ಮಣ್ಣಿನಡಿಗೆ ಬಿದ್ದ ನಾಯಿ ಮರಿಯನ್ನು ರಕ್ಷಿಸಿದ ವಿದ್ಯಾರ್ಥಿಗಳು

0

ಪುತ್ತೂರು; ಜೆಸಿಬಿಯ ಮೂಲಕ ಮಣ್ಣು ಹಾಕುವಾಗ ಮಣ್ಣಿನಡಿಗೆ ಬಿದ್ದ ನಾಯಿ ಮರಿಯನ್ನು ನಾಲ್ಕು ಗಂಟೆಗಳ ಬಳಿಕ ರಕ್ಷಣೆ ಮಾಡಿ ಮಾನವೀಯತೆ ಮೆರೆದ ಘಟನೆ ತ್ಯಾಗರಾಜೆಯಲ್ಲಿ ನಡೆದಿದೆ.

ತ್ಯಾಗರಾಜೆ ಮದ್ರಸದ ಬಳಿ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ನಡೆಯುತ್ತಿತ್ತು. ಯಂತ್ರದ ಮೂಲಕ ಮಣ್ಣು ಹಾಕುವಾಗ ಪೊದೆಯೊಳಗಿದ್ದ ನಾಯಿ ಮರಯ ಮೇಲೆ ಮಣ್ಣು ಹಾಕಲಾಗಿತ್ತು. ಪೊದೆಯಲ್ಲಿ ನಾಯಿ ಮರಿ ಇರುವ ವಿಚಾರ ಆಪರೇಟರ್ ಗಮನಕ್ಕೂ ಬಂದಿರಲಿಲ್ಲ. ಸಂಜೆ ವೇಳೆ ನಾಯಿ ಮರಿಯೊಂದು ಸಣ್ಣಗೆ ಅಳುತ್ತಿರುವ ಸಬ್ದ ಕೇಳಿ ಬಂದಾಗ ಮಸೀದಿಗೆ ತೆರಳುವ ವ್ಯಕ್ತಿ ಎಲ್ಲೋ ಮರಿ ಇರಬಹುದು ಎಂದು ಅಲ್ಲಿಂದ ತೆರಳಿದ್ದರು. ರಾತ್ರಿ ವೇಳೆ ಮದ್ರಸ ಬಿಟ್ಟು ವಿದ್ಯಾರ್ಥಿಗಳು ಮನೆಗೆ ತೆರಳುವಾಗ ಮಣ್ಣಿನಡಿಯಿಂದ ನಾಯಿ ಮರಿಯೊಂದು ಅಳುತ್ತಿರುವ ಶಬ್ದ ಕೇಳಿಸಿದೆ. ಕೂಡಲೇ ವಿದ್ಯಾರ್ಥಿಗಳು ಶಬ್ದ ಕೇಳಿ ಬಂದ ಕಡೆ ಮಣ್ಣು ತೆಗೆದಾಗ ನಾಯಿ ಮರಿಯೊಂದು ಮಣ್ಣಿನಡಿಯಲ್ಲಿ ಹೂತು ಹೋಗಿತ್ತು. ಮರಿಯ ಮೇಲೆ ಪೊದೆಗಳು ಬಿದ್ದ ಕಾರಣ ನಾಯಿ ಸಾಯದೇ ಬದುಕಿ ಉಳಿದಿತ್ತು. ವಿದ್ಯಾರ್ಥಿಗಳ ಮಾನವೀಯತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here