ಪುತ್ತೂರು: ಮಸ್ಜಿದುಲ್ ಬದ್ರಿಯಾ ಜುಮಾ ಮಸೀದಿ ಅಜ್ಜಿಕಟ್ಟೆ ಇದರ ಅಧೀನದಲ್ಲಿರುವ ರಿಫಾಯಿಯ ದಫ್ ಕಮಿಟಿ ಅಜ್ಜಿಕಟ್ಟೆ ಇದರ ವತಿಯಿಂದ ಉಚಿತ ಸುನ್ನತ್ ಕಾರ್ಯಕ್ರಮ ಸೆ.೨೨ ರಂದು ಅಜ್ಜಿಕಟ್ಟೆ ಮಸೀದಿ ವಠಾರದಲ್ಲಿ ನಡೆಯಿತು. ಸ್ಥಳೀಯ ಖತೀಬ್ ಇಸಾಕ್ ದಾರಿಮಿ ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ.ಸಿದ್ದಿಕ್‌ರವರು ಸುನ್ನತ್‌ನ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಅಜ್ಜಿಕಟ್ಟೆ ಮಸೀದಿಯ ಗೌರವಾಧ್ಯಕ್ಷ ಇಬ್ರಾಹಿಂ ಮುಲಾರ್, ಅಧ್ಯಕ್ಷ ಉಮ್ಮರ್ ಪಟ್ಟೆ, ರಿಫಾಯಿಯ ದಫ್ ಕಮಿಟಿ ಅಧ್ಯಕ್ಷ ಸುಲೈಮಾನ್ ಮುಲಾರ್, ರಶೀದ್ ಹಾಜಿ ಕೋಡಿಜಾಲ್, ಇಬ್ರಾಹಿಂ ಹಾಜಿ, ಅದಂ ಕುಂಞಿ, ಅಬೂಬಕ್ಕರ್ ಮುಲಾರ್, ಇಬ್ರಾಹಿಂ ಕುರಿಯ, ರಝಾಕ್ ಮುಲಾರ್, ಶರೀಫ್ ಅಜ್ಜಿಕಟ್ಟೆ, ಸದರ್ ಖಾಲಿದ್ ಅಕ್ರಮ್ ಅಸ್ಲಮಿ, ದಫ್ ಕಮಿಟಿ ಪ್ರಧಾನ ಕಾರ್ಯದರ್ಶಿ ಆಶ್ರಫ್, ಮುಸ್ತಫಾ ಅಜ್ಜಿಕಟ್ಟೆ, ಇಬ್ರಾಹಿಂ ಪಟ್ಟೆ, ಜಬ್ಬಾರ್ ಎಂ.ಎಸ್ ಕುರಿಯ, ಅಸಿಫ್ ಎ. ಆರ್ ಮಹಮ್ಮದ್ (ಮಮ್ಮು) ಅಜ್ಜಿಕಟ್ಟೆ, ಜಮಾಅತ್ ಕಮಿಟಿ ಕಾರ್ಯದರ್ಶಿ ನಝೀರ್ ಅರ್ಷದಿ, ಜಬ್ಬಾರ್ ಅಜ್ಜಿಕಟ್ಟೆ, ಝೈದ್ ಬೊಳ್ಳಗುಡ್ಡೆ, ಇಲ್ಯಾಸ್ ಅಜ್ಜಿಕಟ್ಟೆ, ಸಿಯಾಬ್, ಮುನೀರ್ ಪಂಜಳ, ಮತ್ತು ಜಮಾಅತ್ ಕಮಿಟಿ ಸದಸ್ಯರು ಉಪಸ್ಥಿಗಳಿದ್ದರು. ಖಾಲಿದ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.