- 5,68 ಲಕ್ಷ ರೂ.ನಿವ್ವಳ ಲಾಭ; ಶೇ.25 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 86 ಪೈಸೆ ಬೋನಸ್ ಘೋಷಣೆ
ಕಡಬ: ಪೆರಾಬೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ಆವರಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಲೀಲಾವತಿ ಎಸ್.ಶೆಟ್ಟಿಯವರು ಮಾತನಾಡಿ, 2021-22ನೇ ಸಾಲಿನಲ್ಲಿ ಸಂಘವು 12,35,514 ರೂ. ವ್ಯಾಪಾರ ವಹಿವಾಟು ಮಾಡಿದ್ದು 5,68,654.90 ರೂ.,ನಿವ್ವಳ ಲಾಭಗಳಿಸಿದೆ. ಲಾಭದಲ್ಲಿ ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 86 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು. ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಡಿ.ಆರ್.ಸತೀಶ್ ರಾವ್‌ರವರು ಹೈನುಗಾರಿಕೆ ಬಗ್ಗೆ ಮಾಹಿತಿ ನೀಡಿದರು. ವಿಸ್ತರಣಾಧಿಕಾರಿ ಯಮುನಾರವರು ಒಕ್ಕೂಟದಿಂದ ಹೈನುಗಾರರಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಪ್ರಕಾಶಿನಿ ವಿ.ಶೆಟ್ಟಿ, ನಿರ್ದೇಶಕಿಯರಾದ ಮಧುರ ಸಿ., ವಿಜಯಲಕ್ಷ್ಮಿ ಎಸ್.ರೈ, ಭವಾನಿ, ಅಮಿತಾ ಎ., ನಾಗವೇಣಿ, ಕುಸುಮಾವತಿ ಬಿ., ಶೀಲಾವತಿ, ಶಾರದ ಜಿ., ಕಮಲಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಚೈತ್ರ ನಂದನ್‌ಕುಮಾರ್ ವರದಿ ಮಂಡಿಸಿದರು. ನಿರ್ದೇಶಕಿ ಮಧುರ ಸಿ.ಸ್ವಾಗತಿಸಿ, ನಿರ್ದೇಶಕಿ ಅಮಿತಾ ವಂದಿಸಿದರು. ಸಂಘದ ಉಪಾಧ್ಯಕ್ಷೆ ಪ್ರಕಾಶಿನಿ ವಿ.ಶೆಟ್ಟಿ ಪ್ರಾರ್ಥಿಸಿದರು. ಸಹಾಯಕಿ ಪ್ರತಿಮಾ ಶೆಟ್ಟಿ ಸಹಕರಿಸಿದರು.
ಸನ್ಮಾನ:
ಸಂಘದ ಕಾರ್ಯದರ್ಶಿಯಾಗಿದ್ದ ಪ್ರಫುಲ್ಲರವರು ವಿಸ್ತರಣಾಧಿಕಾರಿಯಾಗಿ ಬಡ್ತಿ ಹೊಂದಿದ್ದು ಅವರನ್ನು ಸಭೆಯಲ್ಲಿ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಿ ಗೌರವಿಸಲಾಯಿತು.
ಬಹುಮಾನ ವಿತರಣೆ:
ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಮಾಲಿನಿ ಜಿ.ಶೆಟ್ಟಿ(ಪ್ರಥಮ), ಭಾರತಿ ಬಿ.(ದ್ವಿತೀಯ) ಹಾಗೂ ಭವ್ಯಶ್ರೀ ಕೆ.ಟಿ.(ತೃತೀಯ)ಬಹುಮಾನ ಪಡೆದುಕೊಂಡರು. 2021-22ನೇ ಸಾಲಿನಲ್ಲಿ ಸಂಘಕ್ಕೆ ಹಾಲು ಹಾಕಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.