ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ; ರಾಮಕುಂಜೇಶ್ವರ ಕ.ಮಾ.ಪ್ರೌಢಶಾಲೆ ಚಾಂಪಿಯನ್

0

ರಾಮಕುಂಜ: ಕಡಬ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ 8 ಪ್ರಥಮ ಸ್ಥಾನ ಸಹಿತ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ರೆಂಜಿಲಾಡಿ ಸಾಂಥೋಮ್ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಸ್ಪರ್ಧೆಗಳು ನಡೆಯಿತು. ಕನ್ನಡ ಭಾಷಣದಲ್ಲಿ ಮಧುಶ್ರೀ ಎ. ಮತ್ತು ಧೀರಜ್ ಕೆ. ಆರ್, ಹಿಂದಿ ಭಾಷಣದಲ್ಲಿ ಜಾಹ್ನವಿ ಕೆ., ಸಂಸ್ಕೃತ ಭಾಷಣದಲ್ಲಿ ಅನುಶ್ರೀ ಉಡುಪ ಆರ್, ಜನಪದ ಗೀತೆಯಲ್ಲಿ ಪೂಜಾಶ್ರೀ, ಛದ್ಮವೇಷದಲ್ಲಿ ರಮ್ಯ, ಹಾಸ್ಯದಲ್ಲಿ ಹರ್ಷಿತಾ, ರಸಪ್ರಶ್ನೆಯಲ್ಲಿ ಮೋಕ್ಷಿತ್ ಟಿ ಮತ್ತು ರಮ್ಯ ಪ್ರಥಮ ಸ್ಥಾನ ಪಡೆದುಕೊಂಡರು. ರಂಗೋಲಿಯಲ್ಲಿ ಶ್ರೀನಿಧಿ ಪಿ., ದ್ವಿತೀಯ, ಮಿಮಿಕ್ರಿಯಲ್ಲಿ ಹರ್ಷಿತ್, ಜನಪದ ನೃತ್ಯದಲ್ಲಿ ಊರ್ಮಿಳಾ ಮತ್ತು ತಂಡದವರು ತೃತೀಯ ಸ್ಥಾನ ಪಡೆದುಕೊಂಡಿದ್ದು ಶಾಲೆಗೆ ಪ್ರಥಮ ಸಮಗ್ರ ಪ್ರಶಸ್ತಿ ಲಭಿಸಿದೆ. ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯಗುರು ಮತ್ತು ಅಧ್ಯಾಪಕ ವೃಂದದವರು ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here