ಪುತ್ತೂರು ಎ.ಪಿ.ಎಂ.ಸಿ. ನಿವೃತ್ತ ಕಾರ‍್ಯದರ್ಶಿ ಆಗಸ್ಟಿನ್ ಡಿ’ಸೋಜಾ ಬಿಳಿಯೂರು ನಿಧನ

0

ಉಪ್ಪಿನಂಗಡಿ: ಕೃಷಿ ಉತ್ಪನ್ನ ಮಾರುಕಟ್ಟೆ ಪುತ್ತೂರುನಲ್ಲಿ ಕರ‍್ಯದರ್ಶಿಯಾಗಿ ಸೇವೆ ಸಲ್ಲಿಸಿ ಈಚೆಗೆ ನಿವೃತ್ತಿ ಹೊಂದಿದ್ದ ಆಗಸ್ಟಿನ್ ಡಿ’ಸೋಜಾ (67 ವ.) ಕೆಲ ದಿನಗಳ ಅನಾರೋಗ್ಯದಿಂದ ಸೆ. 24ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಬಿಳಿಯೂರು ಗ್ರಾಮದ ಮಾಡತ್ತಾರು ನಿವಾಸಿಯಾಗಿರುವ ಆಗಸ್ಟಿನ್‌ರವರು ಕೃಷಿ ಉತ್ಪನ್ನ ಮಾರುಕಟ್ಟೆ ಕುಮಟಾ, ಚಿಕ್ಕಮಗಳೂರು, ಮಂಗಳೂರು ಸುಳ್ಯ ಮೊದಲಾದ ಕಡೆಯಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ 2015ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದರು.
ಆಗಸ್ಟಿನ್‌ರವರು ಪತ್ನಿ ಫೆಲ್ಸಿ ಡಿ’ಸೋಜಾ, ಪುತ್ರ ಆಕಾಶ್, ಪುತ್ರಿಯರಾದ ಮೇಘನಾ ಮತ್ತು ವರ್ಷರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here