ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ.ರಮನಾಥ ರೈ ರವರ ಹುಟ್ಟು ಹಬ್ಬದ ಪ್ರಯುಕ್ತ ದುರ್ಗಾ ನಮಸ್ಕಾರ ಪೂಜೆ

0

ವಿಟ್ಲ: ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ.ರಮನಾಥ ರೈ ರವರ ಹುಟ್ಟು ಹಬ್ಬದ ಪ್ರಯುಕ್ತ ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ದುರ್ಗಾ ನಮಸ್ಕಾರ ಪೂಜೆ ನಡೆಯಿತು.

ರವಿ ಶಾಂತಿ ಬಳಗದವರ ವೈದಿಕ ವಿಧಿವಿದಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸದಸ್ಯರಿಂದ ರಮನಾಥ ರೈ ರವರನ್ನು ಸಾಲು ಹೊದಿಸಿ ಗೌರವಿಸಲಾಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಿಶಾ ಬರಿಮಾರು ರವರನ್ನು ಮಾಜಿ ಸಚಿವರಾದ ರಮಾನಾಥ ರೈ ರವರು ಸನ್ಮಾನಿಸಿದರು.

ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ವಿ ಪೂಜಾರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಲೇಟ್ ಪಿಂಟೊ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾದ್ಯಕ್ಷರಾದ ಮಲ್ಲಿಕಾ ವಿ.ಶೆಟ್ಟಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ನಿರ್ದೇಶಕರಾದ ಪಿಯೂಷ್ ಎಲ್ ರೋಡ್ರಿಗಸ್, ಮಾಜಿ ಜಿಲ್ಲಾ ಪಂ ಸದಸ್ಯರಾಸ ಪದ್ಮಶೇಖರ್ ಜೈನ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದಾರ್, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಮಾಣಿ ಬಿಲ್ಲವ ಸಂಘದ ಗೌರವದ್ಯಕ್ಷರುಗಳಾದ ಈಶ್ವರ ಪೂಜಾರಿ, ನಾರಾಯಣ ಸಾಲ್ಯಾನ್, ಮಾಣಿ ಬಿಲ್ಲವ ಸಂಘದ ಅಧ್ಯಕ್ಷರಾದ ಸುರೇಶ್ ಸೂರ್ಯ ಪ್ರಮುಖರಾದ ಡಾ.ಮನೋಹರ್ ರೈ, ನಿರಂಜನ್ ರೈ, ಶ್ರೀಧರ್ ರೈ, ಮಂಜುಳಾ ಕುಶಾಲ ಪೆರಾಜೆ, ಆಶೋಕ್ ಬರಿಮಾರ್, ಕುಶಾಲ ಪೆರಾಜೆ, ಉಮೇಶ್ ಕುಲಾಲ್, ಐಡಾ ಸುರೇಶ್, ವೆಂಕಪ್ಪ ಪೂಜಾರಿ, ಶಿವಪ್ರಸಾದ್ ಕಳ್ಳಿಗೆ, ಸತೀಶ್ ಅನಂತಾಡಿ, ಪ್ರೀತಿ ಡಿನ್ನಾ, ರಮಣಿ ಮಾಣಿ, ಮೆಲ್ವಿನ್ ಮಾಣಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here