ನೆಲ್ಯಾಡಿ: ಇಜಿಲಂಪಾಡಿ ಬೀಡಿನ ಉದ್ಯಪ್ಪ ಅರಸರಾದ ಶುಭಾಕರ ಹೆಗ್ಗಡೆಯವರಿಂದ ಮಾಡ ಶ್ರೀ ಉಳ್ಳಾಕುಲ ದೈಸ್ಥಾನದಲ್ಲಿ ಸಂಕ್ರಾಂತಿಯ ಪರ್ವ ಕಾಲದಲ್ಲಿ ವಿದ್ಯಾರ್ಥಿ ಡೈರೆಕ್ಟರಿ ಮತ್ತು ಮಕ್ಕಳ ಡೈರೆಕ್ಟರಿ ಬಿಡುಗಡೆಗೊಂಡಿತು.
ಇದು ವಿದ್ಯಾರ್ಥಿಗಳನ್ನು ಮತ್ತು ಮಕ್ಕಳನ್ನು ದೇವಸ್ಥಾನ ಮತ್ತು ದೈವಸ್ಥಾನಕ್ಕೆ ಸೆಳೆದು ಕೊಂಡು ಬರುವುದರಲ್ಲಿ ಮುಖ್ಯ ಪಾತ್ರವಹಿಸಲಿದ್ದು, ಆನ್ಲೈನ್ ವಿದ್ಯಾಭ್ಯಾಸದ ಪಾತ್ರ ಮಾಡಿ, ವಿದ್ಯಾರ್ಥಿಗಳ ಕಲಿಕೆಯ ವೆಚ್ಚವನ್ನು ವಿದ್ಯಾಥಿಗಳೇ ಬರಿಸುವ ವಿಪುಲ ಅವಕಾಶವಿರುವುದನ್ನು ಹಂತ ಹಂತವಾಗಿ ನಮ್ಮ ಅನುಭವಕ್ಕೆ ಬರಲಿದೆ ಎಂದು ಶುಭಾಕರ ಹೆಗ್ಗಡೆಯವರು ತಿಳಿಸಿದರು. ಪ್ರತಿ ಮಗುವಿನಿಂದ ಹಿಡಿದು ವಿದ್ಯಾರ್ಥಿಗಳು ಪ್ರತಿ ವೃತ್ತಿದಾರರು ವಿಭಿನ್ನ ಜಾತಿಗಳ ಜನರನ್ನು – ಪ್ರತಿ ಜಗದ ಮಾನವರನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶ ಹೊಂದಿದೆ. ಬಿಡುಗಡೆ ಮಾಡಿರುವ ಎರಡು ಡೈರೆಕ್ಟರಿಗಳಲ್ಲಿ ನಿಕಟ ಬಂಧುಗಳ ಪರಿಚಯಿಸಿರುವುದು ವಂಶವೃಕ್ಷ ಗೋಚರಿಸುತ್ತದೆ. ಪ್ರತಿಯೊಂದು ಅಪ್‌ಲೋಡ್‌ಗೆ ಕೇವಲ 200 ರೂಪಾಯಿ ಶಾಶ್ವತ ಶುಲ್ಕ ಶೇ.೨೦ಪಾಲುದಾರಿಕೆ ಮಾಹಿತಿದಾರರಿಗೆ ಕೊಡುವ ಸಂಕಲ್ಪ ಹೊಂದಿದ್ದು, ದೈವಸ್ಥಾನ ಮತ್ತು ದೇವಸ್ಥಾನಕ್ಕೆ ನಾನು ಶೇ.10 ಮತ್ತು ಮಾಹಿತಿದಾರರು ಕೂಡ ಶೇ.10 ಈ ಗಳಿಕೆಯಲ್ಲಿ ಕೊಟ್ಟಾಗ ಸ್ವಾವಲಂಬಿ ದೈವಸ್ಥಾನ ದೇವಸ್ಥಾನ ಮತ್ತು ಬದುಕು ನನ್ನ ಬಾಯಿಂದ ಬರುವ ನಿತ್ಯ ನುಡಿಮುತ್ತುಗಳು ಸಾಕಾರಗೊಳ್ಳಲಿದೆ. ಪ್ರತಿ ಮೊಬೈಲ್ ಬಳಕೆದಾರರು ಕೂಡ ಈ ನಿಟ್ಟಿನಲ್ಲಿ ಪಾಲ್ಗೊಳ್ಳುವ ಅವಕಾಶ ವಿಪುಲ ಉದ್ಯೋಗ ಸೃಷ್ಟಿಸಲಿದೆ. ವಿಭಿನ್ನ ದೃಷ್ಟಿಕೋನದಲ್ಲಿ ನೋಡಿದಾಗ ಪ್ರಯೋಜನಗಳ ಸುರಿಮಳೆಯಾಗಲಿದೆ. ದೈವ ದೇವರ ಕೃಪೆ ನಾನು ನಿಮ್ಮಿತ್ತ ಮಾತ್ರ ಎಂದು ತಿಳಿಸುತ್ತ ನಾವೆಲ್ಲರೂ ಬಳಸಿ ನೋಡುವ ಸಂಕಲ್ಪ ಮಾಡೋಣ ಎಂದು ಶುಭಾಕರ ಹೆಗ್ಗಡೆಯವರು ಹೇಳಿದರು.