ನೇತ್ರಾವತಿ ಸ್ತ್ರೀಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ

0

ಪುತ್ತೂರು; ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ನೇತ್ರಾವತಿ ಸ್ತ್ರೀಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆಯು ಸೆ.೧೭ರಂದು ಬ್ರಹ್ಮಶ್ರೀ ನಾರಾಯಾಣ ಗುರುಸ್ವಾಮಿ ಸಭಾ ಭವನದಲ್ಲಿ ಸಂಘದ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥರವರ ಅಧ್ಯಕ್ಷತೆಯಲ್ಲಿ ನಡೆಯಿತು.


೨,೬೪ ನಿವ್ವಳ ಲಾಭ:
ಪುತ್ತೂರು ಹಾಗೂ ಕಡಬ ತಾಲೂಕಿನ ಕಾರ್ಯವ್ಯಾಪ್ತಿ ಹೊಂದಿರುವ ಸಂಘವು ವರದಿ ವರ್ಷದಲ್ಲಿ ರೂ.೨೧,೦೨,೦೦೦ ಪಾಲು ಬಂಡವಾಳ ಹೊಂದಿದೆ. ಸಂಘವು ಒಟ್ಟು ರೂ.೭೭,೩೪,೫೦೦ಸಾಲ ವಿತರಿಸಲಾಗಿದ್ದು ರೂ.೫೩,೨೫,೬೮೯ ಹೊರಬಾಕಿಯಿರುತ್ತದೆ. ಯಾವುದೇ ಸುಸ್ತಿ ಸಾಲವಿರುವುದಿಲ್ಲ. ರೂ.೪೧,೭೭,೪೯೦ ನಿರಖ ಠೇವಣಿ ಹೊಂದಿದೆ. ವರದಿ ವರ್ಷದಲ್ಲಿ ಸಂಘವು ೨,೬೪,೯೫೫.೨೦ ನಿವ್ವಳ ಲಾಭಗಳಿಸಿದೆ ಎಂದು ಪ್ರಭಾರ ಮುಖ್ಯ ಕಾರ್ಯಕಾರ್ಯನಿರ್ವಹಣಾಧಿಕಾರಿ ಜಗದೀಶ ಎಂ. ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ಮಾತನಾಡಿ, ಸಂಘದ ಸದಸ್ಯರ ಆರ್ಥಿಕ ಹಿತಾಶಕ್ತಿಯನ್ನು ವೃದ್ಧಿಸುವುದು, ಮಿತವ್ಯಯ, ಉಳಿತಾಯ ಹಾಗೂ ಪರಸ್ಪರ ಸಹಕಾರಕ್ಕೆ ಉತ್ತೇಜ ನೀಡುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಸುತ್ತಿದೆ. ಸಂಘದ ಜೊತೆ ವ್ಯವಹರಿಸಿ, ಸಂಘದ ಬೆಳವಣಿಗೆಯಲ್ಲಿ ಸದಸ್ಯರು ಸಹಕರಿಸುವಂತೆ ಅವರು ಮನವಿ ಮಾಡಿದರು.

ಬೈಲಾ ತಿದ್ದುಪಡಿಗೆ ಅನುಮೋದನೆ:
ಹೊಸದಾಗಿ ರಚನೆಯದ ಕಡಬ ಭಾಗದ ಸದಸ್ಯರಿಗೆ ಪುತ್ತೂರಿನಲ್ಲಿರುವ ಸಂಘದಲ್ಲಿ ವ್ಯವಹರಿಸಲು ಅಸಾಧ್ಯವಾಗುತ್ತಿದೆ. ಇದಕ್ಕಾಗಿ ಬೈಲಾ ತಿದ್ದುಪಡಿ ಮಾಡಿಕೊಂಡು ಕಡಬ ಬಾಗದ ಸದಸ್ಯರಿಗೆ ಸೇವೆ ಒದಗಿಸಲು ಕಡಬದಲ್ಲಿಯೇ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಮಂಡಿಸಿ, ಮಹಾಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.


ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ವನಿತಾ ಸಂಘದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನಿರ್ದೇಶಕರಾದ ಅಮಿತ ಹರೀಶ್, ಜಯಲಕ್ಷ್ಮೀ ಸುರೇಶ್, ಕೀರ್ತಿ ಕುಮಾರಿ, ಸುಲೋಚನಾ, ಸುಶೀಲ ಪಿ. ಹಾಗೂ ಶಕುಂತಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಉಪಾಧ್ಯಕ್ಷೆ ಶಕುಂತಳಾರವರನ್ನು ಸನ್ಮಾನಿಸಲಾಯಿತು. ಸಂಘದಲ್ಲಿ ನಿರಖು ಠೇವಣಿಯಿಟ್ಟ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಹಾಗೂ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ನಿರ್ದೇಶಕಿ ಪ್ರೇಮಲತಾ ಎಸ್ ರೈ ಸ್ವಾಗತಿಸಿದರು. ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ಸ್ವಾಗತಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಂ. ವರದಿ ಹಾಗೂ ಆಯ-ವ್ಯಯ ಮಂಡಿಸಿದರು. ನಿರ್ದೇಶಕಿ ಜಯಂತಿ ಆರ್ ಗೌಡ ವಂದಿಸಿದರು.ಜೊಹರಾ ನಿಸಾರ್ ಕಾರ್ಯಕ್ರಮ ನಿರೂಪಿಸಿದರು. ಲೆಕ್ಕಿಗೆ ಅಶ್ವಿನಿ ಶೆಟ್ಟಿ ಸಹಕರಿಸಿದರು.

LEAVE A REPLY

Please enter your comment!
Please enter your name here