ಕಡಬ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕ ಇದರ ಆಶ್ರಯದಲ್ಲಿ ನ.೨೦ರಂದು ನಡೆಯಲಿರುವ ಕಡಬ ತಾಲೂಕಿನ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಮತ್ತು ಪದವಿ ಕಾಲೇಜು ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಸ್ವರಚಿತ ಕವನ ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಪ್ರಬಂಧ ಮತ್ತು ಸ್ವರಚಿತ ಕವನಗಳನ್ನು ಸ್ಪಷ್ಟವಾಗಿ ಮತ್ತು ಅಂದವಾಗಿ ಹಾಳೆಯಲ್ಲಿ ಬರೆದು ತಮ್ಮ ಸ್ಪಷ್ಟ ವಿಳಾಸ, ಮೊಬೈಲ್ ನಂಬರ್, ವಿಭಾಗ, ಸಂಸ್ಥೆಯ ಹೆಸರನ್ನು ನಮೂದಿಸಿ ಅಕ್ಟೋಬರ್ ೧೦ರ ಮೊದಲು ಕೆ. ಸೇಸಪ್ಪ ರೈ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕ ಅಂಚೆ ರಾಮಕುಂಜ, 574341 (ಮೊ.ನಂ 9663755105) ಇವರಿಗೆ ಕಳುಹಿಸುವಂತೆ ಕೋರಲಾಗಿದೆ.
ಪ್ರಬಂಧದ ವಿಷಯ: ‘ಸಾಹಿತ್ಯ ನಮ್ಮ ಬದುಕಿನ ಮೇಲೆ ಬೀರುವ ಪರಿಣಾಮ‘. ಸ್ಪರ್ಧಾ ವಿಜೇತರಿಗೆ ನ.2೦ರಂದು ಬಿಳಿನೆಲೆ ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಂದು ಬಹುಮಾನ ನೀಡಿ ಪುರಸ್ಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.