ಕಾಣಿಯೂರು:ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಬೈತಡ್ಕ ರೇಂಜ್ ಇದರ ಸಾಮಾನ್ಯ ಸಭೆಯು ಸೆ 20 ರಂದು ಪಳ್ಳತ್ತಾರು ತಕ್ವಿಯತುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.
ಬೈತಡ್ಕ ರೇಂಜ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಖಾಫಿ ಅರಿಕ್ಕಿಲ ಸಭಾಧ್ಯಕ್ಷತೆ ವಹಿಸಿದರು.ಪಳ್ಳತ್ತಾರು ಮಸೀದಿಯ ಖತೀಬ್ ಮುಶ್ತಾಕ್ ಕಾಮಿಲ್ ಸಖಾಫಿ ಉದ್ಘಾಟಿಸಿದರು.ಜಮಾಅತ್ ಕಾರ್ಯದರ್ಶಿ ನವಾಝ್ ಸಖಾಫಿ,ಅಬೂಬಕರ್ ಫಾಳಿಲಿ ಶುಭ ಹಾರೈಸಿದರು. ಬಳಿಕ ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ ಆಧುನಿಕ ಶೈಲಿಯಲ್ಲಿ ಮೋಡೆಲ್ ಕ್ಲಾಸ್ ನಡೆಸಿಕೊಟ್ಟರು. ರಬೀವುಲ್ ಅವ್ವಲ್ ತಿಂಗಳಿನಲ್ಲಿ ನಡೆಯಲಿರುವ ರೇಂಜ್ ಮಟ್ಟದ ಪ್ರತಿಭಾ ಕಾರಂಜಿಗೆ ಸಮಿತಿಯನ್ನು ರೂಪಿಸಲಾಯಿತು.
ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಅಬೂಬಕರ್ ಹಾಜಿ, ಉಪಾಧ್ಯಕ್ಷ ಉಸ್ಮಾನ್ ಕೂಂಕ್ಯ, ಕೋಶಾಧಿಕಾರಿ ಉಪ್ಪಂಞಿ ಹಾಜಿ, ಅಬ್ಬಾಸ್ ಏರಿಮಾರ್ ಸೇರಿದಂತೆ ಜೈತಡ್ಕ ರೇಂಜ್ ವ್ಯಾಪ್ತಿಯ 25 ಮದ್ರಸಗಳ ಸುಮಾರು 50 ರಷ್ಟು ಉಸ್ತಾದರುಗಳು ಭಾಗವಹಿಸಿದ್ದರು.ರೇಂಜ್ ಕಾರ್ಯದರ್ಶಿ ಅಬ್ಬಾಸ್ ಮದನಿ ಸ್ವಾಗತಿಸಿ ವಂದಿಸಿದರು.