ಪುತ್ತೂರು ಲಯನ್ಸ್ ಕ್ಲಬ್‌ನಲ್ಲಿ ಓಣಂ ಹಬ್ಬದ ಆಚರಣೆ

0

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಹಾಗೂ ನವ್ಯಶ್ರೀ ಮಹಿಳಾ ಮಂಡಳಿ ಪುತ್ತೂರು ಇದರ ಸಹಯೋಗದಲ್ಲಿ ಲಯನ್ಸ್ ಸೇವಾ ಮಂದಿರದಲ್ಲಿ ಓಣಂ ಹಬ್ಬವನ್ನು ವಿವಿಧ ಹೂವುಗಳಿಂದ ಸುಂದರವಾಗಿ ತಯಾರಿಸಿದ ರಂಗೋಲಿಯಲ್ಲಿ ಮಹಿಳೆಯರು ನೃತ್ಯ ಮಾಡಿ ಸಂಭ್ರಮಿಸಿದರು.

ಹೂವಿನ ರಂಗೋಲಿ ತಯಾರಿಸಲು ಶೋಭಾ ಮತ್ತಿತರರು ಸಹಕರಿಸಿದರು. ಲಯನ್ಸ್ ಕ್ಲಬ್ ಪುತ್ತೂರಿನ ಅಧ್ಯಕ್ಷ ಕೇಶವ ನಾಯಕ್ ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸಿದರು. ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಗಣೇಶ್ ಶೆಟ್ಟಿಯವರು ವಂದಿಸಿದರು. ಗಣೇಶ್ ಪಟ್ಟೆಯವರು ಸಹಕರಿಸಿದರು.

LEAVE A REPLY

Please enter your comment!
Please enter your name here