ವಿವಿಧ ಅವಕಾಶಗಳು ಒಂದೇ ಸೂರಿನಡಿಯಲ್ಲಿ ಸಿಗುವ ತರಬೇತಿ ಕೇಂದ್ರ ಪ್ರೇರಣಾ ಸಂಸ್ಥೆಯ ಉದ್ಘಾಟನೆ

0
  • ಪ್ರೇರಣಾ ಮೂಲಕ ಬಂದರೆ ಸಬ್ಸಿಡಿ ಆಧಾರದಲ್ಲಿ ಸೀಟ್ – ಡಾ. ರೇಣುಕಾಪ್ರಸಾದ್ ಭರವಸೆ
  • ಪ್ರೇರಣಾ ಸಂಸ್ಥೆ ರಾಜ್ಯದಲ್ಲಿ ರೋಲ್‌ಮೊಡೆಲ್ ಆಗಬೇಕು- ಸಂಜೀವ ಮಠಂದೂರು
  • ಪ್ರೇರಣಾ ಸಂಸ್ಥೆ ಹಳ್ಳಿಯ ಮಕ್ಕಳಿಗೆ ಆಶಾಕಿರಣವಾಗಲಿ- ಕೆ.ಸೀತಾರಾಮ ರೈ
  • ವಿದ್ಯಾಸಂಸ್ಥೆಗಳಿಗೆ ಪೂರಕವಾಗಿ ಜೋಡಿಸುವ ಕೆಲಸ ಪ್ರೇರಣಾದಿಂದಾಗಲಿ- ಕೆ.ಜೀವಂಧರ್ ಜೈನ್
  • ಪ್ರೇರಣಾದಿಂದ ದೇಶದ ಯಶಸ್ಸು ಕಾಣಬಹುದು- ಪ್ರದೀಪ್ ಆರ್ ಗೌಡ
  • ನಮ್ಮ ಸಂಸ್ಥೆಯನ್ನು ಪ್ರೇರಣಾದೊಂದಿಗೆ ಲಿಂಕ್ ಮಾಡುತ್ತೇವೆ- ಜಯಂತ ನಡುಬೈಲು
  • ನಮ್ಮ ಜಿಲ್ಲೆಯಲ್ಲಿ ಐಎಎಸ್,ಐಪಿಎಸ್ ಹುದ್ದೆ ಸೃಷ್ಟಿಯಾಗಬೇಕು – ಉಮೇಶ್ ನಾಯಕ್
  • ವಿದ್ಯಾರ್ಥಿಗಳ ಭವಿಷ್ಯದ ಮಾರ್ಗಕ್ಕೆ ಪ್ರೇರಣಾ ನಿಮ್ಮೊಂದಿಗಿದೆ – ನಾಗೇಶ್ ಕೆಡೆಂಜಿ

ಪುತ್ತೂರು: ವಿವಿಧ ಅವಕಾಶಗಳಿಗೆ ಒಂದೇ ಸೂರಿನಡಿಯಲ್ಲಿ ತರಬೇತಿ ನೀಡುವ ಕೇಂದ್ರ ‘ಪ್ರೇರಣಾ’ ಸೆ.18ರಂದು ಬೆಳಿಗ್ಗೆ ಪುತ್ತೂರು ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಬಳಿಯ ಪ್ರಭು ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಂಡಿತು.

ಗ್ರಾಮೀಣ ಪರಿಸರದಲ್ಲಿರುವವರಿಗೆ ಅವಕಾಶಗಳು ಕಡಿಮೆ, ಪಿಯುಸಿ ವ್ಯಾಸಂಗ ಮುಗಿದ ಬಳಿಕ ಮುಂದೇನು ?. ಸರಕಾರಿ ಉದ್ಯೋಗಕ್ಕೆ ಯಾವ ರೀತಿ ಅರ್ಹತೆ ಬೇಕು, ಇಂಗ್ಲೀಷ್ ಮಾತನಾಡುವ ಸಮಸ್ಯೆ, ಉನ್ನತ ಶಿಕ್ಷಣ, ಉತ್ತಮ ಶಿಷ್ಯ ವೇತನ ಹೇಗೆ ಪಡೆಯಬಹುದು, ಆಕರ್ಷಕವಾಗಿ ಮಾತನಾಡುವ ಕಲೆ ಹೇಗೆ ಕಲಿಯುವುದು, ಕಾರ್ಯಕ್ರಮ ನಿರೂಪಣೆ ಮಾಡುವ ಸೀಕ್ರೆಟ್ ಏನು ಎಂಬಿತ್ಯಾದಿ ಚಿಂತನೆಗಳಿಗೆ ಒಂದೇ ಸೂರಿನಡಿಯಲ್ಲಿ ತರಬೇತಿ ನೀಡುವ ಪ್ರೇರಣಾ ಸಂಸ್ಥೆಯನ್ನು ಸುಳ್ಯದ ಅಕಾಡೆಮಿ ಆ- ಲಿಬರಲ್ ಎಜ್ಯುಕೇಶನ್ ಇದರ ಆಡಳಿತ ನಿರ್ದೇಶಕ ಡಾ.ರೇಣುಕಾಪ್ರಸಾದ್ ಕೆ.ವಿ ಅವರು ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು ದೀಪ ಪ್ರಜ್ವಲನೆ ಮಾಡಿದರು.

ಪ್ರೇರಣಾ ಮೂಲಕ ಬಂದರೆ ಸಬ್ಸಿಡಿ ಆಧಾರದಲ್ಲಿ ಸೀಟ್: ಸಂಸ್ಥೆಯನ್ನು ಉದ್ಘಾಟಿಸಿದ ಡಾ.ರೇಣುಕಾಪ್ರಸಾದ್ ಕೆ.ವಿ ಅವರು ಮಾತನಾಡಿ ಮೆಡಿಕಲ್‌ಗೆ ಎಷ್ಟೇ ಪ್ರಯತ್ನಪಟ್ಟರೂ ನೀಟ್ ಪಾಸ್ ಮಾಡಬೇಕು.ಮ್ಯಾನೇಜ್‌ಮೆಂಟ್‌ನ ಸೀಟ್ ಕೂಡಾ ಸರಕಾರ ಪುಲ್ ಮಾಡುತ್ತದೆ. ಇದರ ಜೊತೆಗೆ ನಮ್ಮ ಸಂಸ್ಥೆಯಲ್ಲಿ ಕಲಿತವರಿಗೆ ನೂರಕ್ಕೆ ನೂರು ಪ್ಲೇಸ್‌ಮೆಂಟ್ ಆಗುತ್ತಿದೆ.ಈ ಬಾರಿಯೂ ಇಂಜಿನಿಯರಿಂಗ್ ಸೀಟ್ ಕೂಡಾ -ಲ್ ಆಗಿದೆ.ಇದಕ್ಕೆಲ್ಲಾ ವಿದ್ಯಾ ಸಂಸ್ಥೆಯ ಕುರಿತು ಮಾಹಿತಿ ನೀಡುವ ಒಂದು ಸಂಸ್ಥೆಯಿಂದ ಸಾಧ್ಯ ಆಗುತ್ತದೆ.ಬಹುತೇಕ ಮಂದಿ ಊರಿನಲ್ಲೇ ಕಡಿಮೆ ಫೀಸ್‌ನಲ್ಲೇ ವಿದ್ಯಾಸಂಸ್ಥೆಗಳಿದ್ದರೂ ದೂರಕ್ಕೆ ಹೋಗುವವರಿದ್ದಾರೆ.ಇದರಲ್ಲಿ ಅವರ ಅರಿವಿನ ಕೊರತೆ ಕಾಣುತ್ತದೆ.ಈ ನಿಟ್ಟಿನಲ್ಲಿ ಪ್ರೇರಣಾ ಸಂಸ್ಥೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.ಪ್ರೇರಣಾ ಸಂಸ್ಥೆಯ ಮೂಲಕ ನಮ್ಮ ಸಂಸ್ಥೆಗೆ ವಿದ್ಯಾರ್ಥಿಗಳು ಬಂದರೆ ಅವರಿಗೆ ಸಬ್ಸಿಡಿ ಆಧಾರದಲ್ಲಿ ಸೀಟ್ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಪ್ರೇರಣಾ ಸಂಸ್ಥೆ ರಾಜ್ಯದಲ್ಲಿ ರೋಲ್‌ಮೋಡೆಲ್ ಆಗಬೇಕು: ಪ್ರೇರಣಾ ಸಂಸ್ಥೆಯಲ್ಲಿ ದೀಪ ಪ್ರಜ್ವಲನೆ ಮಾಡಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿ ಬರುವಾಗ ನಮ್ಮ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸ್ವ ಉದ್ಯೋಗ, ಸರಕಾರಿ ಉದ್ಯೋಗ ಅದರ ಜೊತೆಯಲ್ಲಿ ಬೇರೆ ಬೇರೆ ಐಟಿ-ಬಿಟಿಗಳಲ್ಲಿ ಯಾವ ಸ್ಥಾನಮಾನ ಪಡೆದುಕೊಂಡು ತಾವು ಉದ್ಯೋಗಸ್ಥರಾಗಬೇಕೆಂಬ ಚಿಂತನೆಯನ್ನು ಪ್ರೇರಣಾ ಸಂಸ್ಥೆ ಕೊಡಲು ಬದ್ದವಾಗಿದೆ. ಇವತ್ತು ವಿದ್ಯೆ ಕೊಡುವವರು, ಬದುಕು ಕೊಡುವವರು ಬಹಳ ಅಗತ್ಯ. ಇದನ್ನು ಆಯ್ಕೆ ಮಾಡುವಲ್ಲಿ ಪ್ರೇರಣಾದ ಕೆಲಸ ಮಹತ್ತರವಾಗಿದ್ದು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಪ್ರೇರಣಾ ಸಂಸ್ಥೆ ರಾಜ್ಯದಲ್ಲಿ ರೋಲ್‌ಮೊಡೆಲ್ ಆಗಲಿ ಎಂದ ಶುಭಹಾರೈಸಿದರು.

ಪ್ರೇರಣಾ ಸಂಸ್ಥೆ ಹಳ್ಳಿಯ ಮಕ್ಕಳಿಗೆ ಆಶಾಕಿರಣವಾಗಲಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅವರು ಮಾತನಾಡಿ, ಸವಣೂರಿನಲ್ಲಿ ೨೨ ವರ್ಷಗಳಿಂದ ವಿದ್ಯಾಸಂಸ್ಥೆ ಕಟ್ಟಿ ಅದರಿಂದ ಸದುಪಯೋಗ ಆಗಲಿ ಎಂದು ಪ್ರಯತ್ನ ಮಾಡುತ್ತಿದ್ದೇನೆ. ಇವತ್ತು ಎಲ್‌ಕೆಜಿಯಿಂದ ಬಿಎ.ಬಿಕಾಂ ತನಕ ನನ್ನೊಂದಿಗೆ ಮಕ್ಕಳಿದ್ದಾರೆ. ಆದರೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಬಂದ ಮರುದಿನ ಮಕ್ಕಳು ಇರುವುದಿಲ್ಲ, ಇದನ್ನು ನಾವು ಗಂಭೀರವಾಗಿ ತೆಗೆದು ಕೊಳ್ಳಬೇಕು. ೩೦ ವರ್ಷದ ಹಿಂದೆ ಪದವಿ ಪಡೆದರೆ ತಕ್ಷಣ ಕೆಲಸ ಸಿಗುತ್ತಿತ್ತು. ಇವತ್ತು ಎಷ್ಟೇ ಪದವಿ ಪಡೆದರೂ ಸರಿಯಾದ ಕೆಲಸ ಸಿಗುವುದು ಕಷ್ಟ.ಇದಕ್ಕೆ ಕಾರಣ ನಮ್ಮ ಯುವ ಜನರಲ್ಲಿ ಕೌಶಲ್ಯ ಕಡಿಮೆ ಆಗಿರುವುದು.ಕೇವಲ ಡಿಗ್ರಿ ಪಡೆದರೆ ಇವತ್ತು ಹುದ್ದೆ ಸಿಗುತ್ತದೆ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಮುಂದೆ ಹೇಗೆ ಸಂದರ್ಶನಕ್ಕೆ ಭಾಗವಹಿಸಬೇಕು. ಉನ್ನತ ತರಬೇತಿ ಏನು ಎಂಬ ಚಿಂತನೆ ಹಾಕಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರೇರಣಾ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ.ಈ ನಿಟ್ಟಿನಲ್ಲಿ ನೂತನ ಪ್ರೇರಣಾ ಸಂಸ್ಥೆ ಹಳ್ಳಿಯ ಮಕ್ಕಳಿಗೆ ಆಶಾ ಕಿರಣ ಆಗಲಿ ಎಂದು ಶುಭಹಾರೈಸಿದರು.

ವಿದ್ಯಾಸಂಸ್ಥೆಗಳಿಗೆ ಪೂರಕವಾಗಿ ಜೋಡಿಸುವ ಕೆಲಸ ಪ್ರೇರಣಾದಿಂದಾಗಲಿ: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಮುಂದಿನ ವಿದ್ಯಾರ್ಥಿಗಳು ಯುವ ಪೀಳಿಗೆಗೆ ಪ್ರೇರಣೆ ಕೊಡುವ ವಿಚಾರ ಉತ್ತಮ. ಸಮಾಜಕ್ಕೆ ಪೂರಕವಾಗಿ ಈ ಸಂಸ್ಥೆ ಹುಟ್ಟು ಹಾಕಿದ್ದಾರೆ.ವಿದ್ಯಾಸಂಸ್ಥೆಗಳಿಗೆ ಪೂರಕವಾಗಿ ಜೋಡಿಸುವ ಕೆಲಸ ಪ್ರೇರಣಾದಿಂದ ಆಗಲಿ.ರಾಜ್ಯದಲ್ಲಿ ಹೆಸರು ಪಡೆಯುವ ಸಂಸ್ಥೆಯಾಗಿ ಮೂಡಿ ಬರಲಿ ಎಂದು ಹೇಳಿದರು.

ಪ್ರೇರಣಾದಿಂದ ದೇಶದ ಯಶಸ್ಸು ಕಾಣಬಹುದು: ಸಿಪಿ ಜಯರಾಮ ಗೌಡರ ಅಳಿಯ ಬೆಂಗಳೂರಿನ ಗೋಲ್ಡ್‌ಮೆನ್ ಸಚ್ ಇದರ ಉಪಾಧ್ಯಕ್ಷರಾಗಿರುವ ಪ್ರದೀಪ್ ಆರ್ ಗೌಡ ಅವರು ಮಾತನಾಡಿ ಇವತ್ತು ಸಮಾಜದಲ್ಲಿ ಸಾವಿರಾರು ಕೋರ್ಸ್‌ಗಳಿವೆ. ಆದರೆ ಅದನ್ನು ಆಯ್ಕೆ ಮಾಡುವಲ್ಲಿ ಗೊಂದಲವಿದೆ. ಮಕ್ಕಳಿಗೂ ಯಾವುದನ್ನು ತೆಗೆದು ಕೊಳ್ಳುವುದು ಎಂಬುದು ಕಷ್ಟ. ಈ ನಡುವೆ ಒತ್ತಡದ ಶಿಕ್ಷಣವೂ ಮಕ್ಕಳ ಮುಂದಿನ ಭವಿಷ್ಯಕ್ಕೆ ತೊಂದರೆ ಆಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆಯ್ಕೆ ಸರಿಯಾ ತಪ್ಪಾ ಎಂಬುದು ಮುಖ್ಯ.ಈ ನಿಟ್ಟಿನಲ್ಲಿ ಪ್ರೇರಣಾದಿಂದ ದೇಶದ ಯಶಸ್ಸು ಕಾಣಬಹುದು ಎಂದರು.

ನಮ್ಮ ಸಂಸ್ಥೆಯನ್ನು ಪ್ರೇರಣಾದೊಂದಿಗೆ ಲಿಂಕ್ ಮಾಡುತ್ತೇವೆ: ಅಕ್ಷಯ ಕಾಲೇಜು ಸಂಚಾಲಕ ಜಯಂತ್ ನಡುಬೈಲು ಅವರು ಮಾತನಾಡಿ ಈಗಿನ ಕಾಲಘಟ್ಟದಲ್ಲಿ ಕಲಿತವರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ.ಈ ನಿಟ್ಟಿನಲ್ಲಿ ಪ್ರೇರಣಾದಂತಹ ಸಂಸ್ಥೆಗಳ ಅಗತ್ಯತೆ ಇದೆ. ನಮ್ಮಲ್ಲಿ ಕಲಿತ ನಂತರ ಅವರಿಗೆ ಉದ್ಯೋಗ ಸಿಗುವ ಕೆಲಸ ನಮ್ಮಿಂದ ಆಗಬೇಕು. ಈ ನಿಟ್ಟಿನಲ್ಲಿ ನಮ್ಮ ಅಕ್ಷಯ ಕಾಲೇಜಿನಲ್ಲಿ ಕಲಿತ ಮಕ್ಕಳಿಗೆ ಇಂಟರ್ನ್‌ಶಿಪ್‌ನಲ್ಲೇ ಕೆಲಸ ಸಿಕ್ಕಿದೆ. ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ನಮ್ಮ ಸಂಸ್ಥೆಯನ್ನು ಪ್ರೇರಣಾದೊಂದಿಗೆ ಲಿಂಕ್ ಮಾಡುತ್ತೇವೆ ಎಂದರಲ್ಲದೆ ಮುಂದಿನ ದಿನ ನಮ್ಮ ಸಂಸ್ಥೆಯಲ್ಲಿ ಪುತ್ತೂರಿನಲ್ಲಿ ಇಲ್ಲದಂತಹ ಶಿಕ್ಷಣ ನೀಡಲಿದ್ದೇವೆ ಎಂದರು.

ನಮ್ಮ ಜಿಲ್ಲೆಯಲ್ಲಿ ಐಎಎಸ್,ಐಪಿಎಸ್ ಹುದ್ದೆ ಸೃಷ್ಟಿಯಾಗಬೇಕು: ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆ, ಕುರುಂಜಿ, ವಿದ್ಯಾರಶ್ಮಿ, ಅಕ್ಷಯ ಸಂಸ್ಥೆಯಂತೆ ಪ್ರೇರಣಾ ಸಂಸ್ಥೆಯು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಪ್ರಚೋದಿಸುವ ಅಥವಾ ಉತ್ತಮ ಮಾರ್ಗದರ್ಶನ ನೀಡುವ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ.ಇಂತಹ ಮಾರ್ಗದರ್ಶನದಿಂದ ನಮ್ಮ ಜಿಲ್ಲೆಯಲ್ಲಿ ಐಎಎಸ್, ಐಪಿಎಸ್ ಹುದ್ದೆ ಸೃಷ್ಟಿಯಾಗಲಿ ಎಂದರು.

ವಿದ್ಯಾರ್ಥಿಗಳ ಭವಿಷ್ಯದ ಮಾರ್ಗಕ್ಕೆ ಪ್ರೇರಣಾ ನಿಮ್ಮೊಂದಿಗಿದೆ: ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ ಕೆಡೆಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತದಲ್ಲಿ ಐಎಎಸ್, ಐಪಿಎಸ್ ಹುದ್ದೆ ಇದ್ದರೂ ಇದರಲ್ಲೂ ಯುಪಿಎಸ್‌ನಿಂದ ೩,೫೦೦, ಭಡ್ತಿ ಹೊಂದಿದವರು ೨,೪೧೫ ಆದರೆ ಇದರಲ್ಲೂ ಉತ್ತರ ಪ್ರದೇಶ, ಬಿಹಾರದಿಂದಲೇ ಅತೀ ಹೆಚ್ಚು ಇದ್ದಾರೆ. ಯಾಕೆ ನಮ್ಮ ರಾಜ್ಯದಿಂದ ಇಂತಹ ಹುದ್ದೆಯನ್ನು ಕೊಡಲಾಗಿಲ್ಲ. ಭಾರತದಲ್ಲಿ ಕರ್ನಾಟಕ ರಾಜ್ಯ ಬಹಳ ಉತ್ತಮ ರಾಜ್ಯ. ಶಿಕ್ಷಣದಲ್ಲಿ ಅತ್ಯಂತ ಹೆಚ್ಚು -ಲಿತಾಂಶ ಬರುವುದು ದಕ್ಷಿಣ ಕನ್ನಡ ಜಿಲ್ಲೆ. ಆದರೆ ನಮ್ಮಿಂದ ಐಎಎಸ್, ಐಪಿಎಸ್ ಆದವರು ಬಹಳ ವಿರಳ. ಹಾಗಾಗಿ ನಮ್ಮ ಸಂಸ್ಥೆ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಒತ್ತು ನೀಡಿ. ವಿವಿಧ ಕೋರ್ಸ್‌ಗಳಿಗೆ ಮಾಹಿತಿ, ಸೌಲಭ್ಯವನ್ನು ನೀಡಲಿದ್ದೇವೆ. ನಮ್ಮ ಈ ಸಂಸ್ಥೆಗೆ ನಿಮ್ಮ ಸಹಕಾರ ಬೇಕು. ವಿದ್ಯಾರ್ಥಿಗಳ ಭವಿಷ್ಯದ ಮಾರ್ಗಕ್ಕೆ ಪ್ರೇರಣಾ ನಿಮ್ಮೊಂದಿಗಿದೆ ಎಂದರು. ಪ್ರೇರಣಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ ಕೆಡೆಂಜಿ, ಮಧು ಕೆ.ಎಮ್, ಮಮತಾ, ದಯಾಮಣಿ, ಸವಿತಾ ಪ್ರವೀಣ್, ದಿವ್ಯಾ ಸಂತೋಷ್, ಪ್ರಮೀಳಾ ಅತಿಥಿಗಳನ್ನು ಗೌರವಿಸಿದರು.ಇದೇ ಸಂದರ್ಭದಲ್ಲಿ ಕಟ್ಟಡ ಮಾಲಕ ನಾಗೇಶ್ ಪ್ರಭು ಅವರನ್ನು ಗೌರವಿಸಲಾಯಿತು.ಸಂಸ್ಥೆಯ ಆಡಳಿತ ನಿರ್ದೇಶಕ ಪ್ರವೀಣ್ ಕುಂಟ್ಯಾನ ಸ್ವಾಗತಿಸಿದರು. ನಿರ್ದೇಶಕರಾದ ಮುರಳೀಧರ, ಸಂತೋಷ್ ರೈ, ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಶ್ರಾವ್ಯ, ಶ್ರೀಮಾ ಪ್ರಾರ್ಥಿಸಿದರು. ನಿರ್ದೇಶಕ ಸಂತೋಷ್ ಕುಮಾರ್ ರೈ ವಂದಿಸಿದರು. ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಪ್ರೇರಣಾ ಸಂಸ್ಥೆಯಲ್ಲಿ ವಾಗ್ಮಿಯಾಗುವ ತರಬೇತಿ ನೀಡಲಾಗುತ್ತದೆ ಎಂಬುದನ್ನು ಸಂಸ್ಥೆಯ ಮುಖ್ಯಸ್ಥರಿಂದ ತಿಳಿದಿದ್ದೇನೆ.ಈ ನಿಟ್ಟಿನಲ್ಲಿ ನನಗೂ ಇದರ ಅವಶ್ಯಕತೆ ಬೀಳುತ್ತದೆ. ಯಾಕೆಂದರೆ ನಾನು ವಾಗ್ಮಿಯಲ್ಲ. ನಮ್ಮಲ್ಲೂ ಅನೇಕ ವಿಚಾರ ಹೇಳುವಂತಿದೆ. ಅದನ್ನು ಹೇಗೆ ಪ್ರಸೆಂಟ್ ಮಾಡಬೇಕೆಂದು ತಿಳಿಯದು. ಈ ನಿಟ್ಟಿನಲ್ಲಿ ನನಗೂ ಟ್ರೈನಿಂಗ್ ಬೇಕಾಗಿದೆ – ಡಾ. ರೇಣುಕಾಪ್ರಸಾದ್

LEAVE A REPLY

Please enter your comment!
Please enter your name here