- ರೂ 4,6918348.09 ವ್ಯವಹಾರ, 71649.08 ನಿವ್ವಳ ಲಾಭ, ಶೇ.8 ಡಿವಿಡೆಂಡ್ ,ಶೇ 65 ಬೋನಸ್ – ಎಸ್.ಬಿ ಜಯರಾಮ ರೈ ಬಳಜ್ಜ
ಕೆಯ್ಯೂರು: ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ 2021-2022 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದ ಸಭಾಂಗಣದಲ್ಲಿ ಸೆ18ರಂದು ಎಸ್.ಬಿ ಜಯರಾಮ ರೈ ಬಳಜ್ಜ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘದ ಕಾರ್ಯದರ್ಶಿ ಬಾಸ್ಕರ ರೈ ಎಂ, ಸ್ವಾಗತಿಸಿ, ವರದಿ ಮಂಡಿಸಿದರು. ಸಂಘದಲ್ಲಿ ಒಟ್ಟು 350 ಸದಸ್ಯರಿದ್ದು ವರದಿ ಸಾಲಿನಲ್ಲಿ , ರೂ 4,69,18,348.09 ವ್ಯವಹಾರ ಮಾಡಿ, 12,40,509.40 ಆದಾಯ ಬಂದಿರುತ್ತದೆ. ಒಟ್ಟು ರ‍್ಚು ರೂ 11,68,860.34 ಆಗಿದ್ದು, ರೂ71649.08 ನಿವ್ವಳ ಲಾಭ ಬಂದಿರುತ್ತದೆ.ಲಾಭಾಂಶದಲ್ಲಿ ಶೇ.8 ಡಿವಿಡೆಂಡ್, ಹಾಗೂ ಶೆ65ಸದಸ್ಯರಿಗೆ ಬೋನಸ್ ನೀಡುವುದಾಗಿ ಅದ್ಯಕ್ಷರು ಸಭೆಯಲ್ಲಿ ಹೇಳಿದರು.
ಹೆಚ್ಚು ಹಾಲು ಹಾಕಿದವರಿಗೆ ಬಹುಮಾನ: 2021-2022 ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸುವಲ್ಲಿ ಪ್ರಥಮ ಸ್ಥಾನ ಪಡೆದ ಲೋಕನಾಥ ಪಕ್ಕಳ ನೂಜಿ, ದ್ವಿತೀಯ ಸ್ಥಾನ ಬಾಬು ಕಣಿಯಾರು, ತೃತಿಯ ಸ್ಥಾನ ಕೆ.ರಾಮಣ್ಣ ಗೌಡ ಮಾಡಾವು ಅತಿ ಹೆಚ್ಚು ಹಾಲು ಪೂರೈಕೆಗಾಗಿ ಸಂಘದ ವತಿಯಿಂದ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ದ.ಕ ಹಾಲು ಒಕ್ಕೂಟ ವ್ಯವಸ್ಥಾಪಕ ಡಾ.ನಿತ್ಯನಾಂದ ಭಕ್ತ ಇವರನ್ನು ಶಾಲು , ಸ್ಮರಣಿಕೆ,ನೀಡಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹೈನುಗಾರ ರೈತರಿಗೆ ಉಪಯುಕ್ತ ಮಾಹಿತಿಯನ್ನು ಡಾ.ನಿತ್ಯಾನಂದ ಭಕ್ತ ನೀಡಿದರು.
ಸಭಾದ್ಯಕ್ಷತೆ ವಹಿಸಿದ್ದ ಎಸ್.ಬಿ.ಜಯರಾಮ ರೈ ಮಾತಾಡಿ ಹೈನುಗಾರರು ನಮ್ಮ ಬೆನ್ನೆಲುಬು, ಸಂಘವು ಎಲ್ಲರ ಸಹಕಾರದಿಂದ ಅಭಿವೃದ್ಧಿಯಾಗಿರುವುದು ಖುಷಿ ತಂದಿದೆ. ಶುದ್ದ ಹಾಲನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ರೈತರು ವಿಶೇಷ ಮುತುವರ್ಜಿ ವಹಿಸಿ ಕೊಳ್ಳಬೇಕು. ಸಾಂದ್ರತಾ ಶೀತಲೀಕರಣ ಕೇಂದ್ರ ಘಟಕ ಈಗಾಗಲೇ ನಮ್ಮ ಸಂಘಕ್ಕೆ ದೊರತಿದ್ದು, ತುಂಬಾ ಸಂತೋಷದಾಯಕ. ಎಂದು ಅದ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಹೇಳಿದರು.
ವೇದಿಕೆಯಲ್ಲಿ ದ.ಕ.ಹಾಲು ಒಕ್ಕೂಟ ಪಶು ವೈದ್ಯ ಡಾ.ಅನುದೀಪ್, ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ನಾಗೇಶ್, ಸಂಘದ ಉಪಾಧ್ಯಕ್ಷೆ ದೇವಿಕಾ ಎ.ಎಸ್ , ನಿರ್ದೇಶಕ ಶಶಿಧರ ರಾವ್ ಬೊಳಿಕಲ, ರಾಮಣ್ಣ ಗೌಡ ಮಾಡಾವು, ಈಶ್ವರಿ ಜೆ.ರೈ ಸಂತೋಷ್ ನಗರ, ಪ್ರವೀಣ.ಕೆ ,ವಿಜಯ ಐತ್ತಪ್ಪ ನಾಯ್ಕ, ಕೆ.ಗುಡ್ಡಪ್ಪ ರೈ, ಪದ್ಮನಾಭ. ಪಿ,ಎಸ್, ಪದ್ಮನಾಭ ರೈ ಡಿ, ಮಹಾಲಿಂಗ ಪಾಟಾಳಿ, ಪಿ.ಜರ‍್ಧಾನ ಗೌಡ, ಶಿವಪ್ಪ ನಾಯ್ಕ, ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಿಂದೂರ ಎಸ್, ಕಾವ್ಯಶ್ರೀ ಎಸ್.ಜಿ, ಚೈತ್ರಾ ಉಪಸ್ಥಿತರಿದ್ದರು. ಸಿಬ್ಬಂದಿ ಪದ್ಮಯ್ಯ.ಪಿ. ವಂದಿಸಿ, ಸಂಘದ ಕಾರ್ಯದರ್ಶಿ ಬಾಸ್ಕರ ರೈ ಎಂ. ಕಾರ್ಯಕ್ರಮ ನಿರೂಪಿಸಿದರು. ಕೃತಕ ಗರ್ಭದಾನ ಕಾರ್ಯಕರ್ತ ಸಂಘದ ಮಾಜಿ ಕಾರ್ಯದರ್ಶಿ ಬಿ.ಚಂದ್ರಹಾಸ ರೈ ಮಠ, ಸಿಬ್ಬಂದಿಗಳಾದ ಪ್ರಶಾಂತ ರೈ ಸಣಂಗಳ, ಲಲಿತಾ ರೈ ಮಾಡಾವು ಹಾಗೂ ರೋಹಿತಾಕ್ಷ ರೈ ಮಠ, ಗಂಗಾಧರ ಪೂಜಾರಿ ಸಹಕರಿಸಿದರು.