ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರಾವ್ಯ ಮತ್ತು ಶ್ರೀಮಾ

0

ಕಾಣಿಯೂರು: ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ೧೦ನೇ ತರಗತಿಯ ವಿದ್ಯಾರ್ಥಿನಿ ಶ್ರಾವ್ಯ ಕೆ.ಎಚ್ ಮತ್ತು ೬ನೇ ತರಗತಿಯ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್ ಹೆಸರು ಮಾಡಿದ್ಧಾರೆ.

ಶ್ರಾವ್ಯ ಕೆ.ಎಚ್ ಅವರು ವಕ್ರಾಸನದಲ್ಲಿ ೧ ಗಂಟೆ ೧೦ ನಿಮಿಷ ೩೯ ಸೆಕೆಂಡು ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಶ್ರೀಮಾ ಕೆ.ಎಚ್ ಅವರು ಸುಪ್ತ ಪದ್ಮಾಸನದಲ್ಲಿ ೧ ಗಂಟೆ ೦೫ ನಿಮಿಷ ೩೩ ಸೆಕೆಂಡು ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಪ್ರಗತಿ ವಿದ್ಯಾಸಂಸ್ಥೆಯ ಯೋಗಗುರು ಶರತ್ ಮರ್ಗಿಲಡ್ಕ ತರಬೇತಿಯನ್ನು ನೀಡಿರುತ್ತಾರೆ. ಯೋಗಾಸನ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಶ್ರಾವ್ಯ ಮತ್ತು ಶ್ರೀಮಾರವರು ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಹುದೇರಿ ಕುಶಾಲಪ್ಪ ಗೌಡ ಮತ್ತು ಸುಜೀತಾರವರ ಪುತ್ರ್ರಿಯರು.

LEAVE A REPLY

Please enter your comment!
Please enter your name here