ಮುಖಿ ಕೆಲಸ ಕಾರ್ಯಗಳಲ್ಲಿ ಮುಂದುವರಿಯಲಿ ಎಂದು ಹೇಳಿ ಜೆ.ಸಿ.ಐ ಘಟಕದ ಪದಾಧಿಕಾರಿಗಳಿಗೆ ಹಾಗು ಸದಸ್ಯರಿಗೆ ಅವರು ಅಭಿನಂದನೆ ಸಲ್ಲಿಸಿದರು.






ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ ಮಾತನಾಡಿ ಜೆ.ಸಿ.ಐ.ನಿಂದಾಗಿ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ತಿಳಿಸಿ ಆಲಂಕಾರು ಜೆ.ಸಿ.ಐ ಘಟಕ ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಗಳಿಂದ ಅಭಿವೃದ್ದಿ ಹೊಂದಲಿ ಎಂದು ಶುಭಹಾರೈಸಿದರು. ಜೇಸಿಐ ಆಲಂಕಾರಿನ ಪೂರ್ವಾಧ್ಯಕ್ಷರಾಗಿರುವ ಆಲಂಕಾರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಮಾತನಾಡಿ ಯುವ ಜನತೆಗೆ ವ್ಯಕ್ತಿತ್ವವನ್ನು ರೂಪಿಸಲು ಜೆ.ಸಿ.ಐ ಅತ್ಯಂತ ಒಳ್ಳೆಯ ಸಂಘಟನೆ. ಆಲಂಕಾರು ಜೆಸಿಐ ಅಜಿತ್ ರೈಯವರ ನೇತೃತ್ವದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದೆ ಎಂದು ಹೇಳಿ ಶುಭಹಾರೈಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಆಲಂಕಾರು ಜೆಸಿಐ ಘಟಕದ ಅಧ್ಯಕ್ಷ ಅಜಿತ್ ಕುಮಾರ್ ರೈ ಯವರು ಮಾತನಾಡಿ, ಜೆಸಿಐ ಆಲಂಕಾರು ಘಟಕವು ಸಪ್ತಾಹದ 7 ದಿನವೂ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ ಎಂದು ತಿಳಿಸಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಸನ್ಮಾನ : ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸೀತಾರಾಮ ರೈ ಕೇವಳ ದಂಪತಿ, ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಶ್ವರ ಭಟ್ ಆಲಂಕಾರು ದಂಪತಿ ಹಾಗು ಉದ್ಯಮ ಕ್ಷೇತ್ರದಲ್ಲಿ ರಾಧಾಕೃಷ್ಣ ರೈ ಪರಾರಿ ಗುತ್ತು ಮತ್ತು ಪ್ರಮೀಳಾ ರಾಧಾಕೃಷ್ಣ ರೈ ಪರಾರಿಗುತ್ತು ದಂಪತಿಯನ್ನು ಸನ್ಮಾನಿಸಲಾಯಿತು.
ಜೇಸಿಐಯಿಂದ ಕೊಡಲ್ಪಡುವ ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿಯನ್ನು ಜೇಸಿ ಆಲಂಕಾರಿನ ಪೂರ್ವಾಧ್ಯಕ್ಷ ಹರಿಶ್ಚಂದ್ರರವರಿಗೆ ನೀಡಿ ಗೌರವಿಸಲಾಯಿತು.
ಇದೆ ಸಂದರ್ಭದಲ್ಲಿ 2023ರ ಅದ್ಯಕ್ಷರ ಚುನಾವಣೆ ಪ್ರಕ್ರಿಯೆಯನ್ನು ನಿಕಟ ಪೂರ್ವಾಧ್ಯಕ್ಷ ಗಣೇಶ್ ಕಟ್ಟಪುಣಿ ನಡೆಸಿ. 2023 ರ ಅಧ್ಯಕ್ಷರಾಗಿ ಲಕ್ಷ್ಮಿನಾರಾಯಣ ಅಲೆಪ್ಪಾಡಿ ಯವರು ಆಯ್ಕೆಯಾಗಿದ್ದಾರೆ ಎಂದು ಘೋಷಿಸಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಸಪ್ತಾಹದ ನಿರ್ದೇಶಕ ಪ್ರವೀಣ್ ಆಳ್ವ, ಲೇಡಿ ಜೆಸಿ ಅಧ್ಯಕ್ಷೆ ಮಮತಾ ಶೆಟ್ಟಿ ಅಂಬರಾಜೇ ಉಪಸ್ಥಿತರಿದ್ದರು. ಗುರುಕಿರಣ್ ಶೆಟ್ಟಿ ಅವರು ವೇದಿಕೆಗೆ ಆಹ್ವಾನಿಸಿ ಪ್ರತಿಮಾ ರೈ ಯವರು ಜೆಸಿ ವಾಣಿ ವಾಚಿಸಿದರು. ಅಧ್ಯಕ್ಷ ಅಜಿತ್ ಕುಮಾರ್ ರೈ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಚೇತನ್ ಮೊಗ್ರಾಲ್ ಸಪ್ತಾಹದ ವರದಿ ಮಂಡಿಸಿದರು. ಗುರುರಾಜ್ ರೈ, ಗುರುಪ್ರಸಾದ್ ರೈ ಮತ್ತು ಪುರಂದರ ಅವರು ಸನ್ಮಾನಿತರ ಪರಿಚಯ ಮಾಡಿದರು. ಸಪ್ತಾಹದ ನಿರ್ದೇಶಕ ಪ್ರದೀಪ್ ಬಾಕಿಲ ವಂದಿಸಿದರು.
ಜೆಸಿ ಆಲಂಕಾರಿನ ಸ್ಥಾಪಕಾಧ್ಯಕ್ಷ ಬಿ.ಎಲ್ ಜನಾರ್ದನ್, ಪೂರ್ವಾಧ್ಯಕ್ಷರಾದ ಹೇಮಲತಾ ಪ್ರದೀಪ್, ಜೇಸಿ ಆಲಂಕಾರಿನ ಸ್ಥಾಪಕ ಪ್ರಶಾಂತ್ ಕುಮಾರ್ ರೈ, ನಿವೃತ್ತ ಕ್ಯಾಂಪ್ಕೋ ಉದ್ಯೋಗಿ ಜನಾರ್ದನ್ ಕದ್ರ, ಸಿಎ ಬ್ಯಾಂಕ್ ಆಲಂಕಾರಿನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಽಕಾರಿ ಪ್ರಶಾಂತ್ ರೈ ಮನವಳಿಕೆ , ಶಾಂತಾರಾಮ ರೈ ಕುಂತೂರು ಗುತ್ತು, ಮೆಸ್ಕಾಂ ಜೆ.ಇ ಪ್ರೇಮ್ ಕುಮಾರ್, ವಿಠ್ಠಲ್ ರೈ ಮನವಳಿಕೆ ಗುತ್ತು , ಶಿಕ್ಷಕರಾದ ಜಯಪ್ರಕಾಶ್ ರೈ ಅರ್ಬಿ,ಪ್ರಮುಖರಾದ ಪೀರ್ ಮಹಮ್ಮದ್ ಸಾಹೇಬ್, ಡಾ.ಆಕಾಶ್, ಡಾ ಅಭಿಷೇಕ್ ಶೆಟ್ಟಿ, ಕಮಲಾಕ್ಷ ಶೆಟ್ಟಿ ಅಂಬರಾಜೆ, ಕಾಂಚನ ಪೆರ್ಲ ಷಣ್ಮುಖ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ, ಪೆರಾಬೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಜನಾರ್ದನ ಶೆಟ್ಟಿ ಕಲ್ಲಡ್ಕ, ಮುರಳೀಧರ ರೈ ಮನವಳಿಕೆ, ಪ್ರದೀಪ್ ರೈ ಬಳೆಂಪೋಡಿ, ಮನವಳಿಕೆ, ಮತ್ತು ಜೇಸಿ ಆಲಂಕಾರಿನ ಸದಸ್ಯರು ಹಾಗು ಇನ್ನಿತರರು ಉಪಸ್ಥಿತರಿದ್ದರು.









