ರೂ.13.41ಕೋಟಿ ವ್ಯವಹಾರ, ರೂ.2.13ಲಕ್ಷ ಲಾಭ
ಪುತ್ತೂರು:ಕ್ಷಾತ್ರೀಯ ಸೌಹಾರ್ದ ಸಹಕಾರಿಯು 2021-22ನೇ ಸಾಲಿನಲ್ಲಿ ರೂ.13,41,71,243.80ಗಳ ವ್ಯವಹಾರ ನಡೆಸಿ, ರೂ.2,13,423.92 ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕೆ.ಯವರು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.17ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ನಾಲ್ಕು ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಸಹಕಾರಿಯು ಲಾಭದತ್ತ ಸಾಗುತ್ತಿದೆ. ವರದಿ ಸಾಲಿನಲ್ಲಿ 733 ಸದಸ್ಯರಿದ್ದು ರೂ.52,61,000 ಪಾಲು ಬಂಡವಾಳವಿರುತ್ತದೆ. 95 ಮಂದಿ ಬಿ ತರಗತಿ ಸದಸ್ಯರಿಂದ ರೂ.14,400 ಪಾಲು ಬಂಡವಾಳವಿರುತ್ತದೆ. ರೂ.7,47,09,233.30 ವಿವಿಧ ರೂಪದಲ್ಲಿ ಠೇವಣಿಗಳಿವೆ. ರೂ.1,97,07,617 ವಿವಿಧ ಸಾಲಗಳನ್ನು ವಿತರಿಸಲಾಗಿದೆ. ಲಾಭಾಂಶವನ್ನು ನಿಯಮಾವಳಿಯಂತೆ ವಿಂಗಡಿಸಲಾಗಿದೆ ಎಂದರು.
ಬೈಲಾ ತಿದ್ದುಪಡಿಗೆ ಅನುಮೋದನೆ:
ಸಂಘದ ಕಾರ್ಯಕ್ಷೇತ್ರವನ್ನು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ಬೈಲಾ ತಿದ್ದುಪಡಿಯ ಬಗ್ಗೆ ಸಭೆಯಲ್ಲಿ ಮಂಡಿಸಿ ಮಹಾಸಭೆಯ ಅನುಮೋದನೆ ಪಡೆದುಕೊಳ್ಳಲಾಯಿತು.
ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಹಕಾರಿಯ ಸ್ಥಾಪಕಾಧ್ಯಕ್ಷ ಕೆಮ್ಮಿಂಜೆ ಸುಬ್ರಹ್ಮಣ್ಯ ಮಾತನಾಡಿ, ಉತ್ತಮ ರೀತಿಯಲ್ಲಿ ಬೆಳೆಯಲು ಎಲ್ಲರ ಸಹಕಾರ ಅಗತ್ಯ ಎಂದರು.
ನಿರ್ದೇಶಕರಾದ ಮಾಧವ ಎ., ನವೀನ್‌ಚಂದ್ರ, ಚಂದ್ರಕಲಾ ಎಸ್., ವಿದ್ಯಾಲಕ್ಷ್ಮೀ, ವಾಣಿ ಸುರೇಶ್ ಕುಮಾರ್ ಉಪಸ್ಥಿತರಿದ್ದರು.
ಹಿರಿಯ ಸಹಾಯಕಿ ಜ್ಞಾನೇಶ್ವರಿ ಪ್ರಾರ್ಥಿಸಿದರು. ನಿರ್ದೇಶಕ ಜಿತೇಂದ್ರ ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ಶೆಣೈ ವರದಿ ಮಂಡಿಸಿದರು. ಲೆಕ್ಕಿಗ ಜಯಂತ ಮಹಾಸಭೆಯ ನೋಟೀಸ್ ಓದಿದರು. ಉಪಾಧ್ಯಕ್ಷ ಯಶವಂತ ಬಿ.ಎಮ್ ಲಾಭಾಂಶ ವಿಂಗಡನೆ ಘೋಷಿಸಿದರು. ನಿರ್ದೇಶಕ ಬಾಲಚಂದ್ರ ಅಂದಾಜು ಬಜೆಟ್ ಮಂಡಿಸಿದರು. ನಿರ್ದೇಶಕಿ ಪುಷ್ಪಲತಾ ವಂದಿಸಿದರು.