ಅರಿಯಡ್ಕ ಗ್ರಾ.ಪಂ. ಜಮಾಬಂದಿ

0

ಪುತ್ತೂರು : ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ 2021-2022ನೇ ಸಾಲಿನ ಜಮಾಬಂದಿ ಸೆ.23ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು. ಗ್ರಾಮ ಪಂಚಾಯತ್ ಲೆಕ್ಕ ಪತ್ರಗಳ ದಾಖಲೆ ಮತ್ತು ಹಿಂದಿನ ವರ್ಷ ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ನಡೆಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ರಶ್ಮಿ ಎಸ್.ಆರ್ ಜಮಾಬಂದಿ ಅಧಿಕಾರಿಯಾಗಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ರಾಜಗೋಪಾಲ್ ಎನ್.ಎನ್., ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಸುಬ್ರಹ್ಮಣ್ಯ, ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಂಚಾಯತ್ ಪಿ.ಡಿ.ಓ ಪದ್ಮಾಕುಮಾರಿ ಉಪಸ್ಥಿತರಿದ್ದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ದ.ಕ, ತಾ.ಪಂ ಪುತ್ತೂರು, ಗ್ರಾಮ ಪಂಚಾಯತ್ ಅರಿಯಡ್ಕ, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಸ್ವಚ್ಛತಾ ಹಿ ಸೇವಾ ಆಂದೋಲನ ಕಾರ್ಯಕ್ರಮದ ಅಂಗವಾಗಿ ಪ್ರಮಾಣ ವಚನ ಸ್ವೀಕರಿಸಲಾಯಿತು.

ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ರಾಜೇಶ್ ಮಣಿಯಾಣಿ ತ್ಯಾಗರಾಜೆ, ಮೋನಪ್ಪ ಪೂಜಾರಿ ಕೆರೆಮಾರು, ಅಬ್ದುಲ್ ರಹಿಮಾನ್ ಕಾವು, ಸದಾನಂದ ಮಣಿಯಾಣಿ ಕುರಿಂಜಮೂಲೆ, ನಾರಾಯಣ ನಾಯ್ಕ ಚಾಕೋಟೆ, ಜಯಂತಿ ಪಟ್ಟುಮೂಲೆ, ಅನಿತಾ ಆಚಾರಿಮೂಲೆ, ಮೀನಾಕ್ಷಿ ಪಾಪೆಮಜಲು, ವಿನಿತಾ ಬಳ್ಳಿಕಾನ, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪಾವತಿ ಮರತ್ತಮೂಲೆ, ರೇಣುಕಾ ಸತೀಶ್ ಕರ್ಕೆರಾ ಮಡ್ಯಂಗಳ, ಸಲ್ಮಾ ಕಾವು, ಪ್ರವೀಣ್ ಆಮ್ಚಿನಡ್ಕ, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ ಸಿಬ್ಬಂದಿ ಪ್ರಭಾಕರ ವಂದಿಸಿದರು.

LEAVE A REPLY

Please enter your comment!
Please enter your name here