




ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಮುದ್ದಿಗೆ ಎಂಬಲ್ಲಿ ಮನೆಯ ವಿದ್ಯುತ್ ಬಿಲ್ ಪಾವತಿಸದ ಹಿನ್ನಲೆ ಫ್ಯೂಸ್ ತೆಗೆದಿದ್ದ ಕಾರಣಕ್ಕೆ ಮೆಸ್ಕಾಂ ಪವರ್ ಮ್ಯಾನ್ ಮೇಲೆ ಧಮ೯ಸ್ಥಳ ಗ್ರಾಮದ ರಿಜೇಶ್ ಮತ್ತಿತರರು ಹಲ್ಲೆ ಮಾಡಿರುವ ಘಟನೆ ಸೆ.22 ರಂದು ರಾತ್ರಿ ವೇಳೆ ಕೊಕ್ಕಡದಲ್ಲಿ ನಡೆದಿದೆ.









ಹತ್ಯಡ್ಕ ನಿವಾಸಿ ಕಾಂತುಪೂಜಾರಿ ಎಂಬವರು ಮನೆಯ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಇಲಾಖೆ ಸೂಚನೆಯನ್ವಯ ಕೊಕ್ಕಡದ ಪವರ್ ಮ್ಯಾನ್ ಉಮೇಶ್ ವಿದ್ಯುತ್ ಬಿಲ್ ಪಾವತಿಸದ ಹಿನ್ನಲೆ ಫ್ಯೂಸ್ ತೆಗೆದಿದ್ದಾರೆ. ನಂತರ ಸೆ.21ರಂದು ಬಿಲ್ ಪಾವತಿಸಿದ್ದು, ವಿದ್ಯುತ್ ಸಂಪರ್ಕ ನೀಡಲಾಯಿತೆನ್ನಲಾಗಿದೆ.
ವಿದ್ಯುತ್ ಸಂಪರ್ಕದ ಫ್ಯೂಸ್ ತೆಗೆದ ವಿಚಾರದಲ್ಲಿ ಕಾಂತು ಪೂಜಾರಿಯವರ ಸಂಬಂಧಿ ಸೆ.22ರಂದು ರಾತ್ರಿ ಕೊಕ್ಕಡದಲ್ಲಿ ಪವರ್ ಮ್ಯಾನ್ ಉಮೇಶ್ ಅವರನ್ನು ಪ್ರಶ್ನಿಸಿ, ಹಲ್ಲೆಗೆ ಮುಂದಾದಾಗ ಪವರ್ ಮ್ಯಾನ್ ದುಂಡಪ್ಪ ಇದನ್ನು ತಡೆದರೆನ್ನಲಾಗಿದೆ. ಈ ಸಂದರ್ಭ ಆರೋಪಿ ಪವರ್ ಮ್ಯಾನ್ ದುಂಡಪ್ಪ ತಲೆಗೆ ಹೊಡೆದಿದ್ದಾರೆ. ತಲೆಗೆ ತೀವ್ರ ಗಾಯಗೊಂಡ ದುಂಡಪ್ಪ ಅವರನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮಸ್ಥಳ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.








