ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಮೇನಾಲ ಮಧುರಾ ಸ್ಕೂಲ್’ಗೆ ಹಲವು ಪ್ರಶಸ್ತಿ

0

ಪುತ್ತೂರು: ಮೇನಾಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್’ನ ಶಾಮಿಲ್ ಮಧುರಾ ಅಬ್ದುಲ್ ಖಾದರ್ ಹಿರಿಯರ ವಿಭಾಗದ ಹಿಂದಿ ಕಂಠಪಾಠ ಸ್ವರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಿರಿಯರ ವಿಭಾಗದಲ್ಲಿ, ಮುಹಮ್ಮದ್ ಅಬೂಬಕ್ಕರ್ ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಮುಹಮ್ಮದ್ ಸಈದ್ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಮುಹಮ್ಮದ್ ಹಮ್ರಾಝ್ ಇಂಗ್ಲೀಷ್ ಕಂಠಪಾಠ ಸ್ವರ್ಧೆಯಲ್ಲಿ ದ್ವಿತೀಯ ಸ್ಥಾನ, ಹಿರಿಯರ ವಿಭಾಗದಲ್ಲಿ, ಫಾತಿಮತ್ ರಫಾ ಇಂಗ್ಲೀಷ್ ಕಂಠಪಾಠ ಸ್ವರ್ಧೆಯಲ್ಲಿ ತೃತೀಯ ಸ್ಥಾನ, ಲಿಬಾ ಆಯಿಷಾ ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಮೊಹಮ್ಮದ್ ತಾಜುದ್ದೀನ್ ಛದ್ಮವೇಷ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾಸಂಸ್ಥೆಯ ಅಧ್ಯಕ್ಷ ಹನೀಫ್ ಮಧುರಾ, ಕಾರ್ಯನಿರ್ವಾಹಕ ಶೈಕ್ಷಣಿಕ ನಿರ್ದೇಶಕರಾದ ರಫೀಕ್ ಮಾಸ್ಟರ್, ಲೀಡ್ ಅಕಾಡೆಮಿಕ್ ಎಕ್ಸೆಲೆನ್ಸ್ ಮ್ಯಾನೇಜರ್ ಸ್ವಾತಿ ಶೆಟ್ಟಿ, ಕೀ ಅಕೌಂಟ್ ಮ್ಯಾನೇಜರ್ ಪ್ರಮೋದ್ ವಿಜೇತರನ್ನು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಜಾಫರ್ ಸಾದಿಕ್, ಮುಖ್ಯಶಿಕ್ಷಕಿ ರಮ್ಲತ್.ಕೆ, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here