ಬಡಗನ್ನೂರು : ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಚಿಣ್ಣರ ಸಂಭ್ರಮ

0

ಬಡಗನ್ನೂರುಃ  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ, ಕುಂಬ್ರಸ.ಉ ಹಿ.ಪ್ರಾ.ಶಾಲೆ, ಬಡಗನ್ನೂರು ಇದರ ಸಂಯುಕ್ತ ಆಶ್ರಯದಲ್ಲಿ   “ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಚಿಣ್ಣರ ಸಂಭ್ರಮ 2022-23 ” ಕಾರ್ಯಕ್ರಮವು  ಬಡಗನ್ನೂರು ಸ.ಉ.ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ಸೆ.17 ರಂದು ನಡೆಯಿತು.

ಕಾರ್ಯಕ್ರಮವನ್ನು ಶಾಲಾ ದತ್ತು ಯೋಜನಾ ಅಧ್ಯಕ್ಷ ಜನಾರ್ದನ ಪದಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಚಿಣ್ಣರ ಸಂಭ್ರಮ 2022-23 ವಿಜಯ ವೇದಿಕೆಯ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ  ಸರ್ಕಾರಿ ಶಾಲೆಯಲ್ಲಿ ಬೌದ್ಧಿಕ, ಶಿಕ್ಷಣದ ಅಗತ್ಯ ವಿದೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಸರ್ಕಾರ ಅನೇಕ ಬಗ್ಗೆ ಸೌಲಭ್ಯಗಳನ್ನು ನೀಡಿ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಅದರೆ ಅಂಗ್ಲ ಮಾಧ್ಯಮ ವ್ಯಾಮೋಹದಿಂದ ಸರಕಾರಿ ಶಾಲೆಗಳಲ್ಲಿ  ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರ ನಿಯಮದಂತೆ  ಮಕ್ಕಳ ಸಂಖ್ಯೆಯ ಅನುಪಾತಕ್ಕೆ ಅನುಸಾರವಾಗಿ ಶಿಕ್ಷಕರನ್ನು ನೇಮಿಸುವ  ಸರ್ಕಾರದ ನಿಯಮ.ಈ ದೃಷ್ಟಿಯಿಂದ ಶಿಕ್ಷಕರು ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಹೊಸ ಆವಿಷ್ಕಾರಗಳ ಮೂಲಕ ಮಕ್ಕಳಿಗೆ ಆಕರ್ಷಣೆದಾಯಕ ಚಟುವಟಿಕೆ ಮಾಡುವ ಅನಿವಾರ್ಯತೆ ಇದೆ. ಆ ಮೂಲಕ  ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಮ್ಮೆಲ್ಲರಲ್ಲಿದೆ ಎಂದು ಹೇಳಿ ಶುಭ ಹಾರೈಸಿದರು.
ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಅಳ್ವ ಗಿರಿಮನೆ ಮಾತನಾಡಿ ಮಕ್ಕಳ ಪ್ರತಿಭೆಯನ್ನು ಅನಾವರಣ ಗೊಳ್ಳಿಸುವಲ್ಲಿ ಪ್ರತಿಭಾ ಕಾರಂಜಿ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
 
ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಮಾತನಾಡಿ ಶಿಕ್ಷಣದ ಜತೆಗೆ ಕ್ರೀಡೆ ಬೆಳೆಯುತ್ತಿದೆ. ಇದರೊಂದಿಗೆ ನಮ್ಮ ಸಂಸ್ಕೃತಿ ಬೆಳೆಯಬೇಕು. ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ನಮ್ಮ ಪರಂಪರಾಗತವಾಗಿ ಬಂದಿರುವ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಕೆಲಸ ಅಗಬೇಕಿದೆ ಎಂದರು.
 
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ  ಶ್ರೀಮತಿ ಕೆ ರವರ ಅಧ್ಯಕ್ಷತೆ ನಲೆಯಲ್ಲಿ ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ  ಶಿಕ್ಷಕರ ಸಂಘದ ಜಿಲ್ಲಾ ಸಂಚಾಲಕ ರಾಮಣ್ಣ ರೈ ಕೈಕಾರ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ, ಉಪಸ್ಥಿತರಿದ್ದರು.
ಕುಂಬ್ರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶಶಿಕಲಾ ಪ್ರಸ್ತಾವಿಕ ಮಾತನಾಡಿದರು, ಶಾಲಾ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಸ್ವಾಗತಿಸಿದರು, ಸಹ ಶಿಕ್ಷಕಿ ಹರಿಣಾಕ್ಷಿ ಎ ವಂದಿಸಿದರು. ಕೊಯಿಲ ಬಡಗನ್ನೂರು ಶಾಲಾ ಸಹ ಶಿಕ್ಷಕ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ  ಕುಂಬ್ರ ಕ್ಲಸ್ಟರ್ ಮಟ್ಟಕ್ಕೆ ಒಳಪಟ್ಟ 12 ಶಾಲಾ ಮಕ್ಕಳು, ಅಧ್ಯಾಪಕ ವೃಂದದವರು,  ತೀರ್ಪುಗಾರರು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು, ಸದಸ್ಯರು, ಮಕ್ಕಳ ಪೋಷಕರು ಅಕ್ಷರದಾಸೋಹ ಸಿಬ್ಬಂದಿಗಳು ನಿವೃತ್ತ ಶಿಕ್ಷಕರು ಭಾಗವಹಿಸಿದ್ದರು.
ಗುರುವಂದನಾ ಕಾರ್ಯಕ್ರಮ
ಕುಂಬ್ರ ಕ್ಲಸ್ಟರ್ ಒಳಪಟ್ಟ ವಿವಿಧ ಶಾಲೆಗಳಲ್ಲಿ ಸೇವಾ ನಿವೃತ್ತಿ ಹೊಂದಿರುವ ಸುಮಾರು 13 ಜನ ನಿವೃತ್ತ ಶಿಕ್ಷಕರನ್ನು  ಶಾಲು ಹಾರ ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಮತ್ತು ಕ್ಲಸ್ಟರ್ ಮಟ್ಟಕ್ಕೆ ನೂತನ ವರ್ಗಾವಣೆ ಗೊಂಡು ಬಂದಿರುವ ಹಾಗೂ ಕುಂಬ್ರ ಕ್ಲಸ್ಟರ್ ಮಟ್ಟದಿಂದ ಭಡ್ತಿ ಗೊಂಡು ವರ್ಗಾವಣೆ ಕೊಂಡು ಹೋಗಿರುವ ಶಿಕ್ಷಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ  10 ವಿವಿಧ ಬಗೆಯ ಸ್ಪರ್ಧೆಗಳು ನಡೆಯಿತು.

LEAVE A REPLY

Please enter your comment!
Please enter your name here