ವಲಯ ಮಟ್ಟದ ಪ್ರತಿಭಾ ಕಾರಂಜಿ : ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

0

ಉಪ್ಪಿನಂಗಡಿ: ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ಪ್ರೌಢಶಾಲಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ವಿಜೇತರು : ಎಂ.ಕೆ ಭಾಮತಿ ಉಪಾಧ್ಯಾಯ(9ನೇ ತರಗತಿ) ಗಝಲ್ ಪ್ರಥಮ, ಕವ್ವಾಲಿ ಪ್ರಥಮ(ಭಾಗವಹಿಸಿದ ತಂಡ ಎಂ.ಕೆ ಭಾಮತೀ ಉಪಾಧ್ಯಾಯ, ಅಮತ್ತನೂ ಸಲೀಂ, ಸಾರಾ ನೀಮಾ, ಆಲಿಮತ್ ಸುಹೈಲ, ಮೊಹಮ್ಮದ್ ಹಾಶೀಂ, ಮಹಮ್ಮದ್) ಎಸ್.ಎ. ದೀಕ್ಷಿತಾ ಜೈನ್ (10ನೇ ತರಗತಿ)ಕನ್ನಡ ಭಾಷಣ, ಶ್ರೀಲಕ್ಷ್ಮೀ ಟಿ.ಎಸ್ (10ನೇ ತರಗತಿ)ಮಿಮಿಕ್ರಿ ದ್ವಿತೀಯ, ಶಮಾ ಒ. ಎಸ್ (10ನೇ ತರಗತಿ) – ಕನ್ನಡ ಭಾಷಣ, ನಿತುಶ್ರೀ (8ನೇ ತರಗತಿ) – ಜನಪದ ಗೀತೆ ದ್ವಿತೀಯ, ಸುಹಾಸ್ ಎಂ. ಬನಾಕರ್ (9ನೇ ತರಗತಿ) – ಚರ್ಚಾ ಸ್ಪರ್ಧೆ ದ್ವಿತೀಯ, ಸಾರಾ ನೀಮ (10ನೇ ತರಗತಿ) ರಂಗೋಲಿ ದ್ವಿತೀಯ, ಎಸ್.ಎ ದೀಕ್ಷಿತಾ ಜೈನ್ ಮತ್ತು ದಿಶಾ ಜಿ ರಾವ್ (10ನೇ ತರಗತಿ) – ರಸಪ್ರಶ್ನೆ ದ್ವಿತೀಯ, ನಿಕ್ಷೇಪ್ ರಾಜ್‌ಜೈನ್ (8ನೇ ತರಗತಿ) ಛದ್ಮವೇಷ ತೃತೀಯ, ಪಿ.ವಿ. ವಿಧಿಶಾ (9ನೇ ತರಗತಿ) ಭಾವಗೀತೆ ದ್ವಿತೀಯ, ದಿಶಾ ಜಿ. ರಾವ್ (10ನೇ ತರಗತಿ) ಧಾರ್ಮಿಕ ಪಠಣ ತೃತೀಯ, ಜಾನಪದ ನೃತ್ಯ ತೃತೀಯ (ಭಾಗವಹಿಸಿದ ತಂಡ ನಿಶಿತ್, ಜಿ. ದಯಾಮಣಿ ಟಿ.ಎಸ್, ಸುಹಾಸ್ ಎಂ. ಬನಾಕರ್, ತೃಷಾ, ವನೀಷಾ, ಚೈತ್ರ, ವಿದ್ವತ್ ಎಂ. ಶೆಟ್ಟಿ ಹಾಗೂ ಮೋಹಿತ್ ಗೌಡ), ಬಹುಮಾನಗಳನ್ನು ಪಡೆದುಕೊಳ್ಳುವುದರೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಶಿಕ್ಷಕಿ ವೀಣಾ ಆರ್. ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here