ನಿಡ್ಪಳ್ಳಿ; ಗ್ರಾಮದ ಕೂಟೇಲು ಎಂಬಲ್ಲಿ ಶಾಸಕರ ಅನುದಾನದಲ್ಲಿ ಪಿಡಬ್ಲ್ಯೂಡಿ ಇಲಾಖೆಯಿಂದ ನಿರ್ಮಿಸುತ್ತಿರುವ ನೂತನ ಸೇತುವೆಯನ್ನು ಸೆ.18 ರಂದು ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಬೆಳಿಗ್ಗೆ ಗಂಟೆ 8.30 ಕ್ಕೆ ಲೋಕಾರ್ಪಣೆ ಗೊಳಿಸಲಿರುವರು.
ಕಳೆದ ಫೆಬ್ರವರಿಯಲ್ಲಿ ಆರಂಭವಾದ ಸೇತುವೆ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಗುರಿಯಾಗಿ ಸದಾ ಸುದ್ದಿಯಲ್ಲಿದ್ದ ಈ ಸೇತುವೆಯ ಬದಿ ಕಟ್ಟುವ ಕಾಮಗಾರಿ ಪೂರ್ತಿಯಾಗದಿದ್ದರೂ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರ ಹಿತ ದೃಷ್ಟಿಯಿಂದ ಇದೀಗ ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.