ಸೆ.26-ಅ.5:ಮೊಟ್ಟೆತ್ತಡ್ಕ ಮಿಶನ್‌ಮೂಲೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸೆ.26 ರಿಂದ ಅ.5ರ ವರೆಗೆ ವರ್ಷಂಪ್ರತಿ ಆಚರಿಸುತ್ತಿರುವ ಸಾರ್ವಜನಿಕ ನವರಾತ್ರಿ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಸೋಮವಾರ ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ರಾತ್ರಿ ಮೊಟ್ಟೆತ್ತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಮಹಾಪೂಜೆ, ಮಂಗಳವಾರ ರಾತ್ರಿ ಮನುಕುಮಾರ್ ಶಿವನಗರ ಇವರ ಸಂಚಾಲಕತ್ವದಲ್ಲಿ ಕಲ್ಲೇಗ ಶಿವನಗರ ಶಿವಮಣಿ ಕಲಾಸಂಘದಿಂದ ಸಾಂಸ್ಕೃತಿಕ ಕಲಾರಂಜನೆ ಕಾರ್ಯಕ್ರಮ ಬಳಿಕ ಮಹಾಪೂಜೆ, ಬುಧವಾರ ರಾತ್ರಿ ನಾಟ್ಯರಂಜಿನಿ ಕಲಾಲಯ ಮೊಟ್ಟೆತ್ತಡ್ಕ ಅರ್ಪಿಸುವ ‘ನೃತ್ಯ-ಗಾನ-ಯೋಗಾಸನ’ ಮತ್ತು ‘ತಾಲೀಮು ಪ್ರದರ್ಶನ ಬಳಿಕ ಮಹಾಪೂಜೆ, ಗುರುವಾರ ಮೊಟ್ಟೆತ್ತಡ್ಕ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಮಹಾಪೂಜೆ ನಡೆಯಲಿರುವುದು.

ಶುಕ್ರವಾರ ರಾತ್ರಿ ಪುತ್ತೂರು ಬಾಲವನ ಧೀಮಹಿ ಮಹಿಳಾ ಯಕ್ಷಗಾನ ತಂಡದಿಂದ ತಾಳಮದ್ದಳೆ-ಮಹಿಷವಧೆ ಬಳಿಕ ಮಹಾಪೂಜೆ, ಶನಿವಾರ ರಾತ್ರಿ ಸೆವೆನ್ ಸ್ಟಾರ್ ಗೈಯ್ಸ್ ಪುತ್ತೂರು ಅರ್ಪಿಸುವ, ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದಲ್ಲಿ ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ ವಿಭಿನ್ನ ಶೈಲಿಯ ಸೂಪರ್‌ಹಿಟ್ ನಾಟಕ ‘ಶಿವದೂತೆ ಗುಳಿಗೆ’ ಪ್ರದರ್ಶನ ಬಳಿಕ ಮಹಾಪೂಜೆ, ಆದಿತ್ಯವಾರ ನಾಟ್ಯರಂಜಿನಿ ಕಲಾಲಯ ಮೊಟ್ಟೆತ್ತಡ್ಕ ಇವರಿಂದ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚುಪುಡಿ ನೃತ್ಯ ಕಾರ್ಯಕ್ರಮ ಮತ್ತು ‘ರಾಧಾಕೃಷ್ಣ ಲೀಲಾ ವಿಲಾಸಂ’ ನೃತ್ಯರೂಪಕ ಪ್ರದರ್ಶನ ಬಳಿಕ ಮಹಾಪೂಜೆ ಜರಗಲಿರುವುದು.

ಸೋಮವಾರ(ಅ.3) ರಾತ್ರಿ ದಿ|ನಂಬಿ ಪಾಟಾಳಿ ಮತ್ತು ದಿ.ಸಂಜೀವಿ ಮೊಟ್ಟೆತ್ತಡ್ಕ, ಕೆಮ್ಮಿಂಜೆ ಇವರ ಸ್ಮರಣಾರ್ಥ ಮಕ್ಕಳಾದ ನವೀನ್ ಕುಮಾರ್ ಪಾಟಾಳಿ ಮೊಟ್ಟೆತ್ತಡ್ಕ, ಕಾಸರಗೋಡು ಕಾಟುಕುಕ್ಕೆ ಬಾಳೆಮೂಲೆ ಶ್ರೀಮತಿ ಭಾರತಿ ಮನೋಹರ್ ಪಾಟಾಳಿರವರ ಸೇವಾಕರ್ತವಾಗಿ ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದರ ಅಪೂರ್ವ ಸಮಾಗಮವುಳ್ಳ ‘ಯಕ್ಷಗಾನ ಬಯಲಾಟ-ಶ್ರೀ ಶನೀಶ್ವರ ಮಹಾತ್ಮೆ’ ಪ್ರದರ್ಶನ ಬಳಿಕ ಮಹಾಪೂಜೆ, ಮಂಗಳವಾರ(ಅ.4) ರಾತ್ರಿ ಕವಿದಿನ್ ಮೆಲೋಡಿಸ್ ಪುತ್ತೂರು ಇವರಿಂದ ಭಕ್ತಿ ರಸಮಂಜರಿ ಬಳಿಕ ಮಹಾಪೂಜೆ ನಡೆಯಲಿರುವುದು.

ಪ್ರತಿದಿನ ರಾತ್ರಿ ಪೂಜೆಯ ಬಳಿಕ ಸಾರ್ವಜನಿಕ ಅನ್ನದಾನ ನಡೆಯಲಿರುವುದು. ಪ್ರಧಾನ ಅರ್ಚಕರಾಗಿ ಉದಯನಾರಾಯಣ ಕಲ್ಲೂರಾಯ ಸಂಪ್ಯ, ಸಹಾಯಕ ಅರ್ಚಕರಾಗಿ ರಮೇಶ್ ಅಯ್ಯರ್ ಮುಕ್ರಂಪಾಡಿರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿರುವರು. ಭಕ್ತಾಭಿಮಾನಿಗಳು ಈ ಹತ್ತು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಮೋಹನ್ ರೈ ಮಿಶನ್‌ಮೂಲೆ, ಪ್ರಭಾರ ಅಧ್ಯಕ್ಷ ರಾಮ ಶೆಟ್ಟಿ, ಕಾರ್ಯದರ್ಶಿ ಕೆ.ಬಿ ಶೇಖರ, ಜೊತೆ ಕಾರ್ಯದರ್ಶಿ ಲಕ್ಷ್ಮಣ ಶೆಟ್ಟಿ, ಕೋಶಾಧಿಕಾರಿ ಮೋಹನ್ ಕುಮಾರ್, ಲೆಕ್ಕಪರಿಶೋಧಕರಾದ ಬಿ.ವಿಶ್ವನಾಥ ರೈ ಮಿಶನ್‌ಮೂಲೆರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[box type=”note” bg=”#” color=”#” border=”#” radius=”13″]-ಸೆ.29 ಗುರುವಾರದಿಂದ ಅ.4ರ ಮಂಗಳವಾರದ ವರೆಗೆ ರಾತ್ರಿ ವಾಹನಗಳಿಗೆ ಆಯುಧಪೂಜೆ ನಡೆಯಲಿರುವುದು. -ಸೆ.26 ಸೋಮವಾರದಿಂದ ಅ.4 ಮಂಗಳವಾರದ ವರೆಗೆ ಪ್ರತಿದಿನ ಸಂಜೆ(ಗಂಟೆ ಆರರಿಂದ) ಭಜನಾ ಕಾರ್ಯಕ್ರಮ ನಡೆಯಲಿರುವುದು. -ಬುಧವಾರ(ಅ.5) ರಾತ್ರಿ ವಿಜಯದಶಮಿ ದಿನದಂದು ಮಧ್ಯಾಹ್ನ ಮಕ್ಕಳಿಗೆ ಅಕ್ಷರಾಭ್ಯಾಸ, ವಿಜಯದಶಮಿ ಪೂಜೆ, ಪ್ರಸಾದ ವಿತರಣೆ ಮತ್ತು ನವಾನ್ನ ಭೋಜನ ಜರಗಲಿದೆ.[/box]

LEAVE A REPLY

Please enter your comment!
Please enter your name here